ಸರ್ವರ್‌ ಸಮಸ್ಯೆ: ನೋಂದಣಿಗೆ ಅಡ್ಡಿ

Team Udayavani, Dec 7, 2019, 5:15 AM IST

ಉಡುಪಿ/ಮಂಗಳೂರು: ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆ ಸಹಿತ ರಾಜ್ಯಾದ್ಯಂತ ಶುಕ್ರವಾರ ಸರ್ವರ್‌ ಸಮಸ್ಯೆಯಿಂದಾಗಿ ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಯಿತು.

ಉಡುಪಿಯಲ್ಲಿ ಬೆಳಗ್ಗಿನಿಂದಲೇ ಸರ್ವರ್‌ ಸಮಸ್ಯೆ ಉಂಟಾಯಿತು. ಬಂದ ಗ್ರಾಹಕರು ಕಾರಿಡಾರ್‌ನಲ್ಲಿ ಕುಳಿತು ಕಾಲ ಕಳೆಯಬೇಕಾಯಿತು. ಅಪರಾಹ್ನ 2.30ರ ಬಳಿಕ ಸಮಸ್ಯೆ ಬಗೆಹರಿಯಿತು. ಮೊದಲೇ ದಿನಾಂಕ ನಿಗದಿಪಡಿಸಿಕೊಂಡು ದೂರದೂರು ಗಳಿಂದ ಬಂದ ಗ್ರಾಹಕರಿಗೆ ಹಿಂದೆಯೂ ಇಂತಹ ಕಹಿ ಅನುಭವ ವಾಗಿತ್ತು. ಇಂತಹವರು ಮರುದಿನ ವಾಪಸು ಹೋಗಲು ಟಿಕೆಟ್‌ ಕಾದಿರಿಸುತ್ತಿದ್ದು ಪರಿತಪಿಸು ತ್ತಿದ್ದರು. ಸರ್ವರ್‌ ಸಮಸ್ಯೆಯಿಂದ ಸರಕಾರಕ್ಕೂ ನಷ್ಟ ಉಂಟಾಗುತ್ತಿದೆ.

ಮಂಗಳೂರಿನಲ್ಲೂ ಸಮಸ್ಯೆ
ಮಂಗಳೂರಿನ ಜಿಲ್ಲಾ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲೂ ಜನರು ಸಮಸ್ಯೆ ಎದುರಿಸುವಂತಾಯಿತು.

ನಗರದ ಮಿನಿ ವಿಧಾನಸೌಧದಲ್ಲಿ ರುವ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ದಿಂದಲೇ ಸಮಸ್ಯೆ ಆರಂಭವಾಗಿತ್ತು. ಶುಕ್ರವಾರ ಮಧ್ಯಾಹ್ನ ದವರೆಗೂ ಸರ್ವರ್‌ ಸಮಸ್ಯೆ ಸರಿಯಾಗಿರಲಿಲ್ಲ. ಆದರೆ ನಗರ ಕಚೇರಿಯ ಸರ್ವರ್‌ ಸಂಜೆಯ ವೇಳೆ ಸರಿಯಾದರೂ ಗ್ರಾಮಾಂತರ ಕಚೇರಿಯ ಸರ್ವರ್‌ ಸಂಜೆಯವರೆಗೂ ಸರಿ ಇರಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಧಿಕಾರಿಗಳಲ್ಲಿ ವಿಚಾರಿಸಿದಾಗ, ರಾಜ್ಯ ಮಟ್ಟದಲ್ಲಿ ಸರ್ವರ್‌ ಸಮಸ್ಯೆಯಿಂದ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ