ಯೋಗ ಪಾಠ ಮಾಡುವ ಮಕ್ಕಳ ಡಾಕ್ಟ್ರು!


Team Udayavani, Jun 21, 2021, 8:14 PM IST

j20srs5 (2)

ಶಿರಸಿ: ಇಲ್ಲೊಬ್ಬ ಡಾಕ್ಟ್ರು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯೋಗ ಪಾಠ ಮಾಡುತ್ತಾರೆ. ಯೋಗಾಭ್ಯಾಸ ನಿರತ ವೈದ್ಯರಾದವರು ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಕುರಿತು ಆದ್ಯತೆ, ವಿಶ್ವ ಯೋಗ ದಿನಾಚರಣೆ ಆರಂಭಿಸಿದಾಗಿನಿಂದ ಇವರೂ ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಮಕ್ಕಳ ವೈದ್ಯ ಡಾ|ದಿನೇಶ ಹೆಗಡೆ ಯೋಗ ತರಬೇತಿ ನೀಡುತ್ತಿರುವ ವೈದ್ಯರು. 2014ರಿಂದ ಈವರೆಗೆ ನಿತ್ಯವೂ ಯೋಗ ಪಾಠ ಮಾಡುತ್ತಾರೆ. ಇದಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ನೆರವು ಪಡೆದಿದ್ದಾರೆ. ಕೋವಿಡ್‌ ಕೇರ್‌ ಸೆಂಟರ್‌ ಕೂಡ ನಡೆಸುತ್ತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಅಂಥ ಒತ್ತಡದಲ್ಲೂ ಆರೋಗ್ಯ ಸಂಬಂಧ ವೈಯಕ್ತಿಕ ನಿರಾಳತೆ ಸೃಷ್ಟಿಸಿದ್ದು ಯೋಗ ಎನ್ನುತ್ತಾರೆ.

2014ರಲ್ಲಿ ಶಿರಸಿಯಲ್ಲೂ ವಿಶ್ವ ಯೋಗ ದಿನಾಚರಣೆ ಸಾರ್ವತ್ರಿಕವಾಗಿ ನಡೆಸುವ ಕಾಲಕ್ಕೆ ಹಲವಡೆ ಯೋಗ ತರಬೇತಿ ಕೂಡ ನೀಡಿದವರಲ್ಲಿ ಡಾ| ದಿನೇಶ ಹೆಗಡೆ ಅವರೂ ಒಬ್ಬರು. ನಂತರ ಇದನ್ನು ನಿರಂತರವಾಗಿ ನಡೆಸಬೇಕು ಎಂಬ ಕಾರಣಕ್ಕೆ ರೋಟರಿ ಸೆಂಟರಿನಲ್ಲಿ ಗಣೇಶ ಶೇಟ್‌ ಅವರು ಹಾಗೂ ವೈದ್ಯರು ಸೇರಿ ನಿತ್ಯ ಯೋಗಾಸನ ಆರಂಭಿಸಿದರು.

ಐಎಂಎ ಕಟ್ಟಡ ಆದ ಬಳಿಕ ಉಳಿದ ಆಸಕ್ತರೂ ಜೊತೆಯಾದರು. ನಿತ್ಯ 15-20 ಜನರ ತನಕ ದಿನೇಶ ಹೆಗಡೆ ಅವರ ಬಿ ಯೋಗಾಸನ ಅಭ್ಯಾಸ, ಕಲಿಕೆಗೆ ಬಂದರು. ಕೆಲವರು ಇಲ್ಲಿ ಕಲಿತು ಮನೆಯಲ್ಲಿ ನಿತ್ಯವೂ ಆರಂಭಿಸಿದರು. ಕಳೆದ ವರ್ಷದ ಲಾಕ್‌ಡೌನ್‌ ಘೋಷಣೆ ಬಳಿಕ ಕೊಂಡಿ ತಪ್ಪಬಾರದು ಎಂದು ನಿತ್ಯವೂ ಬೆಳಗ್ಗೆ 6ರಿಂದ 7 ಗಂಟೆ ತನಕ ಯೋಗಾಭ್ಯಾಸ ಮಾಡುತ್ತಾರೆ ಹಾಗೂ ಅದನ್ನು ಅವರ ಫೇಸ್‌ಬುಕ್‌ ಪೇಜಿನ ಮೂಲಕ ಲೈವ್‌ ಕೂಡ ನೀಡಲು ಆರಂಭಿಸಿದರು.

ಅನೇಕರು ಅದನ್ನು ನೋಡಿಕೊಂಡು ಯೋಗಾಭ್ಯಾಸ ಮಾಡುತ್ತಿದ್ದಾರೆ ಎನ್ನುತ್ತಾರೆ ಡಾ| ದಿನೇಶ ಹೆಗಡೆ. ಐಎಂಎ ಹಾಲ್‌ನಲ್ಲಿ ನಿತ್ಯವೂ ಸಮಯಕ್ಕೆ ತಹಶೀಲ್ದಾರು, ವೈದ್ಯರಿಂದ ಹಿಡಿದು ವರ್ತಕರ ತನಕ, ಮಕ್ಕಳಿಂದ ಹಿಡಿದು ನಿವೃತ್ತರ ತನಕ ಬಂದಿದ್ದರು ಎಂದೂ ನೆನಪಿಸಿಕೊಳ್ಳುತ್ತಾರೆ. ಯೋಗಾಸನ ಮಾಡಿದರೆ ನಿರೋಗಿಗಳಾಗಬಹುದು. ಕೋವಿಡ್‌ನ‌ಂತಹ ಸೋಂಕಿನ ವಿರುದ್ಧವೂ ಹೋರಾಟಕ್ಕೆ ಯೋಗಾಸನ ಒಳ್ಳೆಯ ಮದ್ದು ಎನ್ನುತ್ತಾರೆ ವೈದ್ಯ ದಿನೇಶ ಹೆಗಡೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.