ವಾಹನ ಸವಾರರಿಗೆ 50 ಸಾವಿರ ರೂ. ದಂಡ

Team Udayavani, Sep 9, 2019, 11:32 AM IST

ಹಳಿಯಾಳ: ದಾಖಲಾತಿ ಹಾಗೂ ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವಾಹನ ಸವಾರರಿಗೆ ದಂಡ ಹಾಕಿದ ಪೊಲೀಸ್‌ ಇಲಾಖೆ.

ಹಳಿಯಾಳ: ಲೈಸನ್ಸ್‌, ವಾಹನದ ದಾಖಲಾತಿಗಳು ಇಲ್ಲದೇ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುವವರಿಗೆ ಭಾನುವಾರ ಹಳಿಯಾಳ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನ 50 ದ್ವಿಚಕ್ರ ವಾಹನ ಸವಾರರಿಗೆ 50 ಸಾವಿರ ರೂ. ದಂಡ ಹಾಕಲಾಗಿದೆ.

ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಮೂಲಕ ಜಾರಿ ಮಾಡಿರುವ ಹೊಸ ದರದ ದಂಡ ಕ್ರಮವನ್ನು ಭಾನುವಾರ ಹಳಿಯಾಳ ಸಿಪಿಐ ಲೋಕಾಪುರ ಬಿಎಸ್‌ ಹಾಗೂ ಪಿಎಸ್‌ಐ ಆನಂದಮೂರ್ತಿಯವರು ಹಳಿಯಾಳದಲ್ಲಿ ಜಾರಿಗೆ ತಂದರು. ಅಲ್ಲದೇ ಹೆಲ್ಮೆಟ್ ಹಾಕಿ ವಾಹನ ಓಡಿಸಿ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಎಷ್ಟು ವಿಧಿಸಲಾಗುತ್ತದೆ ಎಂಬ ಬಗ್ಗೆ ಸವಿಸ್ತಾರವಾಗಿ ನಮೂದಾಗಿರುವ ಕರಪತ್ರಗಳನ್ನು ಜನರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.

ಇನ್ನೂ ಮೊದಲ ದಿನವೇ 50 ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು, 50 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಸಿಪಿಐ ಲೋಕಾಪುರ ಮಾಹಿತಿ ನೀಡಿದ್ದಾರೆ.

ಸರ್ಕಾರದ ನೀತಿ ನಿಯಮದಂತೆ ದಂಡ ವಸೂಲಿ ಮಾಡಲಾಗುತ್ತಿದೆ. ವಾಹನ ಸವಾರರಿಗೆ ತೊಂದರೆ ಆಗುವುದು ನಿಜ. ಆದರೆ ಕಾನೂನು ಪಾಲನೆಯು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಂಚಾರ ಉಲ್ಲಂಘನೆಗೆ ದಂಡ ವಸೂಲಿ ಮಾಡಲಾಗುವುದು ಎಂದು ಸಿಪಿಐ ಲೋಕಾಪುರ ಎಚ್ಚರಿಕೆ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ