ಮಲ್ಲಯ್ಯನ ಜಾತ್ರೆ ರದ್ದಾದ್ರೂ ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು

ನಿರೀಕ್ಷೆಯಂತೆ ಭಕ್ತರು ತಂದ ಕುರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Team Udayavani, Jan 15, 2021, 6:39 PM IST

ಮಲ್ಲಯ್ಯನ ಜಾತ್ರೆ ರದ್ದಾದ್ರೂ ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು

ಯಾದಗಿರಿ: ಕಲ್ಯಾಣ ಕರ್ನಾಟಕದ ಐತಿಹಾಸಿಕ ಮೈಲಾಪುರ ಮಲ್ಲಯ್ಯನ ಜಾತ್ರೆ ಕೋವಿಡ್‌ ಹಿನ್ನೆಲೆ ರದ್ದುಗೊಂಡಿದ್ದರೂ ಭಕ್ತರು ಮಾತ್ರ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ತಾಲೂಕಿನ ಮೈಲಾಪುರ ಮಲ್ಲಯ್ಯ ಜಾತ್ರೆ ಪ್ರತಿವರ್ಷವೂ ಸಂಕ್ರಮಣ ದಿನದಿಂದ ಸುಮಾರು 5 ದಿನದ ವರೆಗೆ ನಡೆಯುತ್ತದೆ.

ಸಂಕ್ರಮಣ ದಿನ ದೇವಸ್ಥಾನದಿಂದ ಮಲ್ಲಯ್ಯ ಗಂಗಾಸ್ನಾನ, ಭವ್ಯ ಪಲ್ಲಕ್ಕಿ ಉತ್ಸವ ನಡೆಯುವ ವೇಳೆ ಅಸಂಖ್ಯಾತ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ ಹಾಕುವ ಮೂಲಕ ಶ್ರದ್ಧಾ ಭಕ್ತಿಯಿಂದ ನಮಿಸುವುದು ವಾಡಿಕೆ. ಈ ಬಾರಿ ಕೋವಿಡ್‌ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಗ್ರಾಮದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿತ್ತು.

ಜನರು ಒಬ್ಬೊಬ್ಬರಾಗಿ ಕಾಲ್ನಡಿಗೆ ಮೂಲಕ ಬಂದು ಭಕ್ತಿಭಾವ ಪ್ರದರ್ಶಿಸಿದರು. ಪ್ರತಿವರ್ಷವೂ ಮಧ್ಯಾಹ್ನ 12ರ ಸುಮಾರಿಗೆ ಗಂಗಾ ಸ್ನಾನ, ಪಲ್ಲಕ್ಕಿ ಉತ್ಸವ ಜರುಗುತ್ತಿತ್ತು. ಈ ಬಾರಿ ದೇವಸ್ಥಾನ ಮಂಡಳಿ ಬೆಳಿಗ್ಗೆಯೇ ಗಂಗಾ ಸ್ನಾನ ಮತ್ತು ಪಲ್ಲಕ್ಕಿ ಉತ್ಸವಗಳನ್ನು ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಜನರು ಬೇರೆ ಊರುಗಳಿಂದ ಆಗಮಿಸಿ ದೇವರ ದರ್ಶನಕ್ಕೆ ಮುಂದಾದರು.

108 ಕುರಿಮರಿ ವಶಕ್ಕೆ: ಜಾತ್ರೆ ರದ್ದುಗೊಂಡಿರುವ ಸಮರ್ಪಕ ಮಾಹಿತಿಯಿಲ್ಲದೇ ಇತರೆ ಭಾಗಗಳಿಂದ ಜನರು ಪಲ್ಲಕ್ಕಿ ಮೇಲೆ ಎಸೆಯಲು ತಂದಿದ್ದ 108 ಕುರಿ-ಆಡು ಮರಿಗಳನ್ನು ಜಿಲ್ಲಾಡಳಿತ ವಶ ಪಡಿಸಿಕೊಂಡಿದೆ. ಜಿಲ್ಲಾಡಳಿತ ಮೈಲಾಪುರದಲ್ಲಿ ಬುಧವಾರದಿಂದಲೇ 5 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮುನ್ನೆಚ್ಚರಿಕೆಯಾಗಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿತ್ತು. ನಿರೀಕ್ಷೆಯಂತೆ ಭಕ್ತರು ತಂದ ಕುರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದ ಕುರಿಗಳನ್ನು ಜ.15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ ಆಸ್ಪತ್ರೆ ಆವರಣದಲ್ಲಿ ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್‌ ಮಾಹಿತಿ ನೀಡಿದ್ದಾರೆ.

ಸಿದ್ದಲಿಂಗೇಶ್ವರ ನತ್ತ ನಡೆದ ಭಕ್ತರು
ಮಕರ ಸಂಕ್ರಾಂತಿ ನಿಮಿತ್ತ ಗುರುಮಠಕಲ್‌ ತಾಲೂಕಿನ ಚಿಂತನಹಳ್ಳಿಯ ಮಹಾತ್ಮ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ಜಲಪಾತಕ್ಕೆ ವಿವಿಧ ಭಾಗಗಳಿಂದ ಭಕ್ತ ಸಮೂಹ ಆಗಮಿಸಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಕೊರೊನಾ ಭಯದಿಂದ ಮೈಲಾಪುರದ ಮಲ್ಲಯ್ಯನ ಜಾತ್ರೆ ರದ್ದಾಗಿರುವುದರಿಂದ ಮಲ್ಲಯ್ಯನನ್ನು ಬಿಟ್ಟು ಸಿದ್ಧಲಿಂಗೇಶ್ವರನತ್ತ ಭಕ್ತರು ಆಕರ್ಷಿತರಾಗಿದ್ದು ಕಂಡು ಬಂತು. ಭಕ್ತರು ತಮ್ಮ ಕುಟುಂಬದೊಂದಿಗೆ ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ವಾಹನಗಳ ಮೂಲಕ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯಾಗಿ ಜಲಪಾತಕ್ಕೆ ತೆರಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಟಾಪ್ ನ್ಯೂಸ್

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18water

ಬಸವಸಾಗರದಿಂದ ಕೃಷ್ಣಾ ನದಿಗೆ 1.28 ಲಕ್ಷ ಕ್ಯೂಸೆಕ್‌ ನೀರು

15water

ಶುದ್ದ ನೀರು ಸದ್ಬಳಕೆ ಮಾಡಿಕೊಳ್ಳಿ

12-work

ಸುರಪುರ ನಗರದ ಪ್ರಗತಿಗೆ ಬದ್ದ: ಶಾಸಕ ರಾಜುಗೌಡ

11-eduaction

ಶೈಕ್ಷಣಿಕ ಅಭಿವೃದ್ದಿಗೆ ದಾನಿಗಳ ಸಹಕಾರ ಮುಖ್ಯ

6water

ಬಸವಸಾಗರದಿಂದ ನಿತ್ಯ ನೀರು ಬಿಡುಗಡೆ: ಪ್ರವಾಹ ಭೀತಿಯಲ್ಲಿ ಜನತೆ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

1re

ವಿದ್ಯಾರ್ಥಿಗಳ ಹೋರಾಟ ಯಶಸ್ವಿ: ವಾಡಿ ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

tdy-16

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.