
ವರ್ಗಾವಣೆಯಲ್ಲಿ ಆದ್ಯತೆ, ವಿನಾಯಿತಿ ಲೋಪ : ಉಪನ್ಯಾಸಕರ ಆಕ್ರೋಶ
Team Udayavani, Aug 6, 2022, 6:25 AM IST

ಉಡುಪಿ: ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆಯಲ್ಲಿ 50 ವರ್ಷ ಮೇಲ್ಪಟ್ಟ ಮಹಿಳೆ ಹಾಗೂ 55 ವರ್ಷ ಮೇಲ್ಪಟ್ಟ ಪುರುಷರಿಗೆ ನಿಯಮಾನುಸಾರ ವಿನಾಯಿತಿ ನೀಡದೇ ಇರುವುದಕ್ಕೆ ಹಿರಿಯ ಪ್ರಾಂಶುಪಾಲರು/ ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020ರಂತೆ ಇತ್ತೀಚೆಗೆ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ವರ್ಗಾವಣೆ ವಿನಾಯತಿ ಮತ್ತು ಆದ್ಯತೆಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡಿದೆ. ಉಪನ್ಯಾಸಕರ ಸಮರ್ಪಕ ಮರು ಹಂಚಿಕೆ ವರ್ಗಾವಣೆ ಮತ್ತು ಆದ್ಯತೆಯ ಕೋರಿಕೆ ವರ್ಗಾವಣೆ ಅಡಿಯಲ್ಲಿ ವಿನಾಯಿತಿಗಳನ್ನು ನೀಡಲಾಗುತ್ತದೆ. ಗಂಭೀರ ಆರೋಗ್ಯದ ಸಮಸ್ಯೆ ಹೊಂದಿರುವವರಿಗೆ, ವಿಧವೆ ಅಥವಾ ವಿಧುರರಿಗೆ, ವಿಚ್ಛೇದನ ಪಡೆದ ಪ್ರಾಂಶುಪಾಲ ಅಥವಾ ಉಪನ್ಯಾಸಕರು ಅವಲಂಬಿತ ಮಕ್ಕಳು, ಸೈನಿಕರಾಗಿ ಶಾಶ್ವತ ಅಂಗವಿಕಲ ಹಾಗೂ ಮೃತ ಸಂಗಾತಿಗೆ ಹಾಗೂ ಕೇಂದ್ರ, ರಾಜ್ಯ ಅಥವಾ ಅನುದಾನಿತ ಸಂಸ್ಥೆಯ ಉದ್ಯೋಗಿ ಸಂಗಾತಿಗೆ, 50 ವರ್ಷ ಪೂರೈಸಿದ ಮಹಿಳೆ, 55 ವರ್ಷ ಮೇಲ್ಪಟ್ಟ ಪುರುಷ, ಗರ್ಭಿಣಿ ಅಥವಾ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವವರಿಗೆ ವರ್ಗಾವಣೆಯಲ್ಲಿ ವಿನಾಯಿತಿ/ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಾಗಿದೆ.
ಆದರೆ 50 ವರ್ಷ ಮೇಲ್ಪಟ್ಟ ಮಹಿಳೆ ಮತ್ತು 55 ವರ್ಷ ಮೇಲ್ಪಟ್ಟ ಪುರುಷ ಅಭ್ಯರ್ಥಿಗಳಿಗೆ ವರ್ಗಾವಣೆ ಕರಡು ಪಟ್ಟಿಯಲ್ಲಿ ಈ ಆದ್ಯತೆ ಅಥವಾ ವಿನಾಯಿತಿ ನೀಡಿಲ್ಲ. ನಿಯಮಕ್ಕೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲಾಖೆಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಅರ್ಹ ಹಿರಿಯ ಪ್ರಾಂಶುಪಾಲ, ಉಪನ್ಯಾಸಕರು ಆಗ್ರಹಿಸಿದ್ದಾರೆ.
ವಯಸ್ಸಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಇಲಾಖೆ ಸೂಚಿಸಿರುವಂತೆ ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್ ಕೂಡ ಮಾಡಿದ್ದೇವೆ. ಹಾಗೆಯೇ ಕರಾವಳಿ ಭಾಗದ ಕೆಲವು ಕಾಲೇಜಿನ ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರು ಕೂಡ ಇಲಾಖೆಯ ನಿರ್ದೇಶಕರಿಗೆ ಈ ಸಂಬಂಧ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ನಿಯಮದಲ್ಲಿ ನೀಡಿ ವರ್ಗಾವಣೆ ಸಂದರ್ಭದಲ್ಲಿ ವಿನಾಯಿತಿ ನೀಡದೇ ಇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನದ ಬ್ರೇಸ್ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಶಿರ್ವ ಆರೋಗ್ಯ ಮಾತಾ ಚರ್ಚ್ ವಾರ್ಷಿಕ ಮಹೋತ್ಸವ ಸಂಪನ್ನ

ತ್ರಿಶಾ ಕ್ಲಾಸಸ್: ಸಿಎ ಫೈನಲ್, ಸಿ.ಎಸ್.ಇ.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ

ಶಿವಪಾಡಿಯಲ್ಲಿ ಶಿವ ಚಿತ್ತಾರ: ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ಉಡುಪಿಯಲ್ಲಿ ಐಟಿ ಪಾರ್ಕ್ಗೆ ಆಗ್ರಹ: ಕೇಂದ್ರಕ್ಕೆ ಪೇಜಾವರ ಶ್ರೀಗಳ ಪತ್ರ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಗಿಲ್ ಶತಕದ ಕಮಾಲ್; ನ್ಯೂಜಿಲೆಂಡ್ ಗೆ ಸೋಲಿನ ಶಾಕ್ ನೀಡಿ ಸರಣಿ ಗೆದ್ದ ಟೀಮ್ ಇಂಡಿಯಾ

ಚಿನ್ನದ ಬ್ರೇಸ್ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್