ಅಧಿಕಾರಿಗಳ ನಿರ್ಲಕ್ಷ್ಯ: ಶೌಚಾಲಯ ಕಟ್ಟಡ ಕಾಮಗಾರಿ ಸ್ಥಗಿತ
Team Udayavani, Jul 7, 2017, 12:27 PM IST
ಕಕ್ಕೇರಾ: ಪಟ್ಟಣದ ನಾಲ್ಕು, ಐದನೇ ವಾರ್ಡ್ ಗೆ ಸಂಬಂಧಿಸಿದ ಹೈಟೆಕ್ ಶೌಚಾಲಯ ಕಟ್ಟಡ ಕಾಮಗಾರಿ ಎರಡೂ ವರ್ಷದಿಂದ ಸ್ಥಗಿತಗೊಂಡು ಅವ್ಯವಸ್ಥೆ ಆಗಾರವಾಗಿದೆ.
ಮಹಿಳೆಯರಿಗೆ ಶೌಚಾಲಯ ಸಮಸ್ಯೆ ತಪ್ಪಿಸಲು 2014-15ನೇ ಸಾಲಿನಲ್ಲಿ ಅಂದಿನ ಗ್ರಾಪಂ (ಸದ್ಯ ಪುರಸಭೆ)ಆಡಳಿತದಲ್ಲಿ
ಸುಮಾರು 7.50 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರು. ಆದರೆ ಎರಡೂ ವರ್ಷ ಕಳೆದರೂ ಶೌಚಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಸರಕಾರ ಸಾಕಷ್ಟು ಅನುದಾನ ನೀಡಿರೂ ಅ ಧಿಕಾರಿಗಳ
ನಿರ್ಲಕ್ಷದಿಂದ ಶೌಚಾಲಯ ಸಮಸ್ಯೆ ಮಾತ್ರ ಸುಧಾರಿಸಿಲ್ಲ. ಎರರು ವಾರ್ಡ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು,
ಅಧಿಕಾರಿಗಳು ಮಾತ್ರ ಮೂಲ ಸೌಕರ್ಯ ಒದಗಿಸಲು ಗಮನಹರಿಸಿಲ್ಲ ಎಂದು ಜನರ ಆರೋಪವಾಗಿದೆ. ಆದ್ದರಿಂದ ಸಂಬಂಧಿ ಸಿದ ಅಧಿಕಾರಿಗಳು ಕೂಡಲೇ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟ ಶೌಚಾಲಯ ನಿರ್ಮಿಸಬೇಕೆಂದು ಜನ ಬೇಡಿಕೆಯಾಗಿದೆ.
ಕಾಮಗಾರಿ ಕಳಪೆ
ಹೈಟೆಕ್ ಶೌಚಾಲಯ ಕಳೆಪೆಯಿಂದ ಕೂಡಿದ್ದು, ಸೂಕ್ತ ಚರಂಡಿ ನಿರ್ಮಿಸಿಲ್ಲ. ಅಪೂರ್ಣಗೊಳಿಸಿ ವರ್ಷ ಕಳೆದರೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಈ ಕಡೆ ನುಸಳಿಲ್ಲ. ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಮಣ್ಣ ವಡಿಕೇರಿ
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ, ಕಕ್ಕೇರಾ