Udayavni Special

ನಕ್ಸಲ್‌ ನಿಗ್ರಹ ಪಡೆಯಿಂದ ಸಮಾಜಮುಖೀ ಕಾರ್ಯ

ಆರೋಗ್ಯ ಸೇವೆಯಲ್ಲಿ ತೊಡಗಿದ ಎಎನ್‌ಎಫ್

Team Udayavani, Jul 2, 2019, 5:50 AM IST

0107UDPS2

ವಿಶೇಷ ವರದಿ-ಉಡುಪಿ: ನಕ್ಸಲ್‌ ಚಟುವಟಿಕೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಎನ್‌ಎಫ್ ಹೆಜ್ಜೆಯಿರಿಸಿರುವಂತೆಯೇ, ಜನರ ವಿಶ್ವಾಸಗಿಟ್ಟಿಸಿಕೊಳ್ಳಲು ಮುಂದಾಗಿದೆ.

ಸದ್ಯ ನಕ್ಸಲರ ಉಪಟಳವೂ ಸಾಕಷ್ಟು ಕಡಿಮೆಯಾದ್ದರಿಂದ ಎಎನ್‌ಎಫ್ ಸಾಮಾಜಿಕ ಸೇವಾ ಚಟವಟಿಕೆಗೆ ಮುಂದಾಗಿದೆ.

ಆರೋಗ್ಯ ಸೇವೆ
ಕುದುರೆಮುಖ ಅಭಯಾರಣ್ಯ, ಮೂಕಾಂಬಿಕಾ ಅಭಯಾರಣ್ಯ, ವಂಡ್ಸೆ, ಜಡಕಲ್‌, ಅಮಾಸೆಬೈಲ್‌, ಹೆಬ್ರಿ, ಕಬ್ಬಿನಾಲೆ, ನಾಡಪಾಲ್‌, ಈದು ಮುಂತಾದ ನಕ್ಸಲ್‌ ಪೀಡಿತ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತ ಸ್ಥಳಗಳು. ಈ ಭಾಗದ ಜನರಿಗೆ ಶೀತ,ಜ್ವರ ಬಂದರೂ 40 ಕಿ.ಮೀ. ನಷ್ಟು ದೂರ ಚಿಕಿತ್ಸೆಗೆ ತೆರಳಬೇಕು.

ಮಳೆಗಾಲದಲ್ಲಿ ಇವರ ಕಷ್ಟ ಇನ್ನೂ ಹೆಚ್ಚು. ಇದನ್ನು ಮನಗಂಡಿರುವ ನಕ್ಸಲ್‌ ನಿಗ್ರಹ ಪಡೆ ಮಳೆಗಾಲದ ಆರಂಭದಲ್ಲೇ ನಕ್ಸಲ್‌ ಪೀಡಿತ ಪ್ರದೇಶದ ಜನರ ಆರೋಗ್ಯ ತಪಾಸಣೆ ಸಹಿತ ಇನ್ನಿತರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಚಟುವಟಿಕೆ ನಡೆಸಿದ್ದಾರೆ. ತಜ್ಞ ವೈದ್ಯರಿಂದ ಚಿಕಿತ್ಸೆಯನ್ನೂ ನೀಡಲು ಉದ್ದೇಶಿಸಲಾಗಿದೆ.

ಜನರಿಗೆ ಸಹಕಾರ
ಈಗಾಗಲೇ ಬೇರೆ ಬೇರೆ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಆಯೋಜಿತವಾಗಿವೆ. ಹೀಗಾಗಿ ಆಸ್ಪತ್ರೆಗೆ ಹತ್ತಾರು ಕಿ.ಮೀ ನಡೆದೇ ಹೋಗಬೇಕಿದ್ದ ಗ್ರಾಮಸ್ಥರು, ಹಿರಿಯರು, ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆಯುತ್ತಿದ್ದಾರೆ.

ಪೊಲೀಸರಿಗೆ ಬೆದರಿಕೆ ಹಾಕಿದ್ದರು!
ಉಡುಪಿ ಜಿಲ್ಲೆಯ ಹೆಬ್ರಿ ವ್ಯಾಪ್ತಿಯ ಮುಟ್ಲುಪಾಡಿ, ಮತ್ತಾವು, ನೀರಾಣಿ, ಮುದ್ರಾಡಿ, ಬಚ್ಚಪ್ಪು, ಕಂಕಣಾರಬೆಟ್ಟು, ಸೋಮೇಶ್ವರ, ಸೀತಾನದಿ, ಕೈಕಂಬ ಗ್ರಾಮಗಳಲ್ಲಿ ಈ ಹಿಂದೆ ನಕ್ಸಲರು ಸಂಚರಿಸುತ್ತಿದ್ದು, ಅದರಲ್ಲೂ ಮತ್ತಾವು ನಲ್ಲಿ ಪೊಲೀಸ್‌ ವಾಹನ ಸಂಚರಿಸುವ ರಸ್ತೆಯಲ್ಲಿ ನಾಡ ಬಾಂಬ್‌ ಸ್ಫೋಟಿಸುವ ಮೂಲಕ ನಕ್ಸಲರು ಪೊಲೀಸರಿಗೆ ಬೆದರಿಕೆಯನ್ನೂ ಹಾಕಿದ್ದರು. ನಕ್ಸಲರ ಸಂಚಾರ ಇದ್ದ ಈ ಗ್ರಾಮಗಳನ್ನು ನಕ್ಸಲ್‌ ಪೀಡಿತ ಎಂದು ಘೋಷಿಸಲಾಗಿತ್ತು.

ನಕ್ಸಲ್‌ ಚಟುವಟಿಕೆ ಇಳಿಮುಖ
ಜಿಲ್ಲೆಯ ಅರಣ್ಯದ ತಪ್ಪಲು ಪ್ರದೇಶ ನಕ್ಸಲ್‌ ಪೀಡಿತ ಪ್ರದೇಶವಾದರೂ ಸದ್ಯ ನಕ್ಸಲ್‌ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಇದರಿಂದ ಕೆಂಪು ಕ್ರಾಂತಿಕಾರಿಗಳ ಮಟ್ಟ ಹಾಕುವ ಕಾಯಕಕ್ಕೆ ನಿಯೋಜಿತಗೊಂಡ ಎಎನ್‌ಎಫ್ ಪಡೆಗೆ ಸದ್ಯ ತಲೆನೋವು ಕಡಿಮೆಯಾಗಿದೆ. ಇದೇ ಕಾರಣದಿಂದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಾಮಾಜಿಕ ಸೇವೆಗೆ ಎಎನ್‌ಎಫ್ ಅಧಿಕಾರಿಗಳು ಮುಂದಾಗಿದ್ದು, ಜನರ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.

ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ
ನಕ್ಸಲ್‌ ಕಾರ್ಯಾಚರಣೆಗಳನ್ನೆಲ್ಲ ನೋಡಿ ಜನರು ಭಯಭೀತರಾಗಿದ್ದಾರೆ. ಅವರನ್ನು ಸಮಾಜಕ್ಕೆ ಇನ್ನಷ್ಟು ಹತ್ತಿರವಾಗಿಸುವ ಸಲುವಾಗಿ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರ ಪ್ರಾರಂಭಿಕ ಹಂತವಾಗಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ನುರಿತ ವೈದ್ಯರಿಂದ ಚಿಕಿತ್ಸೆಯನ್ನೂ ನೀಡಲಾಗಿದೆ. ಸುಮಾರು 300ರಷ್ಟು ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ.
-ಗಣೇಶ್‌ ಹೆಗಡೆ, ಡಿವೈಎಸ್‌ಪಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಜುಲೈಯಲ್ಲಿ ಪ್ರೌಢ, ಸೆಪ್ಟಂಬರ್‌ ಬಳಿಕ ಪ್ರಾಥಮಿಕ ಶಾಲೆ ಆರಂಭ?

ಜುಲೈಯಲ್ಲಿ ಪ್ರೌಢ, ಸೆಪ್ಟಂಬರ್‌ ಬಳಿಕ ಪ್ರಾಥಮಿಕ ಶಾಲೆ ಆರಂಭ?

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ?

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ?

Rama-Mandir-730

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಸಿಕ್ಕಿತು ಚಾಲನೆ

ಜೂ. 1ರಿಂದ ದೇಗುಲ ದರ್ಶನ ; ಮಹತ್ವದ ತೀರ್ಮಾನ; ಸಾಮಾಜಿಕ ಅಂತರ, ಶುಚಿತ್ವ ಕಡ್ಡಾಯ

ಜೂ. 1ರಿಂದ ದೇಗುಲ ದರ್ಶನ ; ಮಹತ್ವದ ತೀರ್ಮಾನ; ಸಾಮಾಜಿಕ ಅಂತರ, ಶುಚಿತ್ವ ಕಡ್ಡಾಯ

ಲಡಾಖ್‌ ಅಖಾಡಕ್ಕೆ ಮೋದಿ ; ಟಿಬೆಟ್‌ ಅಂಚಿನಲ್ಲಿ ಚೀನೀ ರಹಸ್ಯ ವಾಯುನೆಲೆ ಬಹಿರಂಗ

ಲಡಾಖ್‌ ಅಖಾಡಕ್ಕೆ ಮೋದಿ ; ಟಿಬೆಟ್‌ ಅಂಚಿನಲ್ಲಿ ಚೀನೀ ರಹಸ್ಯ ವಾಯುನೆಲೆ ಬಹಿರಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಉಡುಪಿ ಜಿಲ್ಲೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ; 5,968 ಮಾದರಿ ವರದಿ ನಿರೀಕ್ಷೆಯಲ್ಲಿ

ಉಡುಪಿ ಜಿಲ್ಲೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ; 5,968 ಮಾದರಿ ವರದಿ ನಿರೀಕ್ಷೆಯಲ್ಲಿ

ಕೋವಿಡ್ ಪತ್ತೆ: ಹೇರೂರು, ಮೂಡುಬೆಟ್ಟು ಸೀಲ್‌ಡೌನ್‌

ಕೋವಿಡ್ ಪತ್ತೆ: ಹೇರೂರು, ಮೂಡುಬೆಟ್ಟು ಸೀಲ್‌ಡೌನ್‌

ಉಡುಪಿ: ಪೊಲೀಸರಲ್ಲೂ ಸೋಂಕು ಪತ್ತೆ ; ಇಲಾಖೆಯಿಂದ ಹಲವು ಮುನ್ನೆಚ್ಚರಿಕೆ

ಉಡುಪಿ: ಪೊಲೀಸರಲ್ಲೂ ಸೋಂಕು ಪತ್ತೆ ; ಇಲಾಖೆಯಿಂದ ಹಲವು ಮುನ್ನೆಚ್ಚರಿಕೆ

ಉಡುಪಿಯಲ್ಲಿ ಮುಂದುವರಿದ ಕೋವಿಡ್ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಇಂದು ಮೂವರಲ್ಲಿ ಕೋವಿಡ್ ಸೋಂಕು ದೃಢ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

deshiya

ದೇಶೀಯ ವಿಮಾನ ಹಾರಾಟ; ಪ್ರಯಾಣಿಕರು ಇಳಿಮುಖ

val-aadha

ವಲಸಿಗರು ಆಧಾರ್‌ ಕಾರ್ಡ್‌ ಕೊಟ್ಟರೆ ಪಡಿತರ: ಗೋಪಾಲಯ್ಯ

maavu-marukatte

ಮಾವು ಮಾರುಕಟ್ಟೆ ಆರಂಭಕ್ಕೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.