ನಿಯಮ ಪಾಲಿಸದವರಿಗೆ ಎಸ್ಪಿ ನಿಶಾ ಜೇಮ್ಸ್‌ ಅವರಿಂದ ಗುಲಾಬಿ

Team Udayavani, Jul 11, 2019, 5:02 AM IST

ಮಲ್ಪೆ: ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಲ್ಪೆ ಪೊಲೀಸ್‌ ಠಾಣೆಯ ವತಿಯಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಜು. 10ರಂದು ಮಲ್ಪೆಯಲ್ಲಿ ನಡೆಯಿತು.

ಉಡುಪಿ ಎಸ್ಪಿ ನಿಶಾ ಜೇಮ್ಸ್‌ ಅವರು ಕಾಲೇಜಿನ ವಿದ್ಯಾರ್ಥಿಗಳ ಜತೆಯಲ್ಲಿ ಸೀಟ್ ಬೆಲ್r ಮತ್ತು ಹೆಲ್ಮಟ್ ಧರಿಸದ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಸಂಚಾರ ನಿಯಮಗಳ ಕುರಿತು ಜನಜಾಗೃತಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಮತ್ತು ಹೆಲ್ಮೆಟ್ ಧರಿಸಿ ಬೈಕ್‌ ಚಲಾಯಿಸಲು ವಾಹನ ಸವಾರರಿಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಗುಲಾಬಿ ಹೂ ಮತ್ತು ಕರಪತ್ರವನ್ನು ಕೊಡಿಸಿ ಜಾಗೃತಿ ಮೂಡಿಸಲಾಗುತ್ತದೆ. ಬೈಕ್‌ ಸವಾರರು ಇನ್ನು ಮುಂದೆ ಹೆಲ್ಮೆಟನ್ನು ಖಡ್ಡಾಯವಾಗಿ ಧರಿಸಬೇಕು. ನಿಯಮ ಪಾಲಿಸದಿದ್ದರೆ ದಂಡವಿಧಿಸುವುದು ಅನಿವಾರ್ಯವಾಗುತ್ತದೆ. ಕಾರು ಚಲಾಯಿಸುವವರು ಸೀಟ್ಬೆಲ್r ಹಾಕಿಕೊಳ್ಳಬೇಕು. ಜನನಿಬಿಡ ಪ್ರದೇಶದಲ್ಲಿ ನಿಧಾನವಾಗಿ ಚಲಿಸಬೇಕು. 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದರಿಂದ ಏಕಾಗ್ರತೆಗೆ ಭಂಗ ಉಂಟಾಗಿ ಅಪಘಾತಕ್ಕೆ ಕಾರಣವಾಗುತ್ತದೆ ಎಂದರು.

ಶಿಕ್ಷಣ ಇಲಾಖೆಯ ಪ್ರಭಾರ ಡಿಡಿಪಿಯು ವಿಲಾಸ್‌ ಕುಮಾರ್‌, ಕಾಲೇಜಿನ ಪ್ರಾಂಶುಪಾಲ ಪಿ. ವರ್ಗಿಸ್‌, ಪ್ರೌಢಶಾಲಾ ಹಿರಿಯ ಶಿಕ್ಷಕಿ ವಿನೋದ ಎಂ., ಮಲ್ಪೆ ಠಾಣಾ ಎಎಸ್‌ಐ ರತ್ನಾಕರ, ಹೆಡ್‌ ಕಾನ್ಸ್‌ಸೇrಬಲ್ ಜಯಕರ, ಕಾನ್ಸ್‌ಸೇrಬಲ್ಗಳಾದ ರವಿರಾಜ್‌, ಗುರುಲಿಂಗಪ್ಪ, ಸದ್ದಾಂ ಹುಸೇನ್‌, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸುರೇಶ್‌ ಬಿ. ಕರ್ಕೇರ, ಕೋಶಾಧಿಕಾರಿ ಮಹೇಶ್‌ ಕುಮಾರ್‌, ನಗರಸಭಾ ಸದಸ್ಯ ಸುಂದರ್‌ ಕಲ್ಮಾಡಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ