ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಡಿಸಿ
Team Udayavani, Jun 29, 2019, 10:25 AM IST
ಜೋಯಿಡಾ: ದಿಗಲಂಬಾ ಕಳಸಾಯಿ ರಸ್ತೆಯನ್ನು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಪರಿಶೀಲಿಸಿದರು.
ಜೋಯಿಡಾ: ಸಾರ್ವಜನಿಕರ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ. ಜೋಯಿಡಾ ತಾಲೂಕಿನ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.
ಪಿಎಂಜಿಎಸ್ವೈ ಹಾಗೂ ಡಿಯುಡಿಸಿ ಮತ್ತು ಪಿಡಬ್ಲೂಡಿ ಇಂಜನೀಯರ್ಗಳ ತಂಡ ಹಾಗೂ ರಸ್ತೆ ಗುಣಮಟ್ಟ ಯಂತ್ರದೊಂದಿಗೆ ತೆರಳಿದ ಜಿಲ್ಲಾಧಿಕಾರಿ, ಜೋಯಿಡಾ ಗ್ರಾಪಂ ವ್ಯಾಪ್ತಿಯ ದಿಗಲಂಬಾ-ಕಳಸಾಯಿ ರಸ್ತೆ ಮತ್ತು ಸೇತುವೆ ಕಾಮಗಾರಿ, ಮೆಸ್ತ-ಬಿರೋಡಾ ರಸ್ತೆ ಮತ್ತು ಚರಂಡಿ ಕಾಮಗಾರಿ, ಕಾತೇಲಿ ಗ್ರಾಪಂ ವ್ಯಾಪ್ತಿಯ ಶೆಂಡಿಲ್ ಮಹಾರಾಜ ರಸ್ತೆ ಮತ್ತು ಸೇತುವೆ, ಕುಂಡಲ ಹಾಗೂ ತೇರಾಳಿ ರಸ್ತೆ, ಅಣಶಿ ಗ್ರಾಪಂ ವ್ಯಾಪ್ತಿಯ ಡೊಕರಪ್ಪಾ, ನಿಗುಂಡಿ ಹಾಗೂ ದೂದ್ಗಾಲಿ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಇದರಲ್ಲಿ ನ್ಯೂನತೆ ಕಂಡುಬಂದಂತಹ ಕಾಮಗಾರಿಗಳ ಅನುದಾನವನ್ನು ಕಾಮಗಾರಿ ಸರಿಪಡಿಸುವವರೆಗೂ ತಡೆ ಹಿಡಿಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಿಇಒ, ತಹಶೀಲ್ದಾರ್ ಸಂಜಯ ಕಾಂಬ್ಳೆ, ಲೋಕೋಪಯೋಗಿ ಇಲಾಖೆಯ ಸ.ಕಾ. ಅಭಿಯಂತರ ಛಬ್ಬಿ, ಸಹಾಯಕ ಇಂಜನೀಯರ ಸತೀಶ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ