ಜಿಲ್ಲಾ ಕೇಂದ್ರದಲ್ಲಿ ಡಿಸಿಸಿ ಬ್ಯಾಂಕ್‌ ಸ್ಥಾಪನೆಗೆ ಆಗ್ರಹ

ಎಚ್.ಡಿ. ಕುಮಾರಸೇನೆ ಕಾರ್ಯಕರ್ತರ ಧರಣಿ

Team Udayavani, Jul 9, 2019, 12:16 PM IST

ಸುರಪುರ: ಎಚ್.ಡಿ. ಕುಮಾರಸೇನೆ ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸುರಪುರ: ಡಿಸಿಸಿ ಬ್ಯಾಂಕ್‌ ಶಾಖೆಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಎಚ್.ಡಿ. ಕುಮಾರಸೇನೆ ಕಾರ್ಯಕರ್ತರು ನಗರದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸೇನೆಯ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಡಿಸಿಸಿ ಬ್ಯಾಂಕ್‌ ಕಚೇರಿ ಕಲಬುರಗಿ ಜಿಲ್ಲೆಯಲ್ಲಿ ಇರುವುದರಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಗ್ರಾಹಕಕರಿಗೆ ತೊಂದರೆ ಆಗುತ್ತಿದೆ. ಪ್ರತಿಯೊಂದು ಸಣ್ಣ ಪುಟ್ಟ ಕೆಲಸಕ್ಕೂ ದೂರದ ಕಲಬುರಗಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಬಹುತೇಕ ರೈತರು ಬ್ಯಾಂಕ್‌ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಸಾಲ ಮಂಜೂರಾತಿಗಾಗಿ ಕಲಬುರಗಿಗೆ ಹೋಗಬೇಕು. ಲಂಚ ಕೊಡದಿದ್ದರೆ ಸಾಲ ಸೌಲಭ್ಯ ಮಂಜೂರಾತಿ ನೀಡುವುದಿಲ್ಲ. ಹೀಗಾಗಿ ತಾಲೂಕಿನ ರೈತರು ಲಂಚ ಕೊಟ್ಟು ಸಾಲ ಪಡೆದುಕೊಳ್ಳುವಂತಾಗಿದೆ. ಕಾರಣ ತ್ವರಿತವಾಗಿ ಬ್ಯಾಂಕ್‌ ಶಾಖಾ ಕಚೇರಿಯನ್ನು ಕಲಬುರಗಿಯಿಂದ ವಿಭಜಿಸಿ ಜಿಲಾ ಕೇಂದ್ರದಲ್ಲಿ ಪ್ರತೇಕ ಕಚೇರಿ ಸ್ಥಾಪಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ತಹಶೀಲ್ದಾರ್‌ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಶಿರಸ್ತೇದಾರ ಮೂಲಕ ಸಲ್ಲಿಸಲಾಯಿತು. ಗೋಪಾಲ ಬಾಗಲಕೋಟೆ, ಕೃಷ್ಣಾ ದಿವಾಕರ್‌, ಮಾನಯ್ಯ ದೊರೆ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ, ದೇವಪ್ಪ ದೇವರಮನಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ