ಏಸು ಕ್ರಿಸ್ತರ ಆದರ್ಶ ನಮ್ಮದಾಗಲಿ: ಚಿಕ್ಕಮಗಳೂರು ಬಿಷಪ್‌

ಅತ್ತೂರು ಜಾತ್ರೆ ಎರಡನೇ ದಿನ

Team Udayavani, Jan 28, 2020, 1:46 AM IST

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಎರಡನೇ ದಿನ ಚಿಕ್ಕಮಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿಸ್ವಾಮಿ ಬಲಿಪೂಜೆ ನೆರವೇರಿಸಿದರು.

ಬಳಿಕ ಸಂದೇಶ ನೀಡಿದ ಅವರು, ನಮ್ಮ ಸತ್ಕಾರ್ಯಗಳು ದೇವರ ಅನುಗ್ರಹಕ್ಕೆ ಪಾತ್ರವಾಗುವುದು. ಏಸುಕ್ರಿಸ್ತರು ಇಡೀ ಸಮಾಜದ ಒಳಿತನ್ನು ಬಯಸಿದ್ದರು. ನಾವೂ ಕೂಡ ಪರಸ್ಪರ ಪ್ರೀತಿ ಹಂಚಿ ಏಸು ಕ್ರಿಸ್ತರ ಆದರ್ಶವನ್ನು ಅನುಕರಣೆ ಮಾಡಬೇಕು ಎಂದರು.

ಬಸ್ರೂರು ಧರ್ಮಕೇಂದ್ರದ ಧರ್ಮಗುರು ವಂ| ಚಾರ್ಲ್ಸ್‌ ನೊರೊನ್ಹಾ, ಬೆಳ್ತಂಗಡಿ ಚರ್ಚ್‌ನ ವಲಯ ಪ್ರಧಾನ ಧರ್ಮಗುರು ವಂ| ಬೊನವೆಂಚರ್‌ ನಜ್ರೆತ್‌, ಮುಕಮರ್‌ ಚರ್ಚ್‌ ಧರ್ಮಗುರು ವಂ| ಲೂಯಿಸ್‌ ಡೇಸಾ ರಾತ್ರಿಯ ಬಲಿಪೂಜೆ ನೆರವೇರಿಸಿದರು.

ಇಂದಿನ ಕಾರ್ಯಕ್ರಮ
ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಒಟ್ಟು 11 ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10.30ಕ್ಕೆ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೊಸ್‌ ಕಲಯಿಲ್‌ ಹಾಗೂ ಸಂಜೆ 6ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್‌ ಸೆರಾವೊ ಅವರಿಂದ ಕನ್ನಡ ಭಾಷೆಯಲ್ಲಿ ಬಲಿಪೂಜೆ ನೆರವೇರಲಿದೆ. 7ಕ್ಕೆ ಕೊಂಕಣಿಯಲ್ಲಿ ಬಲಿ ಪೂಜೆ ನಡೆಯಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ