ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕವಡೆ


Team Udayavani, Jan 2, 2021, 3:36 PM IST

ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕವಡೆ

ಸೈದಾಪುರ: ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಯೋಜನೆ ಜನರಿಗೆ ತಲುಪಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎಂದುಅಜಲಾಪುರ ಗ್ರಾಪಂ ನೂತನ ಸದಸ್ಯ ನರಸಪ್ಪ ಕವಡೆ ಹೇಳಿದರು.

ಪಟ್ಟಣದಲ್ಲಿ ಸೈದಾಪುರ ಯುವಕರ ಬಳಗದಿಂದ ಏರ್ಪಡಿಸಿದ್ದ ವಲಯದ ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ವ್ಯಾಪ್ತಿಗೆ ಒಳಪಡುವಪ್ರದೇಶಗಳಲ್ಲಿ ಸರ್ಕಾರದಿಂದ ಬರುವಎಲ್ಲ ಸೌಲಭ್ಯ ಒದಗಿಸುತ್ತೇವೆ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಂಡರೆ ತಾಲೂಕು, ಜಿಲ್ಲೆ ಮತ್ತು ದೇಶ ಸ್ವತ್ಛವಾಗಿರಲು ಸಾಧ್ಯ. ಆದೆಸೆಯಲ್ಲಿ ನಾವು ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮೇಲೆ ಭರವಸೆ ಇಟ್ಟು ಮತದಾನಮಾಡಿ ಬೆಂಬಲಿಸಿದ ಮತದಾರರಿಗೆ ಹಾಗೂಗೆಲುವಿನಲ್ಲಿ ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದ ಎಂದರು.

ಕರ್ನಾಟಕ ಪ್ರದೇಶ ಕುರುಬ ಸಮುದಾಯದ ಉಪಾಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಜನ ಸಾಮಾನ್ಯರಿಗೆ ನೆರವಾಗುವ ಉತ್ತಮ ಕೆಲಸಮಾಡಿದರೆ ಜನರು ನಿಮ್ಮನ್ನು ಮರು ಆಯ್ಕೆ ಮಾಡುತ್ತಾರೆ ಎಂದರು.

ಇದಕ್ಕೂ ಮೊದಲು ವಲಯದ ನೂತನ ಸದಸ್ಯರಾದ ರಾಕೇಶ ಕೋರೆ, ಮಾಳಪ್ಪಅರಿಕೇರಿ, ಬಸವರಾಜ ಸೈದಾಣೋರ್‌ ಅವರನ್ನು ಸನ್ಮಾಸಿಲಾಯಿತು.ಈ ವೇಳೆ ಪರಮೇಶ ವಾರದ, ಶಶಿಗೌಡ, ಶಿವಕುಮಾರ ಕಲಾಲ್‌, ಮಾಳಪ್ಪ, ರೆಡ್ಡಿಮುನಗಾಲ, ರವಿ ಸೈದಾಪುರ, ಮಹಾದೇವಮುನಗಾಲ, ಮರೆಪ್ಪ ರಾಂಪುರ,ಭೀಮಣ್ಣ ಮಡಿವಾಳ, ಮಾಳಪ್ಪ, ತೈಸೀನ್‌, ಇತರರಿದ್ದರು.

ಗ್ರಾಮ ವಿಕಾಸಕ್ಕೆ ಒಗ್ಗಟ್ಟಾಗಿ ದುಡಿಯೋಣ: ಚವ್ಹಾಣ :

ಯಾದಗಿರಿ: ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗೆದ್ದವರು ಮತ್ತು ಸೋತವರು ಸಹೋದರ ಭಾವನೆಯಿಂದ ಗ್ರಾಮ ವಿಕಾಸಕ್ಕೆ ದುಡಿಯಬೇಕೆಂದು ಪಶು ಸಂಗೋಪನೆ, ಹಜ್‌ ಮತ್ತು ವಕ್ಫ್  ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸಲಹೆ ನೀಡಿದರು.

ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿ ಸಿರುವ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿರುವ ಅವರು, ಸಮಸ್ತಯಾದಗಿರಿ ಮಹಾಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಜಿಲ್ಲಾಡಳಿತ ಗ್ರಾಪಂ ಚುನಾವಣೆ ವ್ಯವಸ್ಥಿತವಾಗಿನಡೆಸಿದೆ. ಫಲಿತಾಂಶಕ್ಕೆ ಸಂಬಂಧಿ ಸಿದಂತೆ ಗ್ರಾಮಗಳಲ್ಲಿದ್ವೇಷ ಭಾವನೆ ತಲೆದೋರದಂತೆ ಗ್ರಾಮದ ಹಿರಿಯರು ಮುಂಜಾಗ್ರತೆ ವಹಿಸಬೇಕು. ಗೆದ್ದವರು ಮತ್ತು ಸೋತವರು ಜೊತೆಗೂಡಿ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಬೇಕುಎಂದು ತಿಳಿಸಿದ್ದಾರೆ. ಶಾಲೆಗಳೂ ಪ್ರಾರಂಭವಾಗಿದ್ದು,ಪೋಷಕರು ಮಕ್ಕಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗೆ ಕಳುಹಿಸಬೇಕು. ಶಿಕ್ಷಕರೂ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ. ಗ್ರಾಮ ಸ್ವರಾಜ್ಯವೇ ನಮ್ಮ ಸರ್ಕಾರದ ಗುರಿ. ಅದರಂತೆ ಗ್ರಾಮಗಅಭಿವೃದ್ಧಿ ಆದ್ಯತೆಯಾಗಿ ಪರಿಗಣಿಸಿ, ನಾನಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಗ್ರಾಪಂ ನೂತನಸದಸ್ಯರು ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸಲುಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ. ಕೋವಿಡ್ ಸೋಂಕು ಹರಡುವುದು ಇನ್ನೂ ನಿಂತಿಲ್ಲ. ಸರ್ಕಾರ ಕಾಲಕಾಲಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ರೂಪಿಸಿರುವ ನಿಯಮ ಪ್ರತಿಯೊಬ್ಬರೂ ಪಾಲಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ಏರ್‌ ಇಂಡಿಯಾ ಇಂದು ಟಾಟಾ ವಶಕ್ಕೆ?

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18technology

ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಅರಿವು ಅಗತ್ಯ

17yadagiri

ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಆಗ್ರಹ

30clean

ಪುಟಪಾಕ್‌ ಗ್ರಾಮದಲ್ಲಿ ಅಸ್ವಚ್ಛತೆ-ಸಮಸ್ಯೆಗಳ ಆಗರ

21teacher

ಶಿಷ್ಯರಿಗೆ ಸೂಕ್ತ ಮಾರ್ಗದರ್ಶನ ನೀಡುವಾತ ಗುರು: ಶ್ರೀ

13student

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮನವಿ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

3distric

ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

2abulence

ಉಚಿತ ಆಂಬ್ಯುಲೆನ್ಸ್‌ ಸೇವೆಗೆ ಸಚಿವ ನಿರಾಣಿ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.