ಚೇರ್ಕಾಡಿ: ಅಪರಾಧ ಮುಕ್ತ ಸಂಕಲ್ಪ

Team Udayavani, Jun 20, 2019, 6:13 AM IST

ಬ್ರಹ್ಮಾವರ: ಜನಸಾಮಾನ್ಯರು ಕಾನೂನಿನ ಅರಿವು ತಿಳಿದುಕೊಂಡಿದ್ದು, ಪೊಲೀಸರೊಂದಿಗೆ ನಿಕಟ ಸ್ನೇಹ ಪರತೆಯಿಂದ ಇದ್ದಾಗ ಗ್ರಾಮದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಬ್ರಹ್ಮಾವರ ಪೊಲೀಸ್‌ ಉಪನಿರೀಕ್ಷಕ ರಾಘವೇಂದ್ರ ಸಿ. ಹೇಳಿದರು.

ಅವರು ಚೇರ್ಕಾಡಿ ಪಾರ್ತಿಬೆಟ್ಟು ಗೋಪಾಲಕೃಷ್ಣ ದೇವಸ್ಥಾನ ವಠಾರದಲ್ಲಿ ನಡೆದ ಪೊಲೀಸ್‌ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಪ್ರತಿ ಗ್ರಾಮಕ್ಕೊಬ್ಬ ಬೀಟ್‌ ಪೊಲೀಸ್‌ ನಿಯೋಜನೆಗೊಂಡಿದ್ದು, ನಾಗರಿಕರು ಅಗತ್ಯವಿದ್ದಾಗ ಅವರ ಸಹಕಾರ ಪಡೆಯಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಸ್ಥಾನದ ಮೊಕ್ತೇಸರ, ಉದ್ಯಮಿ ಸಂತೋಷ ಶೆಟ್ಟಿ ಅವರು ಅಪರಾಧ ತಡೆಗಟ್ಟುವಲ್ಲಿ ಇಂತಹ ಕಾರ್ಯಕ್ರಮ ಪರಿಣಾಮಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯತ್‌ ಅಧ್ಯಕ್ಷ ಹರೀಶ ಶೆಟ್ಟಿ, ಹಿರಿಯರಾದ ಶ್ರೀಪತಿ ನಕ್ಷತ್ರಿ ಉಪಸ್ಥಿತರಿದ್ದರು.

ಬೀಟ್‌ ಪೋಲೀಸ್‌ ಹರೀಶ್‌ ಪ್ರಸ್ತಾವನೆಗೈದರು. ಪಂಚಾಯತ್‌ ಸದಸ್ಯರಾದ ನಾರಾಯಣ ನಾಯ್ಕ ಸ್ವಾಗತಿಸಿ, ಕನ್ನಾರು ಕಮಲಾಕ್ಷ ಹೆಬ್ಟಾರ್‌ ನಿರೂಪಿಸಿ, ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ