94ಸಿಸಿ ವಿತರಣೆಯಲ್ಲಿ ರಾಜಕೀಯ; ಸದಸ್ಯನಿಂದ ಕಮಿಷನ್‌:ಆರೋಪ


Team Udayavani, Aug 2, 2017, 6:45 AM IST

aroopa.jpg

ಕಾರ್ಕಳ: ಇಲ್ಲಿನ ಪುರಸಭೆಯ ಸಾಮಾನ್ಯ ಸಭೆ ಮಂಗಳವಾರ ಪುರಸಭಾ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸಿಗಡಿಕೆರೆಯ ಆವರಣಗೋಡೆಗೆ ಅನುದಾನವನ್ನು ಪುರಸಭಾ ನಿಧಿಯಿಂದ ಸದಸ್ಯರ ಅನುಮತಿ ಇಲ್ಲದೇ ಇಡಲಾಗಿದೆ ಎನ್ನುವ ಆರೋಪ, ಸಭೆಯಲ್ಲಿನ ನಿರ್ಣಯಗಳನ್ನು ಮನಬಂದಂತೆ ಬರೆಯಲಾಗುತ್ತಿದೆ, ಅಧ್ಯಕ್ಷರ ಹೆಸರಿನಲ್ಲಿ ಸದಸ್ಯನೊಬ್ಬ ಕಮಿಷನ್‌ ಪಡೆಯುತ್ತಿದ್ದಾನೆ ಎನ್ನುವ ಆಕ್ರೋಶಗಳು ಮುಖ್ಯವಾಗಿ ಕೇಳಿಬಂದವು.

ಮಾಡುವುದೊಂದು, ಆಗುವುದೊಂದು
ಸಭೆಯಲ್ಲಿ ಆಗುವ ನಿರ್ಣಯಗಳು ಪುಸ್ತಕದಲ್ಲಿ ಬರೆಯುವಾಗ ಕತೆಯಂತೆ ಕಾಣುತ್ತಿದೆ. ಮನಬಂದಂತೆ ನಿರ್ಣಯ ಬರೆಯಲಾಗುತ್ತಿದೆ. ಕೆಲವೊಂದು ನಿರ್ಣಯಗಳನ್ನು ಮರು ತಿದ್ದುವುದು ಕಾಣುತ್ತಿದೆ. ಕಾಮಗಾರಿಗಳಿಗೆ ಬೇಕಾದ ಅಂದಾಜು ಪಟ್ಟಿಗಳನ್ನು ಒಟ್ಟಾರೆ ಬರೆಯಲಾಗುತ್ತಿದೆ. ಇನ್ನು ಮುಂದೆ ಸಭೆಯಲ್ಲಿ ಯಾವುದೆಲ್ಲಾ ನಿರ್ಣಯವಾಗುತ್ತದೋ ಅದನ್ನು ಇದ್ದ ಹಾಗೆಯೇ ಆ ಕ್ಷಣವೇ ಬರೆಯಬೇಕು ಎಂದು ಸದಸ್ಯ ಅಶ³ಕ್‌ ಅಹಮ್ಮದ್‌ ಸೂಚಿಸಿದರು. ಅಲ್ಲದೇ ಕೆಲವೊಂದು ನಿರ್ಣಯಗಳಿಗೆ ಅಧ್ಯಕ್ಷರು ಸಹಿಯೇ ಹಾಕಿಲ್ಲ ಎಂದು ಸದಸ್ಯ ಮೊಹಮ್ಮದ್‌ ಶರೀಫ್‌ ಪುಸ್ತಕವನ್ನು ಸಭೆಗೆ ತೋರಿಸಿದರು.ಬಳಿಕ ಸ್ಥಳದಲ್ಲಿಯೇ ಅಧ್ಯಕ್ಷರು ಸಹಿ ಮಾಡುವಂತೆ ಸೂಚಿಸಿದರು. ಆ ಬಳಿಕ ಅಧ್ಯಕ್ಷರು ಸಹಿ ಮಾಡಿದರು.

ವಿತರಣೆ ತಾ.ಪಂ.ನಲ್ಲಿ ಯಾಕೆ?
ಸದಸ್ಯ ನವೀನ್‌ ದೇವಾಡಿಗ ಮಾತನಾಡಿ,ಹಕ್ಕುಪತ್ರ ವಿತರಣೆಯಲ್ಲಿ ರಾಜಕೀಯ ನುಸುಳಿದೆ. ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ಫಲಾನುಭವಿಗಳಿಗೆ ಹಕ್ಕುಪತ್ರ ದೊರಕುವಂತೆ ಎಷ್ಟೋ ವರ್ಷಗಳ ಕಾಲ ಶ್ರಮ ವಹಿಸಿರುತ್ತಾರೆ, ಪುರಸಭಾ ವ್ಯಾಪ್ತಿಗೆ ಸಂಬಂಧಪಟ್ಟ 94ಸಿಸಿ ಹಕ್ಕುಪತ್ರಗಳನ್ನು ಪುರಸಭೆಯಲ್ಲಿ ಕೊಡದೇ ಗುಟ್ಟಾಗಿ ತಾ.ಪಂ.ನಲ್ಲಿ ಕೊಡಲಾಗಿದೆ ಇದರಲ್ಲಿ ತಾ.ಪಂ ಅಧ್ಯಕ್ಷೆ ಹಾಗೂ ಪುರಸಭಾ ಅಧ್ಯಕ್ಷರ ರಾಜಕೀಯ ಪ್ರೇರಿತ ಮನೋಭಾವ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಸದಸ್ಯರಿಗೆ ಕಳಂಕ
ಸದಸ್ಯ ಅಕ್ಷಯ್‌ ರಾವ್‌ ಮಾತನಾಡಿ, ಬೇರ್ಯಾವುದೇ ಸದಸ್ಯರ ಗಮನಕ್ಕೆ ಈ ವಿಚಾರ ತಿಳಿಸದೇ ಅಧ್ಯಕ್ಷರು ತಪ್ಪೆಸಗಿದ್ದಾರೆ.ಇದರಿಂದ ಎಲ್ಲ ಸದಸ್ಯರಿಗೂ ಕಳಂಕ ಬಂದಿದೆ ಎಂದರು. 

ಅವಾಂತರಕ್ಕೆ ಕಾರಣ
ಸದಸ್ಯ ವಿನ್ನಿಬೋಲ್‌ ಮೆಂಡೋನ್ಸಾ ಮಾತನಾಡಿ, ಈ ಪ್ರಕರಣದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಜವಾಬ್ದಾರಿ ಮರೆತದ್ದು ಅವಾಂತರಕ್ಕೆ ಕಾರಣವಾಗಿದೆ ಎಂದರು.

ಗಮನಕ್ಕೆ ಬಂದಿರಲಿಲ್ಲ
ಇದಕ್ಕುತ್ತರಿಸಿದ ಉಪಾಧ್ಯಕ್ಷ ಗಿರಿಧರ್‌ ನಾಯಕ್‌, 94ಸಿಸಿ ಹಕ್ಕುಪತ್ರ ವಿತರಣೆ ಕುರಿತು ನಮ್ಮ ಗಮನಕ್ಕೆ ಬಂದಿರಲಿಲ್ಲ.ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಹೋಗಿದ್ದೆವು ಎಂದು ಸಮರ್ಥಿಸಿಕೊಂಡರು.

ಅಕ್ಷಮ್ಯ
ಸದಸ್ಯ ನವೀನ್‌ ದೇವಾಡಿಗ ಮಾತನಾಡಿ, ತಹಶೀಲ್ದಾರ್‌  ಅನುಪಸ್ಥಿತಿಯಲ್ಲಿ ಆ ಕಾರ್ಯಕ್ರಮ ನಡೆದಿದೆ. ತಾ.ಪಂ.ಅಧ್ಯಕ್ಷೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿರುವುದು ಅಕ್ಷಮ್ಯ ಇದಕ್ಕೆ ಅವರು ಉತ್ತರ ನೀಡಬೇಕು ಎಂದು ಸವಾಲೆಸದರು.

ಅನುದಾನ ಪುರಸಭೆಗೇಕೆ?
ಸದಸ್ಯ ಶುಭದ್‌ರಾವ್‌ ಮಾತನಾಡಿ,ಸಿಗಡಿ ಕೆರೆಯನ್ನು ಶಾಸಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೊಳೆತ್ತಿದ್ದಾರೆ.ಸಾರ್ವಜನಿಕರಿಂದ ಸಂಗ್ರಹವಾದ ಹಣದಿಂದ ಎಲ್ಲಾ ಕಾರ್ಯವನ್ನು ಮಾಡಲಾಗಿದೆ.ಈಗ ಆವರಣಗೋಡೆಯನ್ನು ಪುರಸಭಾ ನಗರೋತ್ಥಾನ ನಿಧಿಯಿಂದ ಯಾಕೆ ನೀಡಬೇಕು? ಇದಕ್ಕೆ ಸದಸ್ಯರ ಸಹಮತ ಇಲ್ಲ. ಆವರಣ ಗೋಡೆಯನ್ನೂ ಕೂಡ ಸಾರ್ವಜನಿಕರ ಹಣದಿಂದಲೇ ಮಾಡಲಿ ಎಂದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಶಾಸಕರ ಮಾರ್ಗದರ್ಶನದಂತೆ ಆ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದರು. 

ಶಾಸಕರನ್ನೇ ಸಭೆಗೆ ಕರೆಯಿಸಿ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸುಭೀತ್‌ ಕುಮಾರ್‌, ಸಿಗಡಿಕೆರೆ ಹೊಳೆತ್ತುವ ಕಾರ್ಯದಲ್ಲಿ ಅವ್ಯವಹಾರವೇ ನಡೆದಿರಬಹುದು ಅದರ ಕುರಿತು ಮಾತನಾಡುತ್ತಿಲ್ಲ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.