ಮೆಕ್ಕೆ ಜೋಳಕ್ಕೆ ಸೈನಿಕ ಹುಳು ದಾಳಿ

Team Udayavani, Jul 1, 2020, 5:18 PM IST

ಮೆಕ್ಕೆ ಜೋಳಕ್ಕೆ  ಸೈನಿಕ ಹುಳು ದಾಳಿ

ಶಿರಸಿ: ಜಿಲ್ಲೆಯಲ್ಲಿ ಸುಮಾರು 9136 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅಲ್ಲಲ್ಲಿ ಫಾಲ್‌ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ರೂಪಾ ಪಾಟೀಲ್‌ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ನಿರ್ದೇಶಕ ಶಿವಪ್ರಸಾದ ಗಾಂವಕರ್‌, ಇನ್ನಿತರ ಕೃಷಿ ಇಲಾಖೆ ಅಧಿಕಾರಿಗಳು ಹಳಿಯಾಳ ತಾಲೂಕಿನ ಸಾಂಬ್ರಾಣಿ, ಗುಂಡೊಳ್ಳಿ, ಅಜುಮನಾಳ ತಾಂಡ, ತಿಪ್ಪಣಗೇರಿ ಹಾಗೂ ಯಲ್ಲಾಪುರ ತಾಲೂಕಿನ ಬೈಲಂದೂರು, ಮಂಗ್ಯಾನ ತಾವರಗೇರೆ, ಮದನೂರು ಭಾಗದಲ್ಲಿನ ಸೈನಿಕ ಹುಳು ಬಾಧಿತ ಮೆಕ್ಕೆ ಜೋಳ ತಾಕುಗಳಿಗೆ ಭೇಟಿ ನೀಡಿ ಪರಿಶಿಲಿಸಿದರು.

ಮೆಕ್ಕೆಜೋಳ ಬೆಳೆ 10 ರಿಂದ 15 ದಿವಸವಿದ್ದಾಗ ಶೈನಿಕ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತವೆ. ಕೀಟದ ವೈಜ್ಞಾನಿಕ ಹೆಸರು ನ್ಪೊಡೋಪ್ಟೆರಾ ಪ್ರೊಜಿಪರ್ಡ್‌ ಪತಂಗ ಜಾತಿಗೆ ಸೇರಿದೆ. ಈ ಕೀಟದ ಪ್ರಥಮ ಹಂತದ ಮರಿ ಕೀಡೆಗಳು ಎಲೆಯ ಪತ್ರ ಹರಿತ್ತನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಪಾರದರ್ಶಕ ಪದರಿನ ಕಿಂಡಿಗಳನ್ನು ಕಾಣಬಹುದು. ದ್ವಿತೀಯ ಮತ್ತು ತೃತೀಯ ಹಂತದ ಕೀಡೆಗಳು ಸುಳಿಯಲ್ಲಿರುವ ಎಲೆಗಳಲ್ಲಿ ರಂಧ್ರ ಮಾಡುತ್ತವೆ. ನಂತರ ಬೆಳೆದಂತೆಲ್ಲ ಹುಳುಗಳು ಪಕ್ಕದ ಗಿಡಗಳಿಗೆ ಹರಡಿ ಗಿಡದ ಸುಳಿಯಲ್ಲಿ ಉಳಿದುಕೊಂಡು ಎಲೆಯನ್ನು ತಿಂದು ಬದುಕುತ್ತವೆ. ಸುಳಿಯಲ್ಲಿ ಮತ್ತು ಎಲೆಯ ಮೇಲೆ ಹುಳುವಿನ ಹಿಕ್ಕೆ, ಲದ್ದಿ ಕಂಡು ಬರುವುದು ಸಾಮಾನ್ಯ. ಈ ಕೀಡೆ ಕೆಲಮೊಮ್ಮೆ ತೆನೆ ಮತ್ತು ಕಾಳನ್ನು ಕೂಡ ಭಕ್ಷಿಸುತ್ತವೆ. ಈ ಕೀಟ ಹೆಚ್ಚಾಗಿ 40 ರಿಂದ 50 ದಿನದೊಳಗೆ ಬೆಳೆಗೆ ಹಾನಿ ಮಾಡುತ್ತವೆ. ಈ ಕೀಟದ ಹತೋಟಿ ಸರಿಯಾದ ಸಮಯದಲ್ಲಿ ಆಗದೇ ಹೋದಲ್ಲಿ ಶೇ.30 ರಿಂದ 80 ರಷ್ಟು ಇಳುವರಿ ಕುಂಠಿತವಾಗುತ್ತವೆ ಎಂದು ತಿಳಿಸಿದರು.

ಈ ಕೀಟದ ಸಮೀಕ್ಷೆಗಾಗಿ ಯಲ್ಲಾಪುರ ತಾಲೂಕಿನ ಬೈಲಂದೂರು ಹಾಗೂ ಹಳಿಯಾಳ ತಾಲೂಕಿನ ತಿಪ್ಪಣಗೇರಿ ಗ್ರಾಮದಲ್ಲಿ ಎಕರೆಗೆ 5 ರಂತೆ ಮೋಹಕ ಬಲೆಗಳನ್ನು ಪ್ರಾತ್ಯಕ್ಷಿಕೆಗಾಗಿ ಅಳವಡಿಸಲಾಗಿದೆ. ಪ್ರತಿ ಮೋಹಕ ಬಲೆಯಲ್ಲಿ ಸುಮಾರು 3 ರಿಂದ 10 ಪತಂಗಗಳು ಬಿದ್ದಿದ್ದು, ಕೀಟದ ಮೊಟ್ಟೆಯಿಡುವ ಪ್ರಮಾಣ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕೀಡೆಯು ಹತೋಟಿಗೆ ಮೆಟರೈಜಿಯಂ(ನೊಮೊರಿಯಾ) ರಿಲೈ ಜೈವಿಕ ಕೀಟನಾಶಕವನ್ನು 2ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರೆಸಿ 15 ರಿಂದ 20 ದಿನದ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು 400 ಗ್ರಾಂ ಜೈವಿಕ ಕೀಟನಾಶಕ ಬೇಕಾಗುವುದು. ನಂತರ ಪ್ರತಿ 10 ದಿನದ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಎಮಾಮೆಕ್ಟಿನ್‌ ಬೆಂಜೋಯೇಟ್‌ 0.2 ಗ್ರಾಂ ಅಥವಾ ಕ್ಲೋರ್‍ಯಾಂಟ್ರಿನಿಲಿಪ್ರೋಲ್‌ 0.2 ಮಿಲಿ ಅಥವಾ ಸ್ಪೈನೊಟೊರಮ್‌ 0-5 ಮಿಲಿ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದೂ ರೈತರಿಗೆ ಸಲಹೆ ವಿವರಿಸಿದ್ದಾರೆ.

ಟಾಪ್ ನ್ಯೂಸ್

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

siddaramaiah

ಉಪಚುನಾವಣೆಯಲ್ಲಿ ಮೈಮರೆತ ಸರ್ಕಾರ ರೈತರನ್ನು ಮರೆತಿದೆ: ಸಿದ್ದರಾಮಯ್ಯ

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಂಡೇಲಿ:  ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

ದಾಂಡೇಲಿ: ಕೊನೆಗೂ ಪತ್ತೆಯಾದ ವಿನಾಯಕ ನಗರದ ಕಾಳಿ ನದಿಯಲ್ಲಿ ಮೊಸಳೆಯ ವಶದಲ್ಲಿದ್ದ ಬಾಲಕನ ಶವ

8timingila

ಶಿರಸಿ: ಕೋಟ್ಯಾಂತರ ರೂ. ಮೌಲ್ಯದ ಅಂಬರ್ ಗ್ರೀಸ್ ವಶ, ಇಬ್ಬರ ಬಂಧನ

ವಿನಾಯಕ ನಗರದ ಕಾಳಿ ನದಿಯಲ್ಲಿ ಮುಂದುವರಿದ ಬಾಲಕನ ಶೋಧ ಕಾರ್ಯಾಚರಣೆ

ವಿನಾಯಕ ನಗರದ ಕಾಳಿ ನದಿಯಲ್ಲಿ ಮುಂದುವರಿದ ಬಾಲಕನ ಶೋಧ ಕಾರ್ಯಾಚರಣೆ

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಭಟ್ಕಳ: ವಾಟ್ಸ್ಯಾಪ್ ಗ್ರೂಪ್‌ ನಲ್ಲಿ ಸಂದೇಶ ಹಾಕಿದ್ದಕ್ಕೆ ಹಲ್ಲೆ ಆರೋಪಿಸಿ ದೂರು ದಾಖಲು

ಭಟ್ಕಳ: ವಾಟ್ಸ್ಯಾಪ್ ಗ್ರೂಪ್‌ ನಲ್ಲಿ ಸಂದೇಶ ಹಾಕಿದ್ದಕ್ಕೆ ಹಲ್ಲೆ ಆರೋಪಿಸಿ ದೂರು ದಾಖಲು

MUST WATCH

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹೊಸ ಸೇರ್ಪಡೆ

Untitled-1

ಒಂದೇ ಬಾರಿ 121 ಮಳಿಗೆ ಟೆಂಡರ್‌ಗೆ ಸೂಚನೆ

19streetlight

ಗದ್ದನಕೇರಿ ಕ್ರಾಸ್‌ನಲ್ಲಿ ಕತ್ತಲು!

18arts

‘ಕರ್ನಾಟಕ’ಕ್ಕೆ ಧಾರಾನಗರಿಯೇ ಬುನಾದಿ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.