ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹ
Team Udayavani, Jan 15, 2021, 1:45 PM IST
ಭಟ್ಕಳ: ಮುರ್ಡೇಶ್ವರ ನಾಕೆಯಿಂದ ದೇವಸ್ಥಾನದವರೆಗಿನ ರಸ್ತೆ ಮಾಡಲಾಗುತ್ತಿದ್ದು ಅದು ಟೆಂಡರ್‌ನಲ್ಲಿ ನಮೂದಿಸಿರುವ ನಮೂನೆಯಲ್ಲಿ ಮಾಡಬೇಕು ಎಂದು ಮುರ್ಡೇಶ್ವರ ನಾಗರಿಕ ಸೇವಾ ಸಮಿತಿ ಆಗ್ರಹಿಸಿದೆ.
ರಸ್ತೆಗೆ ದಾರಿದೀಪಗಳನ್ನು ಹಾಗೂ ಎರಡೂ ಕಡೆಗಳಲ್ಲಿ ಚರಂಡಿ ಮಾಡಬೇಕು. ವಾಹನಗಳಿಗೆ ಅನುಕೂಲವಾಗುವಂತೆ ಸಾಧ್ಯವಾದ ಕಡೆಯಲ್ಲಿ ರಸ್ತೆ ಡಿವೈಡರ್ ಅಳವಡಿಸಬೇಕು. ನಾಕೆಯಿಂದ ಮುರ್ಡೇಶ್ವರ ದೇವಸ್ಥಾನದವರೆಗಿನ ರಸ್ತೆ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಆಗುತ್ತಿದ್ದು ಇದರಿಂದ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು ಅದನ್ನು ತ್ವರಿತಗತಿಯಿಂದ ಮಾಡಿ ಮುಗಿಸುವಂತಾಗಬೇಕು. ಪೇಟೆ ಮಧ್ಯದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರಿ ನಿಯಮಗಳನ್ನು ಕ್ರಿಯಾರೂಪಕ್ಕೆ ತರುವ ವ್ಯವಸ್ಥೆ ಆಗಬೇಕು.
ವಾಹನ ಸವಾರರಿಗೆ, ಪ್ರವಾಸಿಗರಿಗೆ ವಾಹನಗಳನ್ನು ನಿಲ್ಲಿಸಲು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಆಗಬೇಕು. ಪಾರ್ಕಿಂಗ್ ಜಾಗದ ಕುರಿತು ಮುರ್ಡೇಶ್ವರ ದ ಕಸ್ಟಮ್ ಇಲಾಖೆ, ಬಂದರು ಇಲಾಖೆ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಜಾಗಾ ಈಗಾಗಲೇ ಅತಿಕ್ರಮಣವಾಗಿದ್ದು ಅವುಗಳನ್ನು ಗುರುತಿಸಿ ವಶಕ್ಕೆ ಪಡೆದು ಅಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದಲ್ಲಿ ಅನುಕೂಲವಾಗುವುದು.
ಮುರ್ಡೇಶ್ವರ ಮಧ್ಯಭಾಗದಲ್ಲಿ ಜನಸಂಚಾರಕ್ಕೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಲು ಸಂಬಂಧಿತ ಇಲಾಖೆಗಳಿಗೆ ಹಾಗೂ ಪೊಲೀಸ್ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು. ಬಸ್ತಿ-ಮುಡೇìಶ್ವರ ಕೂಡುವ ರಸ್ತೆಯಲ್ಲಿ ವಾಹನಗ ಓಡಾಟಕ್ಕೆ ತೀವ್ರ ತೊಂದರೆ ಇದ್ದು ಅದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಸುಗಮ ಸಂಚಾರಕ್ಕೆ ಹಾಗೂ ಬಸ್ತಿ ಮೂಲಕ ಬರುವ ವಾಹನಗಳಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಮೂಲಭೂತ ಸೌಕರ್ಯಗಳ ಕೊರತೆ ವಿಪರೀತವಾಗಿದ್ದು ಪ್ರವಾಸಿಗರು ಮುರ್ಡೇಶ್ವರ ಕ್ಕೆ ಬಂದರೆ ಒಂದೂ ಕೂಡಾ ಶೌಚಾಲಯ ಇಲ್ಲವಾದ್ದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಪೊಲೀಸ್ ಪಡೆಯಿಂದ ಹೆಲ್ಮೆಟ್ ಜಾಗೃತಿ
ಅಲ್ಲದೇ ಕುಡಿಯುವ ನೀರಿಗಾಗಿ ತೊಂದರೆ ಪಡುವ ಪರಿಸ್ಥಿತಿ ಇದ್ದು ಗ್ರಾಪಂ ಮೂಲಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅವುಗಳ ನಿರ್ವಹಣೆಗೆ ಕೂಡಾ ಸರಿಯಾದ ವ್ಯವಸ್ಥೆ ಮಾಡಬೇಕು. ಸ್ವತ್ಛತಾ ವ್ಯವಸ್ಥೆಗೆ ನಿಯಮಾವಳಿ ರೂಪಿಸಿ ಕ್ರಮಕೈಗೊಳ್ಳಬೇಕು. ವಾಹನಗಳನ್ನು ರಸ್ತೆ ಪಕ್ಕದಲ್ಲಿಯೇ ಪಾರ್ಕಿಂಗ್ ಮಾಡುವುದರಿಂದ ಬೇರೆ ವಾಹನ ಸಂಚಾರಕ್ಕೆ ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದ್ದು ಅವುಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಲಾಗದೆ. ಮುರ್ಡೇಶ್ವರ ಬೀಚ್ ಭಾಗದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತ್ವರಿತವಾಗಿ ನಿಯಂತ್ರಿಸಬೇಕು ಹಾಗೂ ಅಲ್ಲಿ ವ್ಯವಸ್ಥಿತವಾಗಿ ವ್ಯಾಪಾರ ವಹಿವಾಟಿಗೆ ಸರಕಾರದಿಂದಲೇ ಅಂಗಡಿಗಳನ್ನು ನಿರ್ಮಿಸಿ ಟೆಂಡರ್ ಮೂಲಕ ನೀಡಿದಲ್ಲಿ ಸರಕಾರಕ್ಕೂ ಆದಾಯ ಬರುವುದು. ಅಲ್ಲದೇ ಮೀನುಗಾರರಿಗೆ ಸರಿಯಾಗ ವ್ಯವಸ್ಥೆ ಮಾಡಿಕೊಡಬೇಕು.
ವಾರದ ಸಂತೆಯು ರಸ್ತೆ ಪಕ್ಕದಲ್ಲಿಯೇ ನಡೆಯುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರೂ ಅ ಕವರುವುದರಿಂದ ಒತ್ತಡ ಜಾಸ್ತಿಯಾಗುತ್ತಿದೆ. ಸಂತೆ ಮಾರುಕಟ್ಟೆಯನ್ನು ಬಯಲು ಪ್ರದೇಶದಲ್ಲಿ ನಡೆಸುವಂತೆ ಮಾಡಿ ರಸ್ತೆ ಖುಲ್ಲಾ ಮಾಡಬೇಕು. ಮುರ್ಡೇಶ್ವರ ದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅನೇಕ ಅಪರಾಧಗಳನ್ನು, ಸ್ವತ್ಛತಾ ನಿಯಮಗಳನ್ನು ಪಾಲಿಸಲು ಅನುಕೂಲವಾಗುವುದು. ಇದಲ್ಲದೇ ಇನ್ನೂ ಅನೇಕ ಬೇಡಿಕೆಗಳಿದ್ದು ಇವುಗಳನ್ನು ತ್ವರಿತಗತಿಯಲ್ಲಿ ಪೂರೈಸಬೇಕು ಎಂದೂ ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ಮಳೆ ಹಾನಿ ನಷ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಭಟ್ಕಳ : ಭಾರಿ ಮಳೆಗೆ ನಲುಗಿದ ಮುಂಡಳ್ಳಿ : ಕುಸಿದು ಬಿದ್ದ ಶಾಲೆಯ ಗೋಡೆ, ತಪ್ಪಿದ ದುರಂತ
ಭಟ್ಕಳ : ಗುಡ್ಡ ಕುಸಿದು ನಾಲ್ಕು ಜೀವ ಬಲಿ ಪಡೆದ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತ
ಭಟ್ಕಳ: ಕಾರು ನಡುವೆ ಲಾರಿ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು
ಹುಲೇಕಲ್ ನಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ‘ಭಾಷೆ ಭಾವಯಾನ’ವಾಗಿಸಿದ ಪ್ರಸಂಗ!
MUST WATCH
ಹೊಸ ಸೇರ್ಪಡೆ
ಕಾಮನ್ವೆಲ್ತ್ ಗೇಮ್ಸ್ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ
ಕಾಮನ್ವೆಲ್ತ್ ಗೇಮ್ಸ್ : 10,000 ಮೀ. ನಡಿಗೆ: ಸಂದೀಪ್ಗೆ ಕಂಚು
ಕೊರಟಗೆರೆ: ಅನಿಲ್ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್