ಭತ್ತದ ನಾಟಿಗೆ ನೀರಿನ ಕೊರತೆ


Team Udayavani, Jul 25, 2020, 9:06 AM IST

ಭತ್ತದ ನಾಟಿಗೆ ನೀರಿನ ಕೊರತೆ

ಕುಮಟಾ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆ ಸುರಿಯದ ಪರಿಣಾಮ ಭತ್ತದ ನಾಟಿ ಕಾರ್ಯಕ್ಕೆ ತೊಡಕಾಗಿದ್ದು, ನಾಟಿ ಮಾಡಿದ ಗದ್ದೆಗಳೂ ನೀರಿಲ್ಲದೇ ಕೆಂಪು ಬಣ್ಣಕ್ಕೆ ಪರಿವರ್ತನೆಯಾಗತೊಡಗಿದೆ. ಇದರಿಂದ ರೈತಾಪಿ ಸಮುದಾಯದಲ್ಲಿ ಆತಂಕ ಮನೆ ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲೂಕಿನ ಕೂಜಳ್ಳಿ, ಕುಮಟಾ, ಗೋಕರ್ಣ ಹಾಗೂ ಮಿರ್ಜಾನ ಸೇರಿ ಒಟ್ಟೂ ನಾಲ್ಕು ಹೋಬಳಿಗಳ 2,860 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಅಘನಾಶಿನಿ, ಬಾಡ, ಕಾಗಾಲ, ಗುಡೇಅಂಗಡಿ, ಹೊಲನಗದ್ದೆ, ತೆಪ್ಪ, ಮದ್ಗುಣಿ, ಕೊಡಕಣಿ ಇನ್ನಿತರ ಭಾಗಗಳಲ್ಲಿ ಹೆಚ್ಚಾಗಿ ಜಯಾ ತಳಿ, ಗೋಕರ್ಣ ಭಾಗದಲ್ಲಿ ಪಿ.ಎ.ಸಿ 837 ಜಾತಿಯ ಹೈಬ್ರಿಡ್‌ ತಳಿ ಹಾಗೂ ಕೂಜಳ್ಳಿ ಹೊಬಳಿಯ ಧಾರೇಶ್ವರ, ಹೊಳೆಗದ್ದೆ ಭಾಗದಲ್ಲಿ ಎಮ್‌.ಓ-4 ಜಾತಿಯ ಕೆಂಪು ಅಕ್ಕಿಯ ಭತ್ತವನ್ನು ಬೆಳೆಯಲಾಗುತ್ತಿದೆ. ಕೊರೊನಾ ನಡುವೆಯೇ ಬದುಕು ಸಾಗಿಸುವ ಅನಿವಾರ್ಯತೆಯಲ್ಲಿ ಉಸಿರು ಬಿಗಿ ಹಿಡಿದು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ ರೈತರು ಈಗಾಗಲೇ ಕೃಷಿ ಕೇಂದ್ರಗಳಿಂದ ಬಿತ್ತನೆಯ ಬೀಜ ಪಡೆದು ಶೇ. 80 ರಷ್ಟು ನಾಟಿ ಕಾರ್ಯ ಮುಗಿಸಿದ್ದಾರೆ. ಇನ್ನು ಒಂದು ವಾರದಿಂದ ಮಳೆ ಇಲ್ಲದ ಕಾರಣ ಗದ್ದೆಗಳಲ್ಲಿನ ನೀರು ಬತ್ತಿ, ಘಟ್ಟದ ತಪ್ಪಲು ಪ್ರದೇಶಗಳಲ್ಲಿ ನಾಟಿ ಕಾರ್ಯಕ್ಕೆ ತೀವ್ರ ತೊಡಕಾಗಿದೆ. ಈಗಾಗಲೇ ನಾಟಿ ಮುಗಿದ ಪ್ರದೇಶಗಳಲ್ಲೂ ನೀರಿಲ್ಲದೇ, ಭತ್ತದ ಬೆಳೆಗೆ ವಿವಿಧ ರೀತಿಯ ಬಾಧೆ ಎದುರಾಗುವಂತಾಗಿದ್ದು, ಇದರಿಂದ ಅನ್ನದಾತನಲ್ಲಿ ಆತಂಕ ಮನೆ ಮಾಡಿದೆ.

ಕೆಂಪು ಬಣ್ಣಕ್ಕೆ ತಿರುಗಿದ ಭತ್ತದ ಸಸಿ: ಈಗಾಗಲೇ ನಾಟಿ ಮುಗಿದ ಪ್ರದೇಶಗಳಲ್ಲಿನ ಗದ್ದೆಗಳಲ್ಲಿ ನೀರಿಲ್ಲದೇ, ಪೊಟ್ಯಾಷ್‌ ಪ್ರಮಾಣ ಕೊರತೆಯಾಗಿ, ಕಬ್ಬಿಣದ ಅಂಶ ಅಧಿಕವಾಗತೊಡಗಿದೆ. ಇದರಿಂದ ಭತ್ತದ ಸಸಿಗಳು (ಕಾಯಲ್‌) ಕೆಂಪು ಬಣ್ಣಕ್ಕೆ ಪರಿವರ್ತನೆಯಾಗಿ, ಬೆಂಕಿ ರೋಗದಂತೆ ಗೋಚರವಾಗತೊಡಗಿದೆ. ಈ ರೋಗದಿಂದ ಭತ್ತದ ಸಸಿಗಳು ಸಮೃದ್ಧವಾಗಿ ಬೆಳೆಯದೇ ಫಸಲೂ ಕಡಿಮೆಯಾಗಲಿದೆ ಎಂಬ ಆತಂಕ ಸಾಲ ಮಾಡಿ ಕೃಷಿಯತ್ತ ಒಲವು ತೋರಿದ ರೈತಾಪಿ ಸಮುದಾಯಕ್ಕೆ ಕಾಡತೊಡಗಿದೆ.

ಕರಾವಳಿ ಭಾಗಗಳ ನಾಟಿ ಮಾಡಿದ ಗದ್ದೆಗಳಲ್ಲಿ ನೀರಿಲ್ಲದೇ ಕಬ್ಬಿಣದ ಪ್ರಮಾಣ ಅಧಿಕಗೊಳ್ಳುತ್ತಿದೆ. ಇದರಿಂದ ಪೊಟ್ಯಾಷ್‌ ಪ್ರಮಾಣದ ಕೊರತೆಯಿಂದ ಭತ್ತದ ಏಳಿಗೆಗೆ ಕುಂಠಿತವಾಗಲಿದೆ. ಕಬ್ಬಿಣದ ಪ್ರಮಾಣ ಅಧಿಕಗೊಂಡ ಪ್ರದೇಶಗಳಲ್ಲಿ ಸುಣ್ಣದ ತಿಳಿನೀರು ಸಿಂಪಡಣೆ ಮಾಡಿ, ಪೊಟ್ಯಾಷ್‌ ಪ್ರಮಾಣವನ್ನು ಅ ಧಿ‌ಗೊಳಿಸಬೇಕು. ಇದರಿಂದ ಕೆಂಪು ಬಣ್ಣಕ್ಕೆ ತಿರುಗಿದ ಭತ್ತದ ಸಸಿಗಳು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಂಕರ ಹೆಗಡೆ.

ಟಾಪ್ ನ್ಯೂಸ್

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sirsi news

ಗೋಡೆ ನಾರಾಯಣ ಹೆಗಡೆಯವರಿಗೆ ಒಲಿದ  ಅನಂತ ಶ್ರೀ ಪ್ರಶಸ್ತಿ

sirsi news

ಅಕ್ರಮ ಗೋ ಹತ್ಯೆ ಆರೋಪ : ಬಂಧನ

27

ಸಿಗಡಿ ಕೃಷಿಗೆ ಅವಕಾಶ ಕೊಡಬಾರದು: ಗ್ರಾಮಸ್ಥರ ಮನವಿ

dandeli news

ಅಕ್ರಮವಾಗಿ ಕೋಣಗಳ ಸಾಗಾಟ: ಲಾರಿ, ಕಾರು ಸಮೇತ ಆರೋಪಿಗಳ ಬಂಧನ

ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು

ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

DCC Bank has not been involved in any transactions

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ

Warrior M Jayaram Nayak honored with Presidential Medal of Honor

ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.