ಗಾಂಧೀಜಿ ಸಂದೇಶ ಯುವಕರಿಗೆ ಸ್ಫೂರ್ತಿ

ರಾಷ್ಟ್ರದ ಎಲ್ಲಾ ಸಮುದಾಯದವರ ಒಗ್ಗಟ್ಟು  ದೇಶದ ಅಭಿವೃದ್ಧಿಗೆ ಪೂರಕ: ಸಂಸದ ನಾಯಕ

Team Udayavani, Oct 3, 2019, 12:20 PM IST

ಯಾದಗಿರಿ: ಸರ್ವಧರ್ಮಗಳನ್ನು ಒಗ್ಗೂಡಿಸಿ  ಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಜೀವನ ಸಂದೇಶವು ಯುವ ಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಧೀಜಿಯವರ ತತ್ವ-ಸಂದೇಶ ಸಾರುವ ಸಾಕ್ಷ್ಯಚಿತ್ರ ಪ್ರದರ್ಶನ, ವಿಶೇಷ ಉಪನ್ಯಾಸ ಹಾಗೂ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರದ ಎಲ್ಲಾ ಸಮುದಾಯದವರ ಒಗ್ಗಟು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಗಾಂಧೀಜಿಯವರ ಸಂದೇಶದಂತೆ ರಾಷ್ಟ್ರದ ಏಕತೆ, ಐಕ್ಯತೆಯ ಬೆಳವಣಿಗೆಗೆ ಒತ್ತು ನೀಡಿ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾಗಿ ನಮ್ಮ ರಾಷ್ಟ್ರ ಧ್ವಜವನ್ನು ಗೌರವಿಸಬೇಕು. ಹಾಗೆಯೇ ಎಲ್ಲರೂ ಒಗ್ಗಟ್ಟಾಗಿ ಬಾಳಿದಾಗ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಇಂದಿನ ಮಕ್ಕಳು ಭವಿಷ್ಯದ ನಾಗರಿಕರು. ಜೀವನದಲ್ಲಿ ನಡೆಯುವ ತಪ್ಪುಗಳನ್ನು ತಿದ್ದಿಕೊಂಡು ಬಾಳಿದರೆ ಒಳ್ಳೆಯ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.

ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬುದು ಮಹಾತ್ಮ ಗಾಂಧೀಜಿಯವರ  ನಸಾಗಿತ್ತು. ಸ್ವದೇಶಿ ವಸ್ತುಗಳ ಬಳಕೆ, ಖಾದಿ ಬಳಕೆ ಮತ್ತು ಉತ್ಪಾದನೆ ಮಹತ್ವ, ಸ್ವತ್ಛತೆಗೆ ಆದ್ಯತೆ, ಪ್ಲಾಸ್ಟಿಕ್‌ ಬಳಕೆ ನಿಷೇಧ ಸೇರಿದಂತೆ ಗಾಂಧೀಜಿಯವರು ತೋರಿದ ಮಾರ್ಗದರ್ಶನದಲ್ಲಿ ನಡೆದಾಗ ರಾಷ್ಟ್ರ ಪ್ರಗತಿಯತ್ತ ಸಾಗುತ್ತದೆ. ಈ ದಿಸೆಯಲ್ಲಿ ಗಾಂಧೀಜಿಯವರಂತೆ ಪ್ರತಿಯೊಬ್ಬರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಿ, ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ದೇಶದ ಮಾಜಿ ಪ್ರಧಾನಿಗಳಾಗಿದ್ದ ಲಾಲ್‌ ಬಹಾದ್ದೂರ ಶಾಸ್ತ್ರಿ ಜನ್ಮದಿನವೂ ಕೂಡ ಇಂದೇ ಆಗಿದೆ. ಅವರು ಪ್ರಧಾನ ಮಂತ್ರಿಗಳಾಗಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ಆಡಳಿತಾವಧಿಯಲ್ಲಿ ಅನೇಕ ದೃಢ ನಿರ್ಧಾರಗಳನ್ನು ಕೈಗೊಂಡು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದೇಶದಂತೆ ದೇಶದ ಪ್ರತಿಯೊಬ್ಬ ಸಂಸದರು ತಮ್ಮ
ಕ್ಷೇತ್ರಗಳಲ್ಲಿ 150 ಕಿ.ಮೀಟರ್‌ ಪಾದಯಾತ್ರೆಯ ಮೂಲಕ ಮಹಾತ್ಮ ಗಾಂಧೀಜಿಯವರು ಕಂಡಂತಹ
ಕನಸನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ.

ಪರಿಸರ, ಸ್ವಚ್ಛತೆ ಹಾಗೂ ಜಲಸಂರಕ್ಷಣೆಯ ಕುರಿತು ತಿಳಿವಳಿಕೆ ನೀಡುವ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಗುರುಪ್ರಸಾದ ವೈದ್ಯ ವಿಶೇಷ ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿಯವರು ಯಾವುದೇ ಕಾರ್ಯ ಇದ್ದರೂ ಅದರ ಆಚರಣೆಗೆ ಹೆಚ್ಚು ಒತ್ತು ನೀಡುತ್ತಿದ್ದರು.

ಗಾಂಧೀಜಿಯವರಲ್ಲಿ ಅಹಿಂಸೆ, ಪ್ರೀತಿ, ಭಾತೃತ್ವ, ಪ್ರಾರ್ಥನೆ, ಮಾನವೀಯತೆ, ತಾಳ್ಮೆ, ಸಹನೆ, ಅನುಕಂಪ, ತ್ಯಾಗ, ಸಹಕಾರ, ಮಮತೆ, ಪರೋಪಕಾರ, ಶ್ರದ್ಧೆ, ಭಕ್ತಿಮಾರ್ಗ ಸೇರಿದಂತೆ ಮುಂತಾದ ಗುಣಗಳಿದ್ದವು. ಜಾತಿಮತಗಳ ಐಕ್ಯ, ಗ್ರಾಮ ಕೈಗಾರಿಕೆ, ಹಳ್ಳಿಗಳ ನೈರ್ಮಲ್ಯ, ಆರೋಗ್ಯ, ರೈತರ ಪ್ರಗತಿ, ಸ್ತ್ರೀ ಶಿಕ್ಷಣ ಗಾಂಧೀಜಿಯವರ ಪ್ರಮುಖ ಕನಸಾಗಿದ್ದವು ಎಂದು ಹೇಳಿದರು.

ಶ್ರೀ ರಾಮಕೃಷ್ಣ ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ್‌ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಪಾಪು ಬಾಪು ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಾಂದೀಜಿಯವರ ಸಾಕ್ಷ್ಯಚಿತ್ರವನ್ನು ವೀಕ್ಷಣೆ ಮಾಡಿದರು.

ವಿಧಾನಸಭಾ ಸದಸ್ಯ ವೆಂಕಟರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್‌. ಅಲ್ಲಾಬಕಷ, ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸಾರ್ವಜನಿಕ
ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಚಿತ್ರಶೇಖರ
ದೇಗಲಮಡಿ, ನಾಗಪ್ಪ ಪೋತಲ್‌ ಸೇರಿದಂತೆ ಮುಖ್ಯಶಿಕ್ಷಕರು, ವಸತಿ ನಿಲಯ ಮೇಲ್ವಿಚಾರಕರು
ಪಾಲ್ಗೊಂಡಿದ್ದರು.

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಭಗವಂತ ಅನವಾರ ಸ್ವಾಗತಿಸಿದರು. ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕ ಆಶಾ ಬೇಗಂ ನಿರೂಪಿಸಿದರು. ಪ್ರಭಾರಿ
ವಾರ್ತಾ ಸಹಾಯಕ ರಾಜರತ್ನ ಡಿ.ಕೆ. ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ