ಉರಿ ಬಿಸಿಲ್ನಾಗ ಕಾಣಿಸುತ್ತಿಲ್ಲ ಎಲೆಕ್ಷನ್‌ ಬಿಸಿ

Team Udayavani, Apr 17, 2019, 3:29 PM IST

ಖಾನಾಪುರ: ಮತದಾನದ ದಿನ ಸಮೀಪಿಸುತ್ತಿದ್ದರೂ ಮಲೆನಾಡು ಪ್ರದೇಶ ಖಾನಾಪುರದಲ್ಲಿ ಚುನಾವಣೆಯ ಬಿಸಿ ನಿರೀಕ್ಷಿಸಿದ ಪ್ರಮಾಣದಲ್ಲಿ ಕಾಣುತ್ತಿಲ್ಲ. ಯಾರು ಸಂಸದರಾದರೂ ಅವರನ್ನು ಭೇಟಿ ಮಾಡಲು ದೂರದ ಶಿರಸಿ ಇಲ್ಲವೆ ಉತ್ತರ ಕನ್ನಡಕ್ಕೆ ಹೋಗಬೇಕು ಎಂಬ ಮನೋಭಾವ ಜನರಲ್ಲಿದೆ. ಹೀಗಾಗಿ ಕ್ಷೇತ್ರದಲ್ಲಿ ಚುನಾವಣೆ ಬಗ್ಗೆ ಜನರಲ್ಲಿ ಅಂತಹ ಆಸಕ್ತಿ ಕಂಡು ಬರುತ್ತಿಲ್ಲ.

ಆದರೆ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ ಬಗ್ಗೆ ಮತದಾರರಲ್ಲಿ ಚರ್ಚೆ ಜೋರಾಗಿ ನಡೆದಿವೆ. ಜೆಡಿಎಸ್‌ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ ಸ್ಪರ್ಧಿಸಿರುವುದರಿಂದ ಸಂಸದ ಅನಂತಕುಮಾರ ಹೆಗಡೆ ಖಾನಾಪುರ ಕ್ಷೇತ್ರ ನಿರ್ಲಕ್ಷ್ಯ ಮಾಡುವಂತಿಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಕಳೆದ ಬಾರಿ ಕ್ಷೇತ್ರದಿಂದ 24,400 ಅಧಿಕ ಮತಗಳನ್ನು ಬಿಜೆಪಿಗೆ ತಂದು ಕೊಟ್ಟಿದ್ದರು. ಅಸ್ನೋಟಿಕರ ಇದನ್ನು ತಗ್ಗಿಸಲು ಈಗ ತಮ್ಮದೇ ಆದ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಹಾಲಿ ಸಂಸದರ ಬಗ್ಗೆ ಒಂದಿಷ್ಟು ಅಸಮಾಧಾನ ಇದ್ದರೂ ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಗಾಳಿ ಹೆಚ್ಚು ಪ್ರಭಾವ ಬೀರಿದಂತೆ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮೈತ್ರಿಕೂಟದ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಮರಾಠಿ ಭಾಷಿಕರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯ ಹಲವು ನಾಯಕರು ಆಗಮಿಸಿ ಸಭೆಗಳನ್ನು ನಡೆಸಿದ್ದು ಬಿಟ್ಟರೆ ರಾಜ್ಯಮಟ್ಟದ ಯಾವ ದೊಡ್ಡ ನಾಯಕರು ಇಲ್ಲಿಗೆ ಬಂದಿಲ್ಲ. ಆದರೆ ಮೈತ್ರಿ ಅಭ್ಯರ್ಥಿ ಪರ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿ ಪ್ರಚಾರ ಮಾಡಿದ್ದಾರೆ. ಏ.18ರ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿದ್ದಾರೆ. ಇನ್ನು ಭಾಷಾ ವಿವಾದದ ಮೇಲೆ ಇಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಎಂಇಎಸ್‌ ಈ ಚುನಾವಣೆಯಲ್ಲಿ ಮಾತ್ರ ಮೌನವಾಗಿರುತ್ತದೆ.

ಖಾನಾಪುರ ಕ್ಷೇತ್ರ ಶಾಸಕರಾಗಿ ಕಾಂಗ್ರೆಸ್‌ನ ಡಾ| ಅಂಜಲಿ ನಿಂಬಾಳಕರ ಇರುವುದು ಜೆಡಿಎಸ್‌
ಅಭ್ಯರ್ಥಿ ಅಸ್ನೋಟಿಕರಗೆ ಸಹಕಾರಿಯಾಗಿದೆ. ಆದರೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯ ಇಲ್ಲಿ ಯಾವ ವೈಮನಸ್ಸು ಇಲ್ಲವಾದರೂ ಪ್ರಚಾರ ಉತ್ಸಾಹ ಅಷ್ಟಾಗಿ ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ವಿರಳ. ರೈತ ಸಮುದಾಯವೇ ಹೆಚ್ಚು. ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನೂ ಕಾಣುತ್ತಿಲ್ಲ. ಖಾನಾಪುರ ಮತಕ್ಷೇತ್ರ ಯಾವುದೇ ಅಭಿವೃದ್ಧಿ ಹೊಂದಿಲ್ಲ ಎಂಬ ಅಸಮಾಧಾನ ಮತದಾರರಲ್ಲಿ ಕಾಣುತ್ತಿದೆ.

ಮಹಾದಾಯಿ ಯೋಜನೆ ಹಾಗೂ ರೈತರಿಗೆ ನೀರಾವರಿ ಮಾಡಲು ಬ್ಯಾರೇಜ್‌ಗಳ ಅಗತ್ಯ ಕೂಗು ಬಹಳವಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಚರ್ಚೆಯಾಗುತ್ತಿದೆ. ಇದು ಚುನಾವಣೆ ವಿಷಯವಾಗುತ್ತಿಲ್ಲ. ಬಾಲಕೋಟ್‌ ಘಟನೆ ರಫೇಲ್‌ ವರದಿ ಬಗ್ಗೆ ಅಷ್ಟೊಂದು ಅರಿವಿಲ್ಲ. ಇದನ್ನು ಬಿಜೆಪಿ ಕಾರ್ಯಕರ್ತರು ತಿಳಿ ಹೇಳುತ್ತಿದ್ದಾರೆ. ಆದರೆ ದೇಶ ರಕ್ಷಣೆಗೆ ಮೋದಿ ಬೇಕು ಎನ್ನುವ ಮನೋಭಾವ ಎದ್ದು ಕಾಣಿಸುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜೋಯಿಡಾ: ರಾಮನಗರದಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿ ನಿಯಮಮೀರಿದ ಬ್ಲಾಸ್ಟಿಂಗ್‌ ವಿರುದ್ಧ ಸಿಡಿದೆದ್ದ ರಾಮನಗರ ಗ್ರಾಮಸ್ಥರು ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟನೆ...

  • ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಬಂಡಾಯದ ವಾತಾವರಣ...

  • ಕುಮಟಾ: ಕನಕದಾಸರು ಕೀರ್ತನೆ ಮೂಲಕ ಸಾಮಾಜಿಕ ಅನಿಷ್ಠಗಳು ಹಾಗೂ ಜಾತಿ ಪದ್ಧತಿಯಂತಹ ಸಮಾಜದಲ್ಲಿನ ಹಲವು ಅಂಧಕಾರಗಳನ್ನು ಹೋಗಲಾಡಿಸಲು ಹೋರಾಟ ಮಾಡಿದವರು. ಅವರು...

  • ಹೊನ್ನಾವರ: ಕನ್ನಡ ನಾಡು ಕಂಡ ಅನನ್ಯ ಪ್ರತಿಭೆ, ಅಪರೂಪದ ಸಂಶೋಧಕ, ಲೋಕಸಂಚಾರಿ, ಪ್ರಾಣಿ-ಪಕ್ಷ ತಜ್ಞ, ಸೃಜನಶೀಲ ಬರಹಗಾರ, ಈ ಎಲ್ಲ ವಿಷಯಗಳನ್ನು ತಮ್ಮ ಲೇಖನಿ ಮತ್ತು...

  • ಕುಮಟಾ: ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಮೀನು ಮಾರಾಟಗಾರಮಹಿಳೆಯರಿಗೆ ಹಲವು ತಿಂಗಳಿಂದ ಯಾವುದೇ ಮೂಲ ಸೌಲಭ್ಯ...

ಹೊಸ ಸೇರ್ಪಡೆ