80 ದಿನಗಳಲ್ಲಿ ತಲೆ ಎತ್ತಿದ ಗೋಸ್ವರ್ಗ


Team Udayavani, May 28, 2018, 7:45 AM IST

go-swarga.jpg

ಉತ್ತರ ಕನ್ನಡ: ಉತ್ತಮ ಕಾರ್ಯಗಳನ್ನು ಸರ್ಕಾರ ಮಾಡಬೇಕು, ಬೇರೆ ಯಾರೋ ಮಾಡಬೇಕೆಂದು ಕಾಯುತ್ತಾ ಕೂರುವುದಲ್ಲ. ಉತ್ತಮವಾದ ಹಾಗೂ ಆಗಬೇಕಾದ ಕಾರ್ಯಗಳನ್ನು ನಾವೇ ಮಾಡಬೇಕು. ಹಾಗಾಗಿಯೇ ಈ ಕಾರ್ಯಕ್ಕೆ ನಾವು ತೊಡಗಿಸಿಕೊಂಡೆವು. ಇದನ್ನು ಮಾದರಿಯಾಗಿಸಿಕೊಂಡು ಊರು, ಊರುಗಳಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಾಗಿದೆ ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಶ್ರೀ ರಾಮದೇವ ಭಾನುRಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ, “ಗೋಸ್ವರ್ಗ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೋವಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು. 80 ದಿನಗಳಲ್ಲಿ ಗೋಸ್ವರ್ಗ ನಿರ್ಮಾಣವಾಗಿದ್ದು ಗೋಪ್ರೇಮಿಗಳ ಶಕ್ತಿಯ ಪ್ರತೀಕ. ಇಲ್ಲಿ ನಾವು ನಿಮಿತ್ತ ಮಾತ್ರ. ಯಾವುದೋ ದೈವಶಕ್ತಿಯ ಅನುಗ್ರಹದಿಂದ ಇದು ಸಾಧ್ಯವಾಗಿದೆ. ದೇವ ಸಂಕಲ್ಪಇದ್ದಾಗ ಆ ಕಾರ್ಯ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಇಂದು ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ಹಾಗೂ ಗೋಪ್ರೇಮ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ. ಇಂದು ಇರುವ ಗೋಸ್ವರ್ಗ, ಕೃಷ್ಣ ಶಿಶು ಮಾತ್ರ. ಮುಂದಿನ ದಿನಗಳಲ್ಲಿ ಗೋಸ್ವರ್ಗದ ವಿಶ್ವರೂಪ ದರ್ಶನವಾಗಲಿದೆ. ಯಾವುದು ಸರಿಯೋ ಅದನ್ನು ಮಾಡಬೇಕು. ಸಾಧ್ಯಾಸಾಧ್ಯತೆಯ ಕುರಿತು ಚಿಂತಿಸಬಾರದು. ಕಾರ್ಯಗಳನ್ನು ಮಾಡುವಾಗ ಅಪವಾದ -ಆಪತ್ತು -ವಿಪತ್ತುಗಳು ಎದುರಾಗಬಹುದು. ಆದರೆ, ನಾವು ಸರಿಯಾದ ಕಾರ್ಯಗಳನ್ನು ಎಡಬಿಡದೇ ಮಾಡಬೇಕು. ಗೋಶಾಲೆಗಳು ಹಲವಿವೆ. ಆದರೆ, ಜಗತ್ತಿನ ಏಕೈಕ ಗೋಸ್ವರ್ಗ ಇದಾಗಿದೆ. ಗೋವಿನ ನೋವಿಗೆ ಅಂತ್ಯ ಹಾಡಲು, ಗೋಸೌಖ್ಯ ಕೇಂದ್ರಿತ ಗೋಧಾಮ ನಿರ್ಮಿಸಲು ಸಂಕಲ್ಪಿಸಿದೆವು ಎಂದು ಹೇಳಿದರು.

ಶ್ರೀಶೈಲ ಜಗದ್ಗುರು ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಗೋ ಸಂದೇಶ ನೀಡಿದರು. ನಾಗಪುರ ಗೋವಿಜ್ಞಾನ ಅನುಸಂಧಾನ ಕೇಂದ್ರದ ಗೋವಿಜ್ಞಾನಿ ಸುನಿಲ್‌ ಮಾನ್‌ಸಿಂಗ್‌, ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಬಾಷ್‌ ಸಂಸ್ಥೆಯ ಡಾ.ಎಂಪಿ ಕಾಮತ್‌, ಸಾಗರ ಶಾಸಕ ಹರತಾಳು ಹಾಲಪ್ಪ, ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌,  ಸೊರಬ ಶಾಸಕ ಕುಮಾರ ಬಂಗಾರಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಜೆಎಸ್‌ಡಬ್ಲ್ಯು ಸಂಸ್ಥೆಯ ಡಾ.ವಿಶ್ವನಾಥ್‌ ಪಲ್ಲೇದ್‌,  ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿ, ರಾಜ್ಯ ಗೋ ಪರಿವಾರದ ಅಧ್ಯಕ್ಷ ತ್ರಿವಿಕ್ರಮಾನಂದ ಸರಸ್ವತಿ ಮಠದ ಪಾಂಡುರಂಗ ಮಹಾರಾಜ್‌, ಕುಮಟಾ ಶಾಸಕ ದಿನಕರ ಶೆಟ್ಟಿ, ಇಮಾಮಿ ಫೌಂಡೇಶನ್‌ ಆರ್‌.ಎಸ್‌.ಗೋಯಂಕಾ, ಜಿಲ್ಲಾ ಗೋ ಪರಿವಾರದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕಾಂಚಿ ಕಾಮಕೋಟಿ ಮಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶ್ರೀ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ವಿಶೇಷ ಸಂದೇಶ ಕಳುಹಿಸಿದ್ದರು. ಇದೇ ವೇಳೆ, ಲಕ್ಷ ಗೋಗಂಗಾರತಿಯನ್ನು ಸಲ್ಲಿಸಲಾಯಿತು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.