ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
Team Udayavani, May 24, 2022, 8:25 PM IST
ಶಿರಸಿ: ಸುಮಾರು 12 ಕ್ವಿಂಟಲ್ ಚಾಲಿ ಅಡಿಕೆಯ ಕಳ್ಳತನ ಮಾಡಿದ ಆರೋಪದ ಮೇರೆಗೆ ಎರಡನೇ ಆರೋಪಿ, ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋ ರಿಕ್ಷಾ ಸಹಿತ ಬೆಳೆ ವಶಪಡಿಸಿಕೊಂಡ ಘಟನೆ ನಡೆದಿದೆ.
ಗ್ರಾಮೀಣ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದಲ್ಲಿ ಕಳ್ಳರು ದೂರುದಾರ ಮಂಜುನಾಥ ಬಸಪ್ಪ ಗೌಡರ್ ಅವರ ಕೊಟ್ಟಿಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಸುಮಾರು 12 ಕ್ವಿಂಟಲ್ ಸಿಪ್ಪೆ ಚಾಲಿ ಅಡಿಕೆ ಹಾಗೂ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 1ಕ್ವಿಂಟಲ್ ಕೆಂಪಡಿಕೆ ಹೀಗೆ ಒಟ್ಟು 4,60,000 ರೂ. ಮೌಲ್ಯದ ಅಡಿಕೆಯನ್ನು ಕಳ್ಳತನವಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಶ್ಯಾಮ್ ವಿ. ಪಾವಸ್ಕರ್ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ಆರೋಪಿ ಆಟೋರಿಕ್ಷಾ ಚಾಲಕ ರಾಘವೇಂದ್ರ ಪರಮಾನಂದ ಶಿರಹಟ್ಟಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪತ್ತೆಗೆ ಡಿಎಸ್ಪಿ ನೇತೃತ್ವದಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.