Udayavni Special

ಒಬ್ಬರಿಗೊಂದೊಂದು ರೀತಿ ಹೋಂ ಕ್ವಾರಂಟೈನ್‌


Team Udayavani, Jul 18, 2020, 12:50 PM IST

ಒಬ್ಬರಿಗೊಂದೊಂದು ರೀತಿ ಹೋಂ ಕ್ವಾರಂಟೈನ್‌

ಶಿರಸಿ: ಹೋಂ ಕ್ವಾರಂಟೈನ್‌ ನಿಯಮ ಸರಕಾರಿ ವೈದ್ಯರಿಗೊಂದು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರಿಗೊಂದು ಎಂಬಆರೋಪ ಬಲವಾಗಿ ಕೇಳಿ ಬಂದಿದೆ. ಈ ನೋವು ಈಗ ಜನಸಾಮಾನ್ಯರ ಆರೋಗ್ಯ ರಕ್ಷಣೆಗೂ ತೊಡಕಾಗುವ ಸಾಧ್ಯತೆ ಎದುರಾಗಿದೆ.

ಶಿರಸಿಯಲ್ಲಿ ಕೋವಿಡ್‌ 19ರ ಆತಂಕ ಹಾಗೂ ಕ್ವಾರಂಟೈನ್‌ ನಿಯಮ ಕಾರಣದಿಂದ ಅನೇಕ ಆಸ್ಪತ್ರೆಗಳು, ವೈದ್ಯರು ಸೇವೆ ಸಲ್ಲಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶಾಲನ ನಗರದ ಸೋಂಕಿತ ವ್ಯಕ್ತಿಗೆ ಎರಡು ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಕಾರಣಕ್ಕೆ ವೈದ್ಯರು ಗಂಟಲು ದ್ರವ ಕೊಟ್ಟು ಕ್ವಾರಂಟೈನ್‌ ಆಗಿದ್ದರು. ಇದಾದ ಬಳಿಕವೇ ಈ ಸಮಸ್ಯೆ ಉಲ್ಬಣಗೊಂಡಿದೆ. ವೈದ್ಯರಿಗೆ, ಸಿಬ್ಬಂದಿಗೆ ನೆಗೆಟಿವ್‌ ಬಂದರೂ ದವಾಖಾನೆಗೆ ಎಷ್ಟು ದಿನ ಸೀಲ್‌ಡೌನ್‌, ಕ್ವಾರಂಟೈನ್‌ ಎಂಬುದಕ್ಕೆ ಗೊಂದಲಗಳಿವೆ. ಇವರು ಪುನಃ ಸೇವೆ ಯಾವಾಗ ಕೊಡಬೇಕು ಎಂಬುದು ಆಡಳಿತದವರು ಸ್ಪಷ್ಟಗೊಳಿಸಬೇಕಿದೆ.

ಈ ಮಧ್ಯೆ ಖಾಸಗಿ ಆಸ್ಪತೆಗಳಿಗೆ ಕಿಡ್ನಿ, ಹೃದಯ ಸಂಬಂಧಿಸಿ ತೆರಳಿದವರೂ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಇಲ್ಲ, ಜ್ವರ ಇಲ್ಲ ಎಂದು ಪತ್ರ ತರಬೇಕಾಗಿದೆ. ರೋಗಿಯೊಬ್ಬರನ್ನು ಕರೆದುಕೊಂಡು ಹೋಗಿ ಸರಕಾರಿ ವೈದ್ಯರನ್ನು ಕಂಡು ಪತ್ರ ತರುವ ತನಕ ಹೈರಾಣಾದ ಉದಾಹರಣೆ ಕೂಡ ನಡೆಯುತ್ತಿದೆ. ಕೋವಿಡ್‌ 19ರ ಆತಂಕದ ನಡುವೆ ಸಣ್ಣಪುಟ್ಟ ಕಾಯಿಲೆಗಳಿಗೆ ಕೂಡ ಚಿಕಿತ್ಸೆಗೆ ಕಷ್ಟವಾಗುತ್ತಿದೆ.

ಪ್ರಶ್ನೆಗಳು ಹಲವು: ಎಲ್ಲ ಸೌಲಭ್ಯವನ್ನೂ ಸರಕಾರಿ ಆಸ್ಪತ್ರೆಯಲ್ಲಿ ಕೊಡಿಸಲು ಸಾಧ್ಯವಿಲ್ಲ.ಕೆಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳು ಅನಿವಾರ್ಯವಾಗಿದೆ. ಅವುಗಳಲ್ಲಿ ಉಳಿಸಿಕೊಂಡು ಚಿಕಿತ್ಸೆ ಕೊಡಬೇಕಾದರೆ ಸರಕಾರಿ ಆಸ್ಪತ್ರೆಯ ಕೋವಿಡ್‌ ಟೆಸ್ಟ್‌ ಆಗಬೇಕು. ಅದರ ವರದಿ ಬರುವ ತನಕ ಏನು? ಚಿಕಿತ್ಸೆ ಯಾರು ಕೊಡುತ್ತಾರೆ? ಒಮ್ಮೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ನಂತರ ಕೋವಿಡ್‌ ಬಂದರೆ ಕ್ವಾರಂಟೈನ್‌ ಕಷ್ಟ. ಈ ಕಾರಣದಿಂದ ಅಂತರ ಕಾಯ್ದುಕೊಳ್ಳುವಂತಾಗಿದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಕೂಡ ಉಂಟಾಗಿದೆ. ಕೋವಿಡ್‌ ಆತಂಕದಿಂದ ಕೆಲ ನರ್ಸ್‌ಗಳು ಕೂಡ ಆಸ್ಪತ್ರೆ ತೊರೆದದ್ದೂ ಇದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿ ರೋಗಿಗಳಿಗೆ ಉಂಟಾಗುವ ಆತಂಕ ದೂರ ಮಾಡಬೇಕಿದೆ. ಅನೇಕರು ಆಸ್ಪತ್ರೆಗೇ ಬರಲು ಹಿಂದೇಟು ಹಾಕುವವರೂ ಇದ್ದಾರೆ. ಈ ವಿಲಕ್ಷಣ ಸಂಕಟ ಹೋಗಲಾಡಿಸಬೇಕಿದೆ.

ಕ್ವಾರಂಟೈನ್‌ ನಿಯಮ ಖಾಸಗಿ, ಸರಕಾರಿ ಆಸ್ಪತ್ರೆಗಳಿಗೆ ಬೇರೆ ಬೇರೆ ಇಲ್ಲ. ಗೊಂದಲಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತೇವೆ. ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.- ಡಾ| ಈಶ್ವರ ಉಳ್ಳಾಗಡ್ಡಿ, ಎಸಿ ಶಿರಸಿ

ಕೋವಿಡ್‌ ನೆಗೆಟಿವ್‌ ಬಂದರೂ ಎಷ್ಟ ದಿನಗಳ ಕ್ವಾರಂಟೈನ್‌ ನಿಯಮ ಎಂಬುದು ಪಕ್ಕಾ ಆಗಬೇಕು. ಚಿಕಿತ್ಸೆ ಕೊಡಲು ತೊಂದರೆ ಇಲ್ಲ. ಆದರೆ, ನಿಯಮಗಳದ್ದೇ ಆತಂಕ. –ಹೆಸರು ಹೇಳದ ಪ್ರಸಿದ್ಧ ಖಾಸಗಿ ಆಸ್ಪತ್ರೆ ವೈದ್ಯ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಕೋವಿಡ್ ಓಡಿಸಲು ಸಿಎಂ ನವಸೂತ್ರ

iplIPL 2020 : ಆರ್‌ಸಿಬಿ – ಮುಂಬೈ ಕಾದಾಟ : ಮುಂಬೈಗೆ 5 ವಿಕೆಟ್ ಗಳ ಜಯ

IPL 2020 : ಎಡವಿದ ಆರ್‌ಸಿಬಿ; ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮುಂಬೈ

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

uk-tdy-2

ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ

UK-TDY-1

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

UK-TDY-1

ನೆರೆಯಿಂದ 37 ಗ್ರಾಮಗಳಿಗೆ ಹಾನಿ

uk-tdy-1

ಯಲ್ಲಾಪುರದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

KUDತ್ರಾಸಿ ಜಂಕ್ಷನ್‌: ಹೆದ್ದಾರಿ ಕಾಮಗಾರಿಯಿಂದ ಹತ್ತಾರು ಸಮಸ್ಯೆ

ತ್ರಾಸಿ ಜಂಕ್ಷನ್‌: ಹೆದ್ದಾರಿ ಕಾಮಗಾರಿಯಿಂದ ಹತ್ತಾರು ಸಮಸ್ಯೆ

ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

ಬಂಟ್ವಾಳ ತಾಲೂಕಿನಲ್ಲಿ ಗುರಿ ಮೀರಿ ಸಾಧನೆ; ಶೇ. 100.05 ಪ್ರಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.