ಶಿರಸಿಯಲ್ಲೇ‌ ಬರೆದ ‘ನೋಡ್ಯಾಳ ರೊಕ್ಕ, ಬರತಾಳ ಪಕ್ಕ’ ನಾಟಕಕ್ಕೆ ಭರ್ಜರಿ ರೆಸ್ಪಾನ್ಸ್


Team Udayavani, Apr 4, 2022, 2:33 PM IST

Untitled-1

ಶಿರಸಿ: ಶಿರಸಿಯಲ್ಲೇ‌ ಕುಳಿತು ಬರೆದ ನಾಟಕವೊಂದು ಕಳೆದ‌ ಎರಡು ವಾರದಿಂದ ಹೌಸ್ ಫುಲ್ ಪ್ರದರ್ಶನವಾಗಿ ರಂಗದಲ್ಲಿ ಓಡುತ್ತಿದೆ.

ನಗರದಲ್ಲಿ 2018ರ ಲಾಕ್ ಡೌನ್ ನಲ್ಲಿ  ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿಯ ನಾಟಕಕಾರ, ಕಲಾವಿದ ಚಿಂದೋಡಿ ಶ್ರೀಕಂಠೇಶ‌ ಅವರು ನೋಡ್ಯಾಳ ರೊಕ್ಕ, ಬರತಾಳ ಪಕ್ಕ ನಾಟಕ ಬರೆದಿದ್ದರು. ಅದು‌ ಈಗ ಮಾರಿಕಾಂಬಾ‌ ದೇವಿ‌ ಜಾತ್ರಾ ಮಹೋತ್ಸವಕ್ಕೆ ಹಾಕಿದ ನಾಟಕ‌ ಟೆಂಟ್ ನಲ್ಲಿ ನಿತ್ಯ ಎರಡು ಪ್ರದರ್ಶನ ಕಾಣುತ್ತಿದೆ.

ಸುಮಾರು 13 ಕಲಾವಿದರು ರಂಗದಲ್ಲಿ ಮನ ಮಿಡಿಯುವ ಕಥೆ ಪ್ರದರ್ಶನ ನೀಡಲಿದ್ದು, ಇಡೀ ಕುಟುಂಬ ನೋಡಬಹುದಾದ ಹಾಸ್ಯ ಭರಿತ ನಾಟಕವೂ ಇದಾಗಿದೆ.

ಲಾಕ್ ಡೌನ್ ಕಥೆ:

ಕಳೆದ 2018 ರ ಮಾರಿಕಾಂಬಾ ದೇವಿ ಜಾತ್ರಾ‌ಮಹೋತ್ಸವಕ್ಕೆ ಕೆಬಿಆರ್ ಡ್ರಾಮಾ ಕಂಪನಿ‌ ಕೂಡ ಟೆಂಟ್ ಹಾಕಿತ್ತು. ಆದರೆ, ಕೊರೋನಾ ಕಾರಣದಿಂದ ನಾಟಕ ಪ್ರದರ್ಶನ ನಿಲ್ಲಿಸಬೇಕಾಯಿತು.

ಆಗ ಬಹುತೇಕ ಕಲಾವಿದರೆಲ್ಲ ಇಲ್ಲೇ ಉಳಿದರು. ಆ 2 ತಿಂಗಳ ಸಮಯದಲ್ಲಿ ಕಂಪನಿಯ ಯಜಮಾನರೂ ಆದ ಚಿಂದೋಡಿ ಶ್ರೀಕಂಠೇಶ ಅವರು ಈ ನಾಟಕ ಬರೆಯಲು ಆರಂಭಿಸಿದರು. ತಾಯಿ‌ಕೃಪೆ ಒಳ್ಳೆ‌ಪ್ರತಿಕ್ರಿಯೆ ಇದೆ ಎನ್ನುತ್ತಾರೆ ಶ್ರೀಕಂಠೇಶ.

ಹಲವಡೆ ಪ್ರದರ್ಶನ:

ನೋಡ್ಯಾಳ ರೊಕ್ಕ, ಬರ್ತಾಳ ಪಕ್ಕ ನಾಟಕ ಈಗಗಾಗಲೇ‌ ಕೊಪ್ಪಳ ಸೇರಿದಂತೆ ಅನೇಕ ಕಡೆ ಪ್ರದರ್ಶನ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿಯದ್ದೂ ಸೇರಿಸಿ ಶಿರಸಿಯಲ್ಲಿ ಇದರ ಪ್ರದರ್ಶನ ಒಟ್ಟೂ 300 ದಾಟಿದೆ ಎಂಬುದು ಖುಷಿ ಎನ್ನುತ್ತಾರೆ‌ ನಾಟಕಕಾರ, ಕಲಾವಿದ ‌ಶ್ರೀಕಂಠೇಶ.

ಶ್ರೀಕಂಠೇಶ ಅವರು ಈ‌ ಮೊದಲು ಹಿಂದೆ ನಿದ್ದೆಗೆಡಿಸ್ಯಾಳ ಬಸಲಿಂಗಿ, ಸಿಂಪಲ್ ಹುಡುಗ ಡಿಂಪಲ್ ಹುಡುಗಿ ನಾಟಕ ಬರೆದಿದ್ದರು. ಇದೀಗ ಈ ರಂಗ ಪ್ರಯೋಗ ಮೂರನೇ‌ ಕೃತಿ 300 ಪ್ರದರ್ಶನ ದಾಟಿಸಿದೆ.

ಕೌಟುಂಬಿಕ ಕಥಾನಕ:

ನಿವೃತ್ತ ಅಂಚೆ ಅಧಿಕಾರಿ ಕುಟುಂಬ, ಮಗಳ‌ ಮದುವೆ,  ವರದಕ್ಷಿಣೆ, ಕಡ್ನಿ‌ ಮಾರಾಟ ಸುತ್ತ ಇದೆ. ಒಂದೇ ಕಡೆ ಕಡ್ನಿ‌ ಮಾರಾಟ, ಹಣ ಪಡೆದ ಬೀಗರು, ಮಧು ಮಕ್ಕಳ ಪ್ರಥಮ ರಾತ್ರಿ ದೃಶ್ಯವನ್ನು ಲೈಟಿಂಗ್ ಬೆಳಕಿನಲ್ಲಿ ಸಂಯೋಜಿಸಿದ್ದಾರೆ. ಹಾಸ್ಯ ಈ ನಾಟಕದ ವಿಶೆಷವಾಗಿದೆ. ಬೀಗರ ಪಾತ್ರವನ್ನು ವಿಶಿಷ್ಟವಾಗಿ ಕಟ್ಟಲಾಗಿದೆ.

ಚಲನಚಿತ್ರ ನಟ ವಿಜಯಕುಮಾರ‌ ಕೂಡ ಪಾತ್ರ‌ ಮಾಡುತ್ತಿದ್ದಾರೆ. ಚಿಂದೋಡಿ ವಿಜಯಕುಮಾರ್ ಜೊತೆ ಅಜಿತ್ ಕುಮಾರ, ರಾಘು, ಸಿ.ಕೆ.ಮಂದಾಕಿನಿ,  ಸಿ.ವಿ.ದೀಪಾ, ಕಾಂಚನ,  ಚಿಂದೋಡಿ ಶ್ರೀಕಂಠೇಶ, ಕಿಶೋರಕುಮಾರ, ಲಕ್ಷ್ಮೀ, ಆನಂದ ಇತರರು ರಂಗದಲ್ಲಿ ಇದ್ದಾರೆ.

ಅಪರೂಪದ ಕಥಾ ಹಂದರದ ನಾಟಕ. ಕಳೆದ ಲಾಕ್ ಡೌನ್ ವೇಳೆ ಬರೆದ ನಾಟಕ. ಇಡೀ‌ ಕುಟುಂಬ ನರ್ತಿಸುವ‌ ಹಾಡೂ ಇದೆ.ಶ್ರೀಕಂಠೇಶ, ನಾಟಕಕಾರ

ಈ ನಾಟಕದಲ್ಲಿ‌ ಹಾಸ್ಯ ಇಷ್ಟವಾಯಿತು. ಹೊಸತನ ಇತ್ತು.-ಮಧುರಾ ಭಟ್ಟ ಕಕ್ಕಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.