Thailand Masters Athletics; ಕೂಲಿ ಕಾರ್ಮಿಕ ಮಾಸ್ಟರ್‌ ಆ್ಯತ್ಲೆಟಿಕ್ಸ್‌ಗೆ ಆಯ್ಕೆ

ತೆಂಗಿನ ಮರ ಏರುವ ವಿಟ್ಠಲ ಅಂತಾರಾಷ್ಟ್ರೀಯ ಮಟ್ಟಕ್ಕೇರಿದರಲ್ಲ

Team Udayavani, Jan 31, 2024, 6:50 AM IST

Thailand Masters Athletics; ಕೂಲಿ ಕಾರ್ಮಿಕ ಮಾಸ್ಟರ್‌ ಆ್ಯತ್ಲೆಟಿಕ್ಸ್‌ಗೆ ಆಯ್ಕೆ

ಕೋಟ: ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎನ್ನುವ ಮಾತಿಗೆ ಸಾಕ್ಷಿ ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಗುಂಡ್ಮಿಯ 60ರ ಹರೆಯದ ವಿಟ್ಠಲ ಶೆಟ್ಟಿಗಾರ್‌. ಕೂಲಿ ವೃತ್ತಿ ಮಾಡುತ್ತಲೇ ಕಠಿನ ಅಭ್ಯಾಸ ಬಲದಿಂದ 2024 ಫೆ. 18ರಂದು ಥೈಲ್ಯಾಂಡ್‌ನ‌ಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಾಸ್ಟರ್‌ ಆ್ಯತ್ಲೆಟಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಬಡತನದಲ್ಲಿ ಜೀವನ ನಡೆಸುವ ಶೆಟ್ಟಿಗಾರ್‌ರಿಗೆ ಮೂವರು ಹೆಣ್ಣು ಮಕ್ಕಳು. ಕೂಲಿಯೇ ಜೀವನಾಧಾರ. ತೆಂಗಿನ ಮರವೇರಿ ಕಾಯಿ ಕೀಳುವ ಜತೆಗೆ ಕೃಷಿ ಕಾರ್ಮಿಕರಾಗಿಯೂ ದುಡಿಯುತ್ತಾರೆ. ಬಾಲ್ಯದಿಂದಲೂ ಇವರಿಗೆ ಕ್ರೀಡೆಯ ಕುರಿತು ಆಸಕ್ತಿ ಇದ್ದರೂ ಕಿರಿಯ ವಯಸ್ಸಿಗೆ ಶಿಕ್ಷಣವನ್ನು ಮೊಟಕುಗೊಳಿಸಿದೆ.

ಹೀಗಾಗಿ ಕ್ರೀಡೆಯ ಲ್ಲಿ ಮುಂದುವರಿಯಲಿಲ್ಲ. ಅನಂತರ ಇವರ ಪ್ರತಿಭೆಯನ್ನು ಗುರುತಿಸಿದ ಸ್ನೇಹಿತರೊಬ್ಬರು ಮಾಸ್ಟರ್‌ ಆ್ಯತ್ಲೆಟಿಕ್‌ನಲ್ಲಿ ಭಾಗವಹಿಸುವಂತೆ ಸಲಹೆ ನೀಡಿದ್ದರು. ಅದರಂತೆ 15 ವರ್ಷದ ಹಿಂದೆ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆ್ಯತ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಗೆದ್ದ ವರು ಹಿಂದಿರುಗಿ ನೋಡಲೇ ಇಲ್ಲ,ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ವೇಗದ ನಡಿಗೆ, ಮ್ಯಾರಥಾನ್‌ನಲ್ಲಿ ಭಾಗವಹಿ ಸುತ್ತಿದ್ದಾರೆ. ಇದುವರೆಗೆ ಹಾಫ್ ಮ್ಯಾರಥಾನ್‌ನಲ್ಲಿ 31 ಪದಕ, 10 ಸಾವಿರ ಮೀಟರ್‌ನಲ್ಲಿ 25ಕ್ಕೂ ಹೆಚ್ಚು ಪದಕ, 45 ಕಿಲೋಮೀಟರ್‌ ಫ‌ುಲ್‌ ಮ್ಯಾರಥಾನ್‌ನಲ್ಲಿ 1 ಪದಕ ಸೇರಿದಂತೆ 100 ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಬೇಕೆಂಬುದು ಇವರ ದೊಡ್ಡ ಕನಸಾಗಿತ್ತು. ಅಂತಹ ಅವಕಾಶ ವೊಂದು ಸಿಕ್ಕಿದ್ದು ಪ್ರಶಸ್ತಿ ಗಳಿಸುವ ವಿಶ್ವಾಸ ಅವರದು.

ಏಕಲವ್ಯನಂತೆ ಅಭ್ಯಾಸ
ಸಾಧಕ ವಿಟ್ಠಲ ಶೆಟ್ಟಿಗಾರ್‌ ಏಕಲವ್ಯ. ಗುರುಗಳಿಲ್ಲದೇ ಬೆಳೆದವರು. ಮಾಬುಕಳ ಚೇತನಾ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸದಿಂದ ಉತ್ತುಂಗಕ್ಕೆ ಬೆಳೆದವರು. ತಾನು ಬೆಳೆಯುವುದರ ಜತೆಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ.

ಸಹಕಾರ ಸಿಕ್ಕರೆ ಖುಷಿ
ಇದುವರೆಗೆ ಬಹುತೇಕ ಸ್ವಂತ ಹಣದಲ್ಲೇ ಕ್ರೀಡೆಗಳಲ್ಲಿ ಭಾಗವಹಿ ಸಿದ್ದು, ಕೂಲಿ ಮಾಡಿ ಲಕ್ಷಾಂತರ ರೂ.ಗಳನ್ನು ವ್ಯಯಿಸಿದ್ದೇನೆ. ಕ್ರೀಡಾ ಪ್ರೇಮಿಗಳ ಸಹಕಾರವೂ ಇದೆ. ಈ ಬಾರಿಯ ಕ್ರೀಡಾಕೂಟ ವಿದೇಶಿ ನೆಲದಲ್ಲಿ ಆಯೋಜನೆಗೊಳ್ಳುವುದರಿಂದ ದೊಡ್ಡ ಮೊತ್ತದ ಹಣ ಅಗತ್ಯವಿದೆ. ಭಕ್ತಾದಿಗಳು ಸಲ್ಲಿಸಬಹುದು.
– ವಿಟ್ಠಲ ಶೆಟ್ಟಿಗಾರ್‌

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.