ಕಿಮ್ಸ್‌ ನಿರ್ದೇಶಕರ ವರ್ಗಾವಣೆಗೆ ಆಗ್ರಹ

Team Udayavani, Oct 1, 2019, 3:17 PM IST

ಕಾರವಾರ: ನಾಲ್ಕಕ್ಕೂ ಅಧಿಕ ವರ್ಷಗಳಿಂದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ| ಶಿವಾನಂದ ದೊಡ್ಮನಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕರಾಗಿ ಒಬ್ಬರೇ ನಾಲ್ಕು ವರ್ಷಗಳಿಗಿಂತ ಅಧಿಕ ಸಮಯ ಅಧಿಕಾರದಲ್ಲಿ ಇರಲು ನಿಯಮದಲ್ಲಿ ಅವಕಾಶವಿಲ್ಲ. ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈ ಹಿಂದೆ ಸಮ್ಮಿಶ್ರ ಸರ್ಕಾರ ಅಧಿಕಾರಲ್ಲಿದ್ದಾಗ ಅಂದಿನ ಸಚಿವ ತುಕಾರಾಂ ಅವರಿಗೂ ಈ ನಿಟ್ಟಿನಲ್ಲಿ ಮನವಿ ನೀಡಲಾಗಿತ್ತು. ಜೂನ್‌ 28ಕ್ಕೆ ಮತ್ತೂಮ್ಮೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಸರ್ಕಾರ ಬದಲಾದರೂ ಕಾಲೇಜಿನ ನಿರ್ದೇಶಕರ ಬದಲಾವಣೆ ಆಗಿಲ್ಲ.

ಹಾಗಾಗಿ ಸರ್ಕಾರಕ್ಕೆ ಅವರ ಅನಿವಾರ್ಯತೆ ಇದೆಯೇ? ಈ ಹುದ್ದೆಗೆ ಸೂಕ್ತವಾದವರು ರಾಜ್ಯದಲ್ಲಿ ಬೇರೆ ಯಾರೂ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು. ನಿರ್ದೇಶಕರ ಹುದ್ದೆಗೆ ಈಗಾಗಲೇ ಮೂರು ಸಲ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಹಲವರು ಅರ್ಜಿ ಸಲ್ಲಿಸಿದರೂ ಅಭ್ಯರ್ಥಿಗಳ ಸಂದರ್ಶನ ಮಾತ್ರ ನಡೆಯುತ್ತಿಲ್ಲ. ಹಲವು ವೈದ್ಯರು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಖಾಲಿ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಿಲ್ಲ. ಹೊಸಬರು ಬಂದರೂ ಹೆಚ್ಚು ದಿನ ಇರುವುದಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಇಮಿ¤ಯಾಜ್‌, ಸಿ.ಎನ್‌. ನಾಯ್ಕ, ಅಲ್ತಾಫ್‌ ಶೇಖ್‌, ರಾಜೀವ ನಾಯ್ಕ ಇದ್ದರು.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ