Udupi; ಡಿವೈಡರ್ಗೆ ಬೈಕ್ ಢಿಕ್ಕಿ:ತಂದೆ, ಮಗನಿಗೆ ಗಾಯ
Team Udayavani, Feb 26, 2024, 9:50 PM IST
ಉಡುಪಿ: ಡಿವೈಡರ್ಗೆ ಬೈಕ್ ಢಿಕ್ಕಿ ಹೊಡೆದು ತಂದೆ-ಮಗ ಗಾಯಗೊಂಡ ಘಟನೆ ಸಂಭವಿಸಿದೆ.
ಸೋಮನಾಥ್ ಅವರು ಪುತ್ರ ಕನನ್ ಅವರನ್ನು ಬೈಕ್ನಲ್ಲಿ ಹಿಂದೆ ಕುಳ್ಳಿರಿಸಿಕೊಂಡು ನಿಟ್ಟೂರು ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದರು.
ಕರಾವಳಿ ಬೈಪಾಸ್ ಬಳಿಗೆ ಬರುವಾಗ ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆದು ಇಬ್ಬರೂ ಬಿದ್ದರು. ಸೋಮನಾಥ್ ಅವರ ತಲೆ, ಕೈಗೆ ಗಾಯವಾಗಿದೆ. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.