Udayavni Special

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ


Team Udayavani, Nov 26, 2020, 2:49 AM IST

ವೇತನವಿಲ್ಲ, ವಿಶೇಷ ಆರ್ಥಿಕ ಪ್ಯಾಕೇಜ್‌ ಕೂಡ ಇಲ್ಲ

ಬೇಡಿಕೆಗೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಿರತ ಉಪನ್ಯಾಸಕರು.

ಕಾರ್ಕಳ: ಕೋವಿಡ್‌-19ನಿಂದ ರಾಜ್ಯದ ಪ.ಪೂರ್ವ ಕಾಲೇಜುಗಳು ಇನ್ನೂ ತೆರೆಯದ ಕಾರಣ ಅತಿಥಿ ಉಪನ್ಯಾಸಕರು 9 ತಿಂಗಳಿಂದ ಕೆಲಸ ಮತ್ತು ಸಂಪಾ ದನೆಯಿಲ್ಲದೇ ಸಂಕಷ್ಟ ದಲ್ಲಿದ್ದಾರೆ. ಅವರಿಗೆ ಕೋವಿಡ್‌ ಪ್ಯಾಕೇಜ್‌ ಕೂಡ ಸರಕಾರ ನೀಡಿಲ್ಲ.

ನೇಮಕಾತಿಯಲ್ಲೂ ನ್ಯಾಯ ಸಿಕ್ಕಿಲ್ಲ
ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯ ಕಾರಣ ಸರಕಾರ ಈಗಾಗಲೇ 1,200 ಉಪನ್ಯಾಸಕರನ್ನು ಖಾಯಂ ಆಗಿ ನೇಮಿಸಿದೆ. ಆದರೆ ಈ ವೇಳೆ ಅತಿಥಿ ಉಪ ನ್ಯಾ ಸಕರನ್ನು ಪರಿಗಣಿಸಿಲ್ಲ. ಹೀಗಾಗಿ ಅವರ ಉದ್ಯೋಗಕ್ಕೂ ಕತ್ತರಿ ಬೀಳುವ ಆತಂಕ ಎದುರಾಗಿದೆ. ರಾಜ್ಯದಲ್ಲಿ 18 ಮಂದಿ ಅತಿಥಿ ಉಪನ್ಯಾಸಕರು ಈಗಾಗಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ, ಮಾನಸಿಕ ಖನ್ನತೆ ಪ್ರಕರಣಗಳು ಹೆಚ್ಚುತ್ತಿವೆ.

ಶಾಸಕರ ಮೂಲಕವೂ ಮನವಿ
ಸೇವಾ ಭದ್ರತೆ ಹಾಗೂ ಇತರ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉಪನ್ಯಾಸಕರು ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಶಾಸಕರ ಮೂಲಕ ಮನವಿಯನ್ನೂ ನೀಡಿದ್ದಾರೆ. ವಿಶೇಷ ಆರ್ಥಿಕ ಪ್ಯಾಕೇಜಿಗೂ ಮನವಿ ಮಾಡಿದ್ದು ಇದುವರೆಗೂ ಯಾವುದೇ ಪರಿಣಾಮ ಬೀರಿಲ್ಲ.

ಬೇಡಿಕೆಗಳು
ಇಲಾಖೆಯ ಮುಂದಿನ ನೇಮಕಾತಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರಾತಿನಿಧ್ಯ ನೀಡಬೇಕು, ಅವರನ್ನು ಕೆಲಸದಿಂದ ತೆಗೆಯಬಾರದು, ಅತಿಥಿ ಶಿಕ್ಷಕರು/ಉಪನ್ಯಾಸಕರಿಗೆ ಕೋವಿಡ್‌ ವಿಶೇಷ ಪ್ಯಾಕೆಜ್‌ ಬದಲಿಗೆ ಬಾಕಿ ವೇತನವನ್ನು ನೀಡುವುದು, ಗೌರವಧನ ಹೆಚ್ಚಳ, ವರ್ಷದ 12 ತಿಂಗಳು ವೇತನ, ಆತ್ಮಹತ್ಯೆಗೈದ ಉಪನ್ಯಾಸಕರಿಗೆ ಪರಿಹಾರ, ದ್ವಿತೀಯ ಪಿಯು ಮೌಲ್ಯ ಮಾಪನದಲ್ಲಿ ಪರಿಗಣಿಸುವುದು. ಸೇವಾ ಪ್ರಮಾಣ ಪತ್ರ, ಗುರುತಿನ ಚೀಟಿ, ಇಪಿಎಫ್, ಇಎಸ್‌ಐ ಸೌಲಭ್ಯ ನೀಡುವುದು. ಶೇ. 60ಕ್ಕೂ ಅಧಿಕವಿರುವ ಮಹಿಳಾ ಉಪನ್ಯಾಸಕರಿಗೆ ಭದ್ರತೆ ಒದಗಿಸುವ ಬೇಡಿಕೆ ಪಟ್ಟಿ ಇದೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ
ಕೇಂದ್ರ ಸರಕಾರದ ನಿರ್ದೇಶನದಂತೆ ಅತಿಥಿ ಉಪ ನ್ಯಾಸಕರಿಗೆ ವೇತನ ನೀಡುವಂತೆ ಆಯನೂರು ಮಂಜುನಾಥ್‌ ಅಧಿವೇಶನ  ದಲ್ಲಿ ಆಗ್ರಹಿಸಿದ್ದರು. ಮುಖ್ಯ ಮಂತ್ರಿಗಳು ವೇತನ ಕೊಡುತ್ತೇವೆ ಎಂದು ಹೇಳಿ 5 ತಿಂಗಳ ವೇತನ ಬಿಡುಗಡೆ ಗೊಳಿಸಿದ್ದರು. ಆದರೆ ಅತಿಥಿ ಉಪ ನ್ಯಾಸಕರನ್ನು ಅದರಿಂದ ಹೊರಗಿಟ್ಟಿರು ವುದರಿಂದ ಅನ್ಯಾಯ ಮಾಡಿದಂತಾಗಿದೆ. ಡಿ. 7ರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ಬಗ್ಗೆ ಮತ್ತೆ ಚರ್ಚೆಯಾಗುವ ಸಾಧ್ಯತೆಗಳಿವೆ.

ಅತಿಥಿ ಉಪನ್ಯಾಸಕರನ್ನು ವಾರ್ಷಿಕವಾಗಿ ಆಯಾ ಅವಧಿಗೆ ನೇಮಿಸಲಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ಅವರ ಅವಧಿ ಪೂರ್ಣವಾಗಿದೆ. ಬಳಿಕ ನೇಮಕವಾಗಿಲ್ಲ. ವಿಶೇಷ ಆರ್ಥಿಕ ಪ್ಯಾಕೆಜ್‌ ವಿಚಾರ ಸರಕಾರ ಮಟ್ಟದಲ್ಲಿ ನಿರ್ಧರಿಸುವಂತದ್ದು.
– ಭಗವಂತ ಕಟ್ಟಿಮನಿ ಉಪನಿರ್ದೇಶಕರು ಪ.ಪೂ. ಶಿಕ್ಷಣ ಇಲಾಖೆ ಉಡುಪಿ

ಪ.ಪೂ. ಉಪನ್ಯಾಸಕರಿಗೆ ಆನ್‌ಲೈನ್‌ ಕ್ಲಾಸ್‌ ಮಾಡಬೇಕೆಂದು ಮಂಡಳಿ ಸುತ್ತೋಲೆ ಹೊರಡಿಸಿತ್ತು. ಅದರಂತೆ ಉಪನ್ಯಾಸಕರೆಲ್ಲರೂ ವಿದ್ಯಾರ್ಥಿಗಳಿಗೆ ವೀಡಿಯೋ ಮೂಲಕ ಪಠ್ಯದ ಚಟುವಟಿಕೆ ನಡೆಸಿದ್ದಾರೆ. ಅವರೆಲ್ಲರಿಗೂ ವೇತನ ನೀಡಬೇಕು.
– ರಾಜೇಂದ್ರ ಭಟ್‌, ಪಿ. ಮುಖ್ಯಸ್ಥರು ಅ. ಭಾ. ಶಿಕ್ಷಣ ಉಳಿಸಿ ರಾಜ್ಯ ಸಮಿತಿ, ಬೆಂಗಳೂರು

ರಾಜ್ಯದಲಿರುವ ಅತಿಥಿ ಉಪನ್ಯಾಸಕರು   3050
ಉಡುಪಿ ಜಿಲ್ಲೆ 73
ದ.ಕ. ಜಿಲ್ಲೆ 142
ಮಾಸಿಕ ವೇತನ- 9000
ಇತರ ಯಾವುದೇ ಸೌಲಭ್ಯಗಳಿಲ್ಲ

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗಡಿಭಾಗವನ್ನು ಕತ್ತರಿಸಿ ಇಬ್ಭಾಗ ಮಾಡಲು ಇನ್ನೂ ಯಾರೂ ಹುಟ್ಟಿಲ್ಲ: ಭಾಸ್ಕರರಾವ್ ಪೇರೆ ಪಾಟೀಲ

ಗಡಿಭಾಗವನ್ನು ಕತ್ತರಿಸಿ ಇಬ್ಭಾಗ ಮಾಡಲು ಇನ್ನೂ ಯಾರೂ ಹುಟ್ಟಿಲ್ಲ: ಭಾಸ್ಕರರಾವ್ ಪೇರೆ ಪಾಟೀಲ

ಕೃಷಿ ಕಾಯ್ದೆ ವಾಪಸ್ಸು ಪಡೆಯದಿದ್ದರೆ ದ್ವಿತೀಯ ಸ್ವಾತಂತ್ರ್ಯಚಳುವಳಿ: ಕೋಡಿಹಳ್ಳಿ ಚಂದ್ರಶೇಖರ್

ಕೃಷಿ ಕಾಯ್ದೆ ವಾಪಸ್ಸು ಪಡೆಯದಿದ್ದರೆ ದ್ವಿತೀಯ ಸ್ವಾತಂತ್ರ್ಯಚಳುವಳಿ: ಕೋಡಿಹಳ್ಳಿ ಚಂದ್ರಶೇಖರ್

ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ : ಆರೋಪಿ ಸಹಿತ 22 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ವಶ

ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ : ಆರೋಪಿ ಸಹಿತ 22 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ವಶ

ತುರ್ತು ಪ್ರತಿಕ್ರಿಯಾ ವಾಹನಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ತುರ್ತು ಪ್ರತಿಕ್ರಿಯಾ ವಾಹನಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್‌ :ಪತ್ನಿಯಿಂದ ಠಾಣೆಗೆ ದೂರು

ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್‌ :ಪತ್ನಿಯಿಂದ ಠಾಣೆಗೆ ದೂರು

ಅಮಿತ್ ಶಾ ಭೇಟಿಗೆ ಸಮಯ ಕೇಳಿದ 15ಕ್ಕೂ ಹೆಚ್ಚು ಅತೃಪ್ತ ಶಾಸಕರು

ಅಮಿತ್ ಶಾ ಭೇಟಿಗೆ ಸಮಯ ಕೇಳಿದ 15ಕ್ಕೂ ಹೆಚ್ಚು ಅತೃಪ್ತ ಶಾಸಕರು

ಏಮ್ಸ್‌ ಆಸ್ಪತ್ರೆಯ ಸ್ವತ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!

ಏಮ್ಸ್‌ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆಕ್ಕಟ್ಟೆ: 42 ಕೆರೆಗಳಿರುವ ಗ್ರಾಮದಲ್ಲಿ ನೀರಿಗೆ ಪರದಾಟ!

ತೆಕ್ಕಟ್ಟೆ: 42 ಕೆರೆಗಳಿರುವ ಗ್ರಾಮದಲ್ಲಿ ನೀರಿಗೆ ಪರದಾಟ!

ಉದ್ಯಾವರ: ಪ್ರೀತಿಸಿದ ಯುವಕನಿಂದ ವಂಚನೆ, ಬೆದರಿಕೆ; ಯುವತಿ ದೂರು

ಉದ್ಯಾವರ: ಪ್ರೀತಿಸಿದ ಯುವಕನಿಂದ ವಂಚನೆ, ಬೆದರಿಕೆ; ಯುವತಿ ದೂರು

01

ಕಡಲ ಕಿನಾರೆಯಲ್ಲಿ ಕೋವ್ಯಾಕ್ಸಿನ್ ಗೆ ಸ್ವಾಗತ ವೆಲ್ ಕಂ ವ್ಯಾಕ್ಸಿನ್ ಎಂದ ಸ್ಯಾಂಡ್ ಥೀಂ ಉಡುಪಿ

ಕಮಲಶಿಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಟೂರಿಸ್ಟ್‌ ಬಸ್‌: ಹಲವರಿಗೆ ಗಾಯ

ಕಮಲಶಿಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಟೂರಿಸ್ಟ್‌ ಬಸ್‌: ಹಲವರಿಗೆ ಗಾಯ

ಗಮನ ಸೆಳೆಯುತ್ತಿರುವ ಗ್ರಾಮೀಣ ಕರಕುಶಲ ಮೇಳ

ಗಮನ ಸೆಳೆಯುತ್ತಿರುವ ಗ್ರಾಮೀಣ ಕರಕುಶಲ ಮೇಳ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಕಂದಾಯ ಅಧಿಕಾರಿಗಳ ವಿಳಂಬ ನೀತಿಗೆ ಸದಸ್ಯರ ಅಸಮಾಧಾನ

ಕಂದಾಯ ಅಧಿಕಾರಿಗಳ ವಿಳಂಬ ನೀತಿಗೆ ಸದಸ್ಯರ ಅಸಮಾಧಾನ

ಮಂಗಳೂರಿನ ಪಾರ್ಕಿಂಗ್‌ ಸ್ಥಳಾವಕಾಶದ ಕೊರತೆಗೆ ಪರಿಹಾರ ಸಾಧ್ಯತೆಗಳು

ಮಂಗಳೂರಿನ ಪಾರ್ಕಿಂಗ್‌ ಸ್ಥಳಾವಕಾಶದ ಕೊರತೆಗೆ ಪರಿಹಾರ ಸಾಧ್ಯತೆಗಳು

ಕೊಡಗು: 396 ಮಂದಿಗೆ ಲಸಿಕೆ

ಕೊಡಗು: 396 ಮಂದಿಗೆ ಲಸಿಕೆ

Untitled-1

ಕಾಸರಗೋಡು: 323 ಮಂದಿಗೆ ಲಸಿಕೆ

ಬೀಫ್ ಸ್ಟಾಲ್‌ಗ‌ಳಿಗೆ ಬೆಂಕಿ ಹಚ್ಚಿದ  ಪ್ರಕರಣ: ಆರೋಪಿಯ ಬಂಧನ

ಬೀಫ್ ಸ್ಟಾಲ್‌ಗ‌ಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.