
Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ
Team Udayavani, Sep 27, 2023, 11:36 PM IST

ಉಡುಪಿ: ಪ್ರಕೃತಿಯನ್ನು ನಾವು ನೋಡುವ ದೃಷ್ಟಿ ಬದಲಾಗಬೇಕು. ಆಗ ಮಾತ್ರ ನಮ್ಮ ಜೀವನದ ದೃಶ್ಯವೂ ಬದಲಾಗುತ್ತದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರ ಸಭೆ, ಉಡುಪಿ ಕರಾವಳಿ ಪ್ರವಾಸೋದ್ಯಮ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಪುರಭವನದಲ್ಲಿ ಪ್ರವಾಸೋದ್ಯಮ ಮತ್ತು ಹಸುರು ಹೂಡಿಕೆಗಳು ಎಂಬ ಥೀಮ್ ಅಡಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಪಟ್ಟಿಗೆ ಇನ್ನಷ್ಟು ಪ್ರದೇಶ ಸೇರಿಸುತ್ತಿದ್ದೇವೆ. ಕರಾವಳಿ, ಪಶ್ಚಿಮಘಟ್ಟ, ಧಾರ್ಮಿಕ ಕ್ಷೇತ್ರಗಳು ನಮ್ಮಲ್ಲಿವೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಸಮುದ್ರ ಏರುಪೇರಾದಂತೆ ಸಮಸ್ಯೆಯಾಗುವ ಜತೆಗೆ ಅರಣ್ಯ ನಾಶವಾದರೂ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆಯನ್ನು ಅರ್ಥೈಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂದರು.
ನೀರಿನ ಮಿತಬಳಕೆ ಅಗತ್ಯ
ಸೌರಶಕ್ತಿಯ ಸದ್ಬಳಕೆ ಆಗಬೇಕು. ಜತೆಗೆ ನೀರಿನ ಮಿತ ಬಳಕೆ, ಮಲಿನ ಮಾಡದಿರುವುದು ಅತ್ಯಗತ್ಯ. ಮಳೆನೀರ ಕೊçಲು, ಮಳೆನೀರಿನ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಈ ವರ್ಷ ಶೇ. 70ರಷ್ಟು ಮಳೆ ಕೊರತೆ ಇರುವುದರಿಂದ ಡಿಸೆಂಬರ್‌ನಲ್ಲೇ ನೀರಿನ ಸಮಸ್ಯೆ ಎದುರಾಗಬಹುದು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ನೀರಿನ ಸದ್ಬಳಕೆಯ ಜತೆಗೆ ನೀರಿನ ಮೂಲಗಳನ್ನು ಉಳಿಸಬೇಕು ಎಂದರು.
ಮಣಿಪಾಲದ ವೆಲ್‌ಕಮ್ ಗ್ರೂಫ್ ಗ್ರ್ಯಾಜುವೆಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ (ವಾಗಾÏ) ಪ್ರಾಂಶುಪಾಲ ಚೆಫ್ ಡಾ| ತಿರು ಜ್ಞಾನಸಂಬಂತಮ್ ಅವರು ಪ್ರವಾಸೋದ್ಯಮ ಮತ್ತು ಹಸುರು ಹೂಡಿಕೆಗಳು ಎಂಬ ವಿಷಯದ ಮೇಲೆ ಮಾತನಾಡಿದರು.
ಬ್ಲಾಗರ್ ಸುಜನ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಉಡುಪಿ ಕರಾವಳಿ ಪ್ರವಾಸೋದ್ಯಮ ಸಂಘಟನೆಗಳ ಅಧ್ಯಕ್ಷ ಮನೋಹರ್ ಶೆಟ್ಟಿ, ಜಿ.ಪಂ. ಸಿಇಒ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ., ಪೌರಾಯುಕ್ತ ರಾಯಪ್ಪ, ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು. ಸ್ವಾಗತಿಸಿದರು. ವಿವೇಕ್ ವಂದಿಸಿದರು, ನಿರೂಪಿಸಿದರು. ಕಲಾಮಯಂ ಉಡುಪಿ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
