ಸೋದೆ ಶ್ರೀವಾದಿರಾಜ ಮಠಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ
Team Udayavani, Aug 21, 2021, 7:11 PM IST
ಶಿರಸಿ: ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋದೆ ಶ್ರೀವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾ ತ್ರಿವಿಕ್ರಮ ದೇವರ, ಶ್ರೀವಾದಿರಾಜಗುರುರಾಜರ ಹಾಗೂ ಶ್ರೀಭೂತರಾಜರ ದರ್ಶನ ಪಡೆದರು.
ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥರನ್ನು, ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥರನ್ನು ಹಾಗೂ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥರನ್ನು ಭೇಟಿಮಾಡಿ ಫಲಮಂತ್ರಾಕ್ಷತೆ ಪಡೆದರು.
ಈ ಸಂದರ್ಭದಲ್ಲಿ ಕಾಗೇರಿಯವರ ಪತ್ನಿ ಭಾರತಿ, ಸೋಂದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಗಜಾನನ ನಾಯಕ್, ಸದಸ್ಯರಾದ ಮಂಜುನಾಥ ಭಂಡಾರಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನರಸಿಂಹ ಹೆಗಡೆ ಹಾಗೂ ಮಠದ ವ್ಯವಸ್ಥಾಪಕ ಶ್ರೀರಾಧಾರಮಣ ಉಪಾಧ್ಯಾಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರಿ ಕ್ಷೇತ್ರ ಸ್ವತಂತ್ರ ಕಾರ್ಯನಿರ್ವಹಣೆಗೆ ಸರಕಾರದಿಂದ ಒತ್ತು: ಶಿವರಾಮ ಹೆಬ್ಬಾರ್
ಸಚಿವ ಶಿವರಾಮ ಹೆಬ್ಬಾರ್ ರನ್ನು ಭೇಟಿ ಮಾಡಿ ಅಹವಾಲು ತಿಳಿಸಿದ ಮೊಗೇರ ಸಮಾಜದ ಪ್ರಮುಖರು
ಶಿರಸಿ: ಸ್ವರ್ಣವಲ್ಲೀಯಲ್ಲಿ ಲಕ್ಷ್ಮೀ ನರಸಿಂಹ ದೇವರಿಗೆ ರಥೋತ್ಸವ ಸಂಭ್ರಮ
ಕುಮಟಾದಲ್ಲಿ ಗೋಕಳ್ಳರ ಅಟ್ಟಹಾಸ : ರಸ್ತೆ ಬದಿ ಮಲಗಿದ್ದ ಹಸುವನ್ನೇ ಹೊತ್ತೊಯ್ದರು..
ಭಟ್ಕಳ: ಟ್ಯಾಂಕರ್ ಡಿಕ್ಕಿ-ಬೈಕ್ ಸವಾರ ಸಾವು