9 ಕ್ಷೇತ್ರಗಳಲ್ಲಿ ದೀರ್ಘ‌ದಂಡ ನಮಸ್ಕಾರ

•ಗಣ್ಯರು-ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ •ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ

Team Udayavani, Jul 15, 2019, 10:03 AM IST

15-July-2

ವಾಡಿ: ಮಳೆಗಾಗಿ ಪ್ರಾರ್ಥಿಸಿ ಸ್ಥಳೀಯ ಒಂಭತ್ತು ಪುಣ್ಯಕ್ಷೇತ್ರಳಿಗೆ ದೀರ್ಘ‌ದಂಡ ನಮಸ್ಕಾರ ಹರಕೆ ಕೈಗೊಂಡಿರುವ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ ಅವರನ್ನು ಮಾಜಿ ಶಾಸಕ ವಾಲ್ಮೀಕಿ ನಾಯಕ ಸನ್ಮಾನಿಸಿ, ಬೀಳ್ಕೊಟ್ಟರು.

ವಾಡಿ: ಕೈಕೊಟ್ಟ ಮುಂಗಾರು ಮಳೆಯಿಂದ ಚಿಂತೆಗೀಡಾಗಿರುವ ಚಿತ್ತಾಪುರ ತಾಲೂಕಿನ ರೈತರು, ವರ್ಷಧಾರೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ, ಕತ್ತೆಗಳ ಮೆರವಣಿಗೆ, ಪ್ರಾಣಿ ಬಲಿ, ಪೂಜೆ-ಪುನಸ್ಕಾರ ಹೀಗೆ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.

ಹೀಗೆ ಧರೆಯ ತಂಪಿಗಾಗಿ ಪ್ರಾರ್ಥಿಸಿ ಗ್ರಾಮಸ್ಥರೊಂದಿಗೆ ಸ್ಥಳೀಯ ಒಂಭತ್ತು ಪುಣ್ಯ ಕ್ಷೇತ್ರಗಳಿಗೆ ತೆರಳಿ ದೀರ್ಘ‌ದಂಡ ನಮಸ್ಕಾರ ಹಾಕಲು ಮುಂದಾಗಿರುವ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ ದೇವರ ಮೊರೆ ಹೋಗಿದ್ದಾರೆ.

ಕಡಬೂರ ಭೀಮಾನದಿ ಆಚೆಗಿನ ರಾಜವಾಳ ಗ್ರಾಮದಿಂದ ಶನಿವಾರ ದೀರ್ಘ‌ದಂಡ ನಮಸ್ಕಾರ ಹಾಕಲು ಆರಂಭಿಸಿರುವ ರುದ್ರಗೌಡ ಪಾಟೀಲ, ಜಿಲ್ಲೆಯ ರೈತರ ಹಾಗೂ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.

ಕಡಬೂರ ಗ್ರಾಮದ ಶ್ರೀ ಸಂಗಮನಾಥ, ಬಳವಡಗಿ ಶ್ರೀ ಏಲಾಂಬಿಕೆ ದೇವಿ ದೇಗುಲ, ಕೊಂಚೂರಿನ ಶ್ರೀ ಹನುಮಾನ ದೇವಸ್ಥಾನ, ಹಳಕರ್ಟಿಯ ಶ್ರೀ ವೀರಭದ್ರೇಶ್ವರ, ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಲಾಡ್ಲಾಪುರದ ಶ್ರೀ ಹಾಜಿ ಸರ್ವರ್‌ ದೇವಸ್ಥಾನ, ಶ್ರೀ ಕೋರಿಸಿದ್ಧೇಶ್ವರ ತಪೋವನ ಸ್ಥಳ, ಅಳ್ಳೊಳ್ಳಿಯ ಶ್ರೀ ಅಯ್ಯಪಯ್ಯ ದೇವಸ್ಥಾನ ಹಾಗೂ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನ ಒಟ್ಟು ಒಂಭತ್ತು ಪುಣ್ಯಕ್ಷೇತ್ರಗಳಿಗೆ ದೀರ್ಘ‌ದಂಡ ನಮಸ್ಕಾರದ ಹರಕೆ ಸಲ್ಲಿಕೆಯಾಗಲಿದೆ. ಅಂತಿಮವಾಗಿ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಳೆಗಾಗಿ ಸಲ್ಲಿಸಲಾದ ಭಕ್ತಿ ಹರಕೆ ಕೊನೆಗೊಳ್ಳಲಿದೆ ಎಂದು ರೈತ ಶರಣಬಸಪ್ಪ ಪಸಾರ ತಿಳಿಸಿದ್ದಾರೆ.

ದೀರ್ಘ‌ದಂಡ ನಮಸ್ಕಾರ ಯಾತ್ರೆ ರವಿವಾರ ಬೆಳಗ್ಗೆ ಬಳವಡಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ, ರೈತ ರುದ್ರಗೌಡ ಪಾಟೀಲ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟ ಪ್ರಸಂಗ ನಡೆಯಿತು.

ಮುಖಂಡರಾದ ಶರಣರೆಡ್ಡಿ ಪಾಟೀಲ, ನಾಗಣ್ಣಗೌಡ ಪಾಟೀಲ, ಶರಣಬಸಪ್ಪ ಎಸ್‌.ಪಸಾರ, ಈಶಪ್ಪ, ರುದ್ರಣ್ಣ ರಾವೂರ, ಕಾಶಿರಾಮ ಶಟಗಾರ, ದೇವಪ್ಪ, ಮಾಳಪ್ಪ ನರಿಬೋಳಿ, ದೀಪಲಾ ಚವ್ಹಾಣ ಹಾಗೂ ರಾಜವಾಳ, ಕಡಬೂರ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.