ಈವರೆಗೂ ಸಿಸಿ ರಸ್ತೆ ಕಾಣದ ಚೆನ್ನೂರು!

ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು

Team Udayavani, Sep 24, 2020, 7:17 PM IST

ಈವರೆಗೂ ಸಿಸಿ ರಸ್ತೆ ಕಾಣದ ಚೆನ್ನೂರು!

ಹುಣಸಗಿ: ಗ್ರಾಮೀಣ ಪ್ರದೇಶದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಸಾಕಷ್ಟು ಯೋಜನೆಗಳು ಜಾರಿಗೆ ತಂದರೂ ಕೂಡ ತಾಲೂಕಿನ ಚೆನ್ನೂರು ಗ್ರಾಮ ಈವರೆಗೆ ಸಿಸಿ ರಸ್ತೆ, ಚರಂಡಿ ಕಂಡಿಲ್ಲ. ಹೀಗಾಗಿ ಗ್ರಾಮದ ಪ್ರತಿ ವಾರ್ಡ್‌, ಓಣಿಗಳ ಮುಖ್ಯ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದು, ಇದರಲ್ಲೇ ಜನ ಸಂಚರಿಸಲು ಹರಸಾಹಸ ಪಡಬೇಕಿದೆ.

ವಜ್ಜಲ್‌ ಗ್ರಾಪಂ ವ್ಯಾಪ್ತಿಯ ಚೆನ್ನೂರು ಗ್ರಾಮದಲ್ಲಿ ಸುಮಾರು 1600 ಜನಸಂಖ್ಯೆ ಇದೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಈಗಷ್ಟೇ ಒಂದು ಸ್ಥಾನ ಹೆಚ್ಚಿಗೆ ಆಗಿದ್ದು, ಮೂವರು ಸದಸ್ಯರನ್ನು ಹೊಂದಿದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಗ್ರಾಮಸ್ಥರು ಅಸಮಾಧಾನ ತೋಡಿಕೊಂಡಿದ್ದಾರೆ.

ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಸಿಸಿ ರಸ್ತೆ ಕೊರತೆಯಿಂದ ಪ್ರತಿ ಮನೆಯ ಮೋರೆ ನೀರು ಹಾಗೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇನ್ನು ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ನಿಂತು ರಸ್ತೆ ಕೆಸರುಗದ್ದೆಯಂತಾಗುತ್ತದೆ. ದುರ್ವಾಸನೆಯಿಂದ ವಾತಾವರಣ ಕಲುಷಿತಗೊಂಡಿದೆ. ಸೊಳ್ಳೆ ಕಾಟ ಹೆಚ್ಚಿದೆ. ಇಂತಹ ರಸ್ತೆಯಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ಸಮಸ್ಯೆ ಎದುರಿಸುವಂತಾಗಿದೆ. ಕಾಲು ಜಾರಿ ಬಿದ್ದರೆ ಕೈ-ಕಾಲು ಮುರಿದುಕೊಳ್ಳುವಂತಿದೆ. ಮುಸ್ಲಿಂ ವಾರ್ಡ್‌ನಲ್ಲಿಯೇ ಹೆಚ್ಚು ಸಮಸ್ಯೆ ಇದೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಮುಖ್ಯರಸ್ತೆ ಅಧೋಗತಿಯಿಂದಾಗಿ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಶೌಚಾಲಯ ಇಲ್ಲದೇ ಸಮಸ್ಯೆ ಎದುರಿಸು ವಂತಾಗಿದೆ. ಸೊಳ್ಳೆಗಳ ಹಾವಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಕನಿಷ್ಠ ಪಕ್ಷ ಗ್ರಾಮ ಪಂಚಾಯಿತಿಯವರು ಬ್ಲಿಚಿಂಗ್‌ ಪೌಡರ್‌ ಸಿಂಪಡಿಸುವ ಕಾರ್ಯಕ್ಕೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪದಂತಹ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆ ಅವ್ಯವಸ್ಥೆಯಿಂದ ಭಾರೀ ಸಮಸ್ಯೆ ಆಗಿದೆ. ಸಂಚಾರಕ್ಕೆ ತೊಂದರೆಯಾಗಿದೆ. ಸಿಸಿ ರಸ್ತೆ, ಚರಂಡಿ ನಿರ್ಮಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು.- ಮಶಾಕ ಎಚ್‌.ಮುಲ್ಲಾ, ಚೆನ್ನೂರು ಗ್ರಾಮದ ನಿವಾಸಿ

 

ಬಾಲಪ್ಪ.ಎಂ.ಕುಪ್ಪಿ

ಟಾಪ್ ನ್ಯೂಸ್

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

Untitled-1

20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ

ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ

ನನ್ನನ್ನು ಸೋಲಿಸಿದವರಿಗೆ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ನನ್ನನ್ನು ಸೋಲಿಸಿದವರ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ಬಿಜೆಪಿ, ಜೆಡಿಎಸ್ ವಿರುದ್ದ ಸಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ

ಎಡಿಯೂರಿನಲ್ಲಿ ಸಿದ್ದು ಚುನಾವಣಾ ಪ್ರಚಾರ ಸಭೆ : ಬಿಜೆಪಿ, ಜೆಡಿಎಸ್ ವಿರುದ್ದ ವಾಗ್ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22litarrary

ಸಾಹಿತ್ಯಾಸಕ್ತರ ಆಶಯಕ್ಕೆ ಧಕ್ಕೆ ತರಲ್ಲ: ಅಳ್ಳುಂಡಿ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

28bus

ವಿದ್ಯಾರ್ಥಿಗಳಿಂದ ಬಸ್‌ ತಡೆ

20indresh

ಶಹಾಪುರಕ್ಕೆ ನ್ಯಾಯಮೂರ್ತಿ ಇಂದ್ರೀಶ್‌ ಭೇಟಿ

32kanakadas

ಕನಕದಾಸರ ಪುತ್ಥಳಿ ಲೋಕಾರ್ಪಣೆ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಲಸಿಕೆ ಅಭಿಯಾನ: ಶೀಘ್ರ ಶೇ. 100 ಗುರಿ ಸಾಧನೆ: ಜಿಲ್ಲಾಧಿಕಾರಿ ವಿಶ್ವಾಸ

ಲಸಿಕೆ ಅಭಿಯಾನ: ಶೀಘ್ರ ಶೇ. 100 ಗುರಿ ಸಾಧನೆ: ಜಿಲ್ಲಾಧಿಕಾರಿ ವಿಶ್ವಾಸ

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

ಹಾಸನದೆಡೆಗೆ ಸಾಗುತ್ತಿದೆ ಉಡುಪಿ ನರ್ಮ್ ಬಸ್‌

ಹಾಸನದೆಡೆಗೆ ಸಾಗುತ್ತಿದೆ ಉಡುಪಿ ನರ್ಮ್ ಬಸ್‌

ಕಟ್ಲ- ಕಾರ್ಗೋಗೇಟ್‌: ಜನವರಿಯಿಂದ ಕಾಂಕ್ರೀಟ್‌ ಕಾಮಗಾರಿ

ಕಟ್ಲ- ಕಾರ್ಗೋಗೇಟ್‌: ಜನವರಿಯಿಂದ ಕಾಂಕ್ರೀಟ್‌ ಕಾಮಗಾರಿ

ಹರ್ಕೆಬಾಳು – ಬೆಚ್ಚಳ್ಳಿ ರಸ್ತೆಗೆ ಇನ್ನೂ ಕೂಡಿ ಬಂದಿಲ್ಲ ಡಾಮರು ಭಾಗ್ಯ

ಹರ್ಕೆಬಾಳು – ಬೆಚ್ಚಳ್ಳಿ ರಸ್ತೆಗೆ ಇನ್ನೂ ಕೂಡಿ ಬಂದಿಲ್ಲ ಡಾಮರು ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.