ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನ ಯಶಸ್ವಿ
Team Udayavani, May 29, 2021, 8:17 PM IST
ಕಾರವಾರ: ಜಿಲ್ಲೆಯಲ್ಲಿ ನಡೆದ ವಿಕಲಚೇತನರಿಗೆ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿದೆ. 18 ರಿಂದ 44 ವರ್ಷದವರೆಗಿನ ಹಾಗೂ 45 ವರ್ಷ ಮೇಲ್ಪಟ್ಟ 4871 ವಿಕಲಚೇತನರು ಕೋವಿಡ್ ಲಸಿಕೆ ಪಡೆದುಕೊಂಡರು ಎಂದು ಜಿಪಂ ಸಿಇಒ ಪ್ರಿಯಂಕಾ ಎಂ. ಹೇಳಿದ್ದಾರೆ.
ಶುಕ್ರವಾರ ನಡೆದ ಲಸಿಕೆ ಅಭಿಯಾನದ ವಿವರ ನೀಡಿದ ಅವರು ವಿಕಲ ಚೇತನರಿಗೆ ಕೋವಿಡ್ ಲಸಿಕೆ ಹಾಕಲು ಮುಂದಾದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದೆ ಎಂದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್‌ಗೆ ತುತ್ತಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಜಿಪಂ ಹಲವಾರು ಮಾರ್ಗೋಪಾಯ ಕೈಗೊಂಡಿದೆ. ಈಗಾಗಲೇ ಒಂದರ ಹಿಂದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿರುವ ಆಡಳಿತ ಇಂದು ವಿಕಲಚೇತನರಿಗೂ ಕೋವಿಡ್ ಲಸಿಕೆ ಹಾಕುವ ಮಹಾ ಅಭಿಯಾನ ಮಾಡಿದೆ. ವಿಕಲಚೇತನರಿಗೆ ಲಸಿಕೆ ಹಾಕಿಕೊಳ್ಳಲು ತೊಂದರೆ ಉಂಟಾಗದಂತೆ ಜಿಲ್ಲೆಯಲ್ಲಿ ಬಾರಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ವಿಕಲಚೇತನರಿಗೆ ಎರಡು ವಾಹನದ ವ್ಯವಸ್ಥೆ ಮಾಡಿತ್ತು. ಅಂಗವಿಕಲರು ಲಸಿಕೆ ಪಡೆಯಲು ಸಹಾಯ ಬಯಸಿದಲ್ಲಿ ಮನೆಯಿಂದ ವಾಹನದ ಮೇಲೆ ತಂದು ಲಸಿಕೆ ನೀಡಲಾಯಿತು.
ಇನ್ನು ಹಲವರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡರು. ಶುಕ್ರವಾರ ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 18 ರಿಂದ 44 ವರ್ಷ ಒಳಗಿನ 3452 ವಿಕಲಚೇತನರು ಲಸಿಕೆ ಪಡೆದರು.
ಇನ್ನು 44 ವರ್ಷ ಮೇಲ್ಪಟ್ಟ 2789 ವಿಕಲಚೇತನರರು ಕೋವಿಡ್ ಲಸಿಕೆ ಪಡೆದುಕೊಂಡರು. ಕುಮಟಾ ತಾಲೂಕಿನ ತೊರ್ಕೆ ಗ್ರಾಮದಲ್ಲಿ ಶೇ.95 ಅಂಗವಿಕಲರು ಲಸಿಕೆ ಪಡೆದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13354 ವಿಕಲಚೇತನರಲ್ಲಿ 6241ವಿಕಲಚೇತನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಮಹಾ ಅಭಿಯಾನದಲ್ಲಿ ಲಸಿಕೆ ಪಡೆಯದೇ ಇರುವ ವಿಕಲಚೇತನರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದು ಜಿಪಂ ಸಿಇಒ ಪ್ರಿಯಂಕಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗುರುವಾರವೂ ಶಾಲಾ ಕಾಲೇಜಿಗೆ ರಜೆ ಘೋಷಣೆ
ಶಿರಸಿ: ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ; ಕೊನೇ ಕ್ಷಣದ ಆದೇಶಕ್ಕೆ ಆಕ್ರೋಶ
ಉತ್ತರ ಕನ್ನಡ ಭಾರೀ ಮಳೆ: ಶಾಲಾ ಕಾಲೇಜಿಗೆ ರಜೆ ಘೊಷಣೆ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು
ಭಟ್ಕಳ: ಉದಯಪುರ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ನವದೆಹಲಿ: 12 ನೇ ತರಗತಿ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಇರಿದ ಯುವಕ
ಶ್ರೀನಗರದ ಶೂರ್ಯಾರ್ ಮಂದಿರದಲ್ಲಿ ರಾಮಾನುಜರ ಪ್ರತಿಮೆ ಅನಾವರಣ
ಉನ್ನತ ಅಧಿಕಾರಿಗಿಂತ ರೈತ ಆಗುವುದು ಶ್ರೇಷ್ಠ; ನಳಿನಾಕ್ಷಿ
ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಹಾನಿಗೆ 50 ಸಾವಿರ; ಆರ್ ಅಶೊಕ್