Udupi: ಬಸ್ ಢಿಕ್ಕಿ: ಮಹಿಳೆಗೆ ಗಾಯ
Team Udayavani, Apr 30, 2024, 8:20 PM IST
ಉಡುಪಿ: ಖಾಸಗಿ ಬಸ್ ಢಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ನಡೆದಿದೆ.
ಕರಾವಳಿ ಬೈಪಾಸ್ ಬಳಿ ರಸ್ತೆ ದಾಟಲು ನಿಂತಿದ್ದ ವಿಮಲಾ (61) ಅವರಿಗೆ ಉಡುಪಿ ಕಡೆಯಿಂದ ಕರಾವಳಿ ಬೈಪಾಸ್ ಕಡೆಗೆ ಅತೀ ವೇಗದಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ.
ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.