Udayavni Special

ಸರ್ಕಾರದಿಂದಲೇ ರೈತರಿಗೆ ತೊಂದರೆ

Team Udayavani, Sep 16, 2019, 12:30 PM IST

uk-tdy-2

ಹಳಿಯಾಳ: ಕೆಡಿಸಿಸಿ ಬ್ಯಾಂಕ್‌ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಎಸ್‌.ಎಲ್. ಘೋಕ್ಲೃಕರ ಮಾತನಾಡಿದರು.

ಹಳಿಯಾಳ: ರಾಜ್ಯ ಸರ್ಕಾರದ 2018ರ ರೈತರ ಸಾಲಮನ್ನಾ ಹಣ ಸರ್ಕಾರದಿಂದ ಮಂಜೂರಿಯಾಗಿದ್ದರೂ ಹಣಕಾಸು ಇಲಾಖೆಯಿಂದ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್‌ಗೆ ಹಣ ಬಿಡುಗಡೆಯಾಗದೆ ಇರುವುದರಿಂದ ಜಿಲ್ಲೆಯ 29,112 ರೈತರಿಗೆ ತೊಂದರೆಯಾಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್. ಘೋಕ್ಲೃಕರ ಸ್ಪಷ್ಟಪಡಿಸಿದರು.

ಪಟ್ಟಣದ ಕೆಡಿಸಿಸಿ ಬ್ಯಾಂಕ್‌ ಸಭಾ ಭವನದಲ್ಲಿ ಎಲ್ಲ 13 ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ರೈತರಿಗೆ ತೊಂದರೆಯಾಗಿದೆ ಹೊರತು, ಕೆಡಿಸಿಸಿ ಬ್ಯಾಂಕಿನಿಂದಲ್ಲ. ಆದರೆ ಈ ಬಗ್ಗೆ ರೈತರಲ್ಲಿ ತಪ್ಪು ಕಲ್ಪನೆ ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ವಿಷಯದ ಕುರಿತು ಯಾರು ಬೇಕಾದರೂ ಪ್ರಶ್ನಿಸಲು ಅರ್ಹರಿದ್ದಾರೆ. ಅಲ್ಲದೇ ನ್ಯಾಯಾಲಯಕ್ಕೂ ಹೋಗಬಹುದು. ಏಕೆಂದರೆ ಬ್ಯಾಂಕ್‌ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

ಜಿಲ್ಲೆಯ 86,815 ರೈತರಿಗೆ 521.25 ಕೋಟಿ ರೂ. ಸಾಲ ಮನ್ನಾ ಮಂಜೂರಾಗಿತ್ತು. ಅದರಲ್ಲಿ 40,019 ರೈತರಿಗೆ 176.78 ಕೋಟಿ ರೂ. ಹಣ ತಲುಪಿದೆ. ಮತ್ತೂಮ್ಮೆ 17,684 ರೈತರಿಗೆ 129.94 ಕೋಟಿ ತಲುಪಿದ್ದು, 31-08-2019ಕ್ಕೆ 29,112 ರೈತರಿಗೆ 214.53 ಕೋಟಿ ರೂ. ಹಣ ಬಿಡುಗೆಯಾಗಬೇಕಿದ್ದು, ಸರ್ಕಾರ ಈ ಹಣವನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಕಾರಣ ರೈತರಿಗೆ ಮಾತ್ರವಲ್ಲದೇ ಕೆಡಿಸಿಸಿ ಬ್ಯಾಂಕಿಗೂ 7.85 ಕೋಟಿ ರೂ. ಬಡ್ಡಿ ಹಾನಿಯಾಗಿರುವುದು ಅಲ್ಲದೇ ಈ ಹಿಂದೆ 5 ಕೋಟಿ ಹಾನಿಯಾಗಿದ್ದು, ಈವರೆಗೆ 12.85 ಕೋಟಿ ಬಡ್ಡಿಯು ಹಾನಿಯಾಗುವುದರ ಮೂಲಕ ಬ್ಯಾಂಕ್‌ಗೆ ತೀರಾ ಹಿನ್ನಡೆಯಾಗಿದೆ ಎಂದು ಘೋಕ್ಲೃಕರ ಅಸಮಾಧಾನ ಹೊರಹಾಕಿದರು.

ಕೆಡಿಸಿಸಿ ಬ್ಯಾಂಕ್‌ನಿಂದ ಶೇ. 95ರಷ್ಟು ರೈತರಿಗೆ ಸಾಲ ನೀಡುವ ಮೂಲಕ ಬ್ಯಾಂಕ್‌ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಬ್ಯಾಂಕ್‌ ಹಗಲಿರುಳು ಶ್ರಮಿಸುತ್ತಿದೆ. ಆದರೆ ಕೆಲವರು ಬ್ಯಾಂಕ್‌ ಕುರಿತು ಅಪಪ್ರಚಾರ ಮಾಡುವುದಲ್ಲದೇ ರೈತರಿಗೆ ತಪ್ಪು ಕಲ್ಪನೆ ನೀಡುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ರೈತರು ಯಾವ ಕಾರಣಕ್ಕೂ ಯಾರ ಮಾತಿಗೂ ಕಿವಿ ಗೊಡದೆ ನೇರವಾಗಿ ಬ್ಯಾಂಕ್‌ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಕರೆ ನೀಡಿದರು.

ಈಗಾಗಲೇ ನೆರೆ ಹಾವಳಿಯಿಂದ ವಂಚಿತರಾದ ರೈತರು ತಮ್ಮ ಬೆಳೆ ಮತ್ತು ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರವು ದೊರಕುತ್ತಿಲ್ಲ ಎಂದ ಘೋಕ್ಲೃಕರ ಕೂಡಲೇ ಸರ್ಕಾರ ರೈತರ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರಿಗೆ ನೆರವಾಗಬೇಕೆಂದು ಆಗ್ರಹಿಸಿದರು.

ಸಹಕಾರಿ ಯುನಿಯನ್‌ ಜಿಲ್ಲಾ ಉಪಾಧ್ಯಕ್ಷ ಶಿವಪುತ್ರಪ್ಪ ನುಚಂಬ್ಲಿ, ಮೇಗರಾಜ ಪಾಟೀಲ್, ಸೇವಾ ಸಹಕಾರಿ ಸಂಘಗಳ ನಿರ್ದೇಶಕರಾದ ಸೋನಪ್ಪ ಸುನಕಾರ, ಅನಂತ ಘೋಕ್ಲೃಕರ, ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಡಿ. ಗೇವಡಿ ಮೊದಲಾದವರು ಇದ್ದರು.

ಟಾಪ್ ನ್ಯೂಸ್

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

2-dd

ಅಮಿತ್‌ ಶಾಗೆ ಶಾಸಕಿ ರೂಪಾಲಿ ಭೇಟಿ : ಹಾಲಕ್ಕಿ ಒಕ್ಕಲಿಗರನ್ನು ಎಸ್ಟಿಗೆ ಸೇರಿಸಲು ಮನವಿ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.