ಹೊರ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

Team Udayavani, Jul 20, 2019, 4:58 PM IST

ಅಂಕೋಲಾ: ತಾಲೂಕು ಆಸ್ಪತ್ರೆ ಎದುರು ಹೊರ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಅಂಕೋಲಾ: ತಾಲೂಕಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗೌರವಧನ ನೀಡದೆ ಸೇವೆಯಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಶುಕ್ರವಾರ ತಮ್ಮ ಬೇಡಿಕೆ ಇಡೆರಿಸುವಂತೆ ಧರಣಿ ನಡೆಸಿದರು.

ಹೊರಗುತ್ತಿಗೆ ಕಾರ್ಮಿಕ ಸಂಘದ ರವಿಕಲಾ ಗುರವ ಮಾತನಾಡಿ ನಾವು ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ. ನಮಗೆ ಎಂಟು ತಿಂಗಳಿಂದ ಯಾವುದೇ ಗೌರವಧನ ನೀಡಿಲ್ಲ. ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ನಮಗೆ ಕೆಲಸ ಕೊಡಿ. ಏಕಾಏಕಿ ಹೊರ ದಬ್ಬಿದರೆ ನಾವೆಲ್ಲಿ ಹೋಗಬೇಕು. ನಮಗೆ ಜೀವನ ನಡೆಸುವುದು ಕಷ್ಟವಾಗಿದೆ. ನಮ್ಮ ಹೋರಾಟ ಬೇಡಿಕೆ ಈಡೇರುವವರೆಗೆ ಮುಂದುವರಿಯಲಿದೆ ಎಂದು ಹೇಳಿದರು.

ಸ್ಥಳಕ್ಕಾಗಮಿಸಿದ ಡಿಎಚ್ಒ ಡಾ| ಅಶೋಕಕುಮಾರ ಮಾತನಾಡಿ ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ನೀವೆಲ್ಲರೂ ನಮ್ಮ ಕುಟುಂಬದವರರು ಇದ್ದ ಹಾಗೆ ನಮ್ಮ ಜೊತೆ ಕೆಲಸ ಮಾಡುತ್ತಿದ್ದೀರಿ. ಜು.30ರವರೆಗೆ ತಾಳ್ಮೆಯಿಂದಿರಿ. ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮೂರು ತಿಂಗಳ ಗೌರವಧನ ಕೊಡಿಸಲು ಪ್ರಯತ್ನಿಸುತ್ತೇನೆ. ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಈ ಮೊದಲು ನೇಮಕವಾಗಿರುವ ಎಲ್ಲರಿಗೂ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದರು.

ನಿತ್ಯಾನಂದ ನಾಯ್ಕ, ಶೈಲಾ ಬಂಡಾರಿ, ಮಹೇಶ ನಾಯ್ಕ, ದಿವ್ಯಾ ನಾಯ್ಕ, ನೀಲಾ ಆಗೇರ, ಅಶ್ವಿ‌ನಿ ಹರಿಜನ್‌, ರಾಮಚಂದ್ರ ಇತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ