Udayavni Special

“ಆಧುನಿಕತೆ ಮುಂದುವರಿದರೂ ಅಸ್ತಿತ್ವ ಉಳಿಸಿಕೊಂಡ ಆಕಾಶವಾಣಿ’


Team Udayavani, Feb 16, 2019, 12:45 AM IST

1502shirva2.jpg

ಶಿರ್ವ: ಪ್ರಸಾರ ಭಾರತಿ ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ಮಂಗಳೂರು, ರೋಟರಿ ಕ್ಲಬ್‌ ಶಿರ್ವ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಯೋಗದಲ್ಲಿ ಬಾನುಲಿ ರೈತ ದಿನಾಚರಣೆಯು ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಂಟಕಲ್ಲು ರೋಟರಿ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ|ಎಚ್‌.ಕೆಂಪೇಗೌಡ  ಕಾರ್ಯಕ್ರಮ ಉದ್ಘಾಟಿಸಿ  ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಹಲವು  ಸಂಘ ಸಂಸ್ಥೆ, ಇಲಾಖೆಗಳು ಪ್ರಯತ್ನ ನಡೆಸುತ್ತಿವೆ. ಯಾವುದೇ ಇಲಾಖೆ ಸುಲಭವಾಗಿ ರೈತರಿಗೆ ನೀಡ ಲಾಗದ ಮಾಹಿತಿಯನ್ನು ಆಕಾಶವಾಣಿ ರೇಡಿಯೋ ಕಾರ್ಯಕ್ರಮದ ಮೂಲಕ ಬಿತ್ತರಿಸುತ್ತಿದೆ.ಆಧುನಿಕತೆ ಮುಂದುವರಿ ದರೂ ಎಲ್ಲ ವರ್ಗದ ಜನರು ರೇಡಿಯೋ ಕಾರ್ಯಕ್ರಮ ಕೇಳುವ ಮೂಲಕ ಆಕಾಶವಾಣಿ ಮಹತ್ತರ ಪಾತ್ರ ವಹಿಸುತ್ತಿದ್ದು ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದರು. 

ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿ ಎಸ್‌.ಉಷಾಲತಾ  ರೈತರು ಬಾನುಲಿ ಕಾರ್ಯಕ್ರಮದಿಂದ ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಿತ ರಾಗಿದ್ದಾರೆ. ಆಕಾಶವಾಣಿ ಹೊಸ ತಂತ್ರಜ್ಞಾನ ದೊಂದಿಗೆ ರಾಸಾಯನಿಕ ಕೃಷಿಯ ಬದಲು ಸಾವಯವ ಕೃಷಿಯ ಧ್ವನಿಯಾಗಿ ಪ್ರಚುರ ಪಡಿಸಲು ಪ್ರಯತ್ನಿಸುತ್ತಿದ್ದು ವಿವಿಧ ಇಲಾಖೆಗಳ ಮೂಲಕ ರೈತರಿಗೆ ಮಾಹಿತಿ ನೀಡುತ್ತಿದೆ ಎಂದರು. 

ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಅಡೂxರು ಕೃಷ್ಣ ರಾವ್‌,  ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿದರು.
 
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು. ಕಾರ್ಯಕ್ರಮ ಸಮನ್ವಯಾಧಿಕಾರಿ ಕಾನ್ಸೆಪಾr  ಫೆರ್ನಾಂಡಿಸ್‌ ಸ್ವಾಗತಿಸಿದರು. ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ಶ್ಯಾಮ್‌ ಪ್ರಸಾದ್‌  ನಿರೂಪಿಸಿ, ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್‌ ಶಿರ್ವ ವಂದಿಸಿದರು.ಬಳಿಕ ಕೃಷಿಕರ ಆದಾಯ ಭದ್ರತೆಗೆ ಸಾವಯವ ಕೃಷಿ ಪ್ರಧಾನ ವಿಷಯವಾಗಿ ತಜ್ಞರ ಮಾರ್ಗದರ್ಶನದಲ್ಲಿ ಐದು ವಿಚಾರ ಗೋಷ್ಠಿ ನಡೆಯಿತು.

ತರಕಾರಿ ಬೆಳೆಗಳಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆಯ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಮನ್ವಯ ಅಧಿಕಾರಿ ಡಾ| ಬಿ. ಧನಂಜಯ, ದೇಶಿ ಹಸು ತಳಿಗಳು, ಗೋ ಉತ್ಪನ್ನಗಳ ಬಗ್ಗೆ ದೇಶಿ ಹಸು ಸಾಕಣೆದಾರ ನಾಗೇಶ ಪೈ ಕುಕ್ಕೆಹಳ್ಳಿ, ಬಾಳೆ ಬೆಳೆಯಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ಕೃಷಿ ಉತ್ಪಾದನಾ ಕೇಂದ್ರದ ಎಚ್‌.ಎಸ್‌. ಚೈತನ್ಯ, ಹಣ್ಣುಗಳ ಸಂರಕ್ಷಣೆ, ಮೌಲ್ಯವರ್ಧನೆಯ ಬಗ್ಗೆ ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ|ಸರಿತಾ ಹೆಗ್ಡೆ, ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಬಗ್ಗೆ ಕಾಸರಗೋಡು ಮುಳ್ಳೇರಿಯಾ ಕೆಆರ್‌ಎಸಿ ಅಗ್ರಿ ಬಿಸೆನೆಸ್‌ ಸೆಂಟರ್‌ನ ರಾಜಗೋಪಾಲ್‌ ಕೈಪಂಗಳ ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

1-rerrr

ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ: ಅನ್ಸಾರಿ ವಿರುದ್ಧ ಶರವಣ ಆಕ್ರೋಶ

cm-b-bommai

ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

PM Narendra Modi to visit Kedarnath on November 5, inaugurate several projects

ಹಲವು ಯೋಜನೆಗಳ ಉದ್ಘಾಟಣೆಗಾಗಿ ಕೇದಾರನಾಥಕ್ಕೆ ಪ್ರಧಾನ ಮಂತ್ರಿಗಳ ಭೇಟಿ

congress

ಅಲ್ಪಸಂಖ್ಯಾತರ ಕಾಳಜಿ ಎಚ್ ಡಿಕೆಗೆ ಫಲ ನೀಡುವುದಿಲ್ಲ: ಕೈ ನಾಯಕರು ಕಿಡಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

dinesh-gu

ಭಾಗವತ್‌ರ ಹೇಳಿಕೆ ಅರ್ಚಕರ ಬದುಕಿಗೆ ಕೊಳ್ಳಿ‌ ಇಡಲಿದೆ : ದಿನೇಶ್ ಗುಂಡೂರಾವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ  ಹಸಿರು ನಿಶಾನೆ

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

ನಿರ್ವಹಣೆ ಇಲ್ಲ ದೆ ಸೊರಗುತ್ತಿರುವ ಕೆರೆ-ಕಟ್ಟೆಗಳು

ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕೆರೆ-ಕಟ್ಟೆಗಳು

vijayapura news

ಗಮನ ಸೆಳೆದ ವಿಶಿಷ್ಟ ವಿನ್ಯಾಸದ ಬಸ್‌ ಶೆಲ್ಟರ್‌

ಮೂವರ ಸೆರೆ, ಕಳವು ಮಾಡಿದ್ದ ಆಟೋಗಳ ವಶ ಪೊಲೀಸರ ತಂಡಕ್ಕೆ ಡಿವೈಎಸ್‌ಪಿ ಅಭಿನಂದನೆ

ಕಳವು ಮಾಲು ಮಾರುತ್ತಿದ್ದವರ ಬಂಧನ

Vijaya Dashami celebration

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

davanagere news

ಬಿಎಸ್‌ವೈ ಪ್ರಚಾರಕ್ಕೆ ಬರ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.