ಗ್ರಾಪಂ ಹೋರಾಟ ಎಲ್ಲ ಚುನಾವಣೆಗೆ ಬುನಾದಿ

Team Udayavani, Dec 13, 2020, 4:23 PM IST

ಗ್ರಾಪಂ ಹೋರಾಟ ಎಲ್ಲ ಚುನಾವಣೆಗೆ ಬುನಾದಿ

ಯಾದಗಿರಿ: ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಗುರುತು ಇಲ್ಲದಿದ್ದರೂ ಮುಂಬರುವ ತಾಪಂ,ಜಿಪಂ ಚುನಾವಣೆಗಳಿಗೆ ಚುನಾವಣೆಗಳಿಗೆ ಭದ್ರ ಬುನಾದಿಯಾಗಿದೆ. ಜೆಡಿಎಸ್‌ ನಲ್ಲಿರುವ ಸಾಕಷ್ಟು ಯುವಕರು ಸೇವಾ ಮನೋಭಾವದಿಂದ ಸ್ಪರ್ಧೆಗಿಳಿಯುತ್ತಿದ್ದು, ಹಿರಿಯ ಮುಖಂಡರು ಅವಕಾಶ ನೀಡಿ ಸಹಕರಿಸಬೇಕು ಎಂದು ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.

ನಗರದ ಹೊರವಲಯದ ಇಂಪೀರಿಯಲ್‌ ಗಾರ್ಡನ್‌ ಫಂಕ್ಷನ್‌ ಹಾಲ್‌ನಲ್ಲಿ ಜೆಡಿಎಸ್‌ ಗ್ರಾಪಂ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗ್ರಾಮದ ಹಲವು ಅಭಿವೃದ್ಧಿಯ ಕನಸುಕಟ್ಟಿಕೊಂಡು ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ, ಸಮಸ್ಯೆಗಳ ಪರಿಹಾರಕ್ಕೆ ಗ್ರಾಪಂನಲ್ಲಿ ನಮ್ಮ ಅಭ್ಯರ್ಥಿಗಳು ಇದ್ದರೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಗ್ರಾಪಂ ಆಡಳಿತದ ಸಂಪರ್ಕಕೊಂಡಿಯಾಗಿದ್ದು, ಇನ್ನು ಎರಡುವರೆ ವರ್ಷ ಶಾಸಕರ ಅವಧಿ ಯಿದೆ. ಚುನಾವಣೆ ಮುಗಿದ ತಕ್ಷಣವೇ ಹೊಸ ವರ್ಷದಲ್ಲಿ ತಾಲೂಕಿನ 34 ಗ್ರಾಪಂಗಳಿಗೆ ತಲಾ100 ಮನೆಗಳ ನಿರ್ಮಾಣದ ಯೋಜನೆ ಹಮ್ಮಿಕೊಳ್ಳುವ ಗುರಿಯಿದೆ. ಅಲ್ಲದೇ ಜಲಜೀವನ ಯೋಜನೆಯಡಿ 18 ಹಳ್ಳಿಗಳುಆಯ್ಕೆಯಾಗಿದ್ದು, ಅಂದಾಜು 17 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದ ಮನೆ-ಮನೆಗೆ ನೀರು ಕೊಡುವ ಯೋಜನೆ ಬರಲಿದೆ ಎಂದರು.

ಮತಕ್ಷೇತ್ರದ 33 ಗ್ರಾಪಂಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಹಿಂದೆ ಯಾರು ಏನು ಮಾಡಿದ್ದಾರೆ? ಎನ್ನುವ ಬಗ್ಗೆ ನಾವು ಟೀಕೆಮಾಡುವುದು ಬೇಡ. ನಾವು ನಮ್ಮ ಕೆಲಸ ಮಾಡೋಣ ಎಂದವರು, ಪ್ರತಿಯೊಬ್ಬ ಮುಖಂಡರು ಗ್ರಾಪಂ ಮಟ್ಟದಲ್ಲಿ ಅಭ್ಯರ್ಥಿಗಳ ಪರ ಒಗ್ಗಟ್ಟಾಗಿ ಮತ ಕೇಳಬೇಕು ಎಂದರು.

ಮುಖಂಡರಾದ ಜಿ. ತಮ್ಮಣ್ಣ ಮಾತನಾಡಿದರು, ನಿತ್ಯಾನಂದ ಸ್ವಾಮಿ ಹಂದರಕಿ, ಸುಭಾಷ ಚಂದ್ರ ಕಟಕೆ, ಅಂಬ್ರೇಷ ರಾಠೊಡ, ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಸೈಯದ್‌ ಅಲೀ ಹುಸೇನ್‌ ಕಡೇಚೂರ ಮಾತನಾಡಿದರು. ಗುರುಮಠಕಲ್‌ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮಾಜಿ ಅಧ್ಯಕ್ಷ ಬಾಲಪ್ಪ ನೀರೆಟಿ, ಕಿಷ್ಟಾರೆಡ್ಡಿ ಪಾಟೀಲ್‌, ತಾಪಂ ಅಧ್ಯಕ್ಷ ಈಶ್ವರ ನಾಯಕ, ಸಹಕಾರ ಪತ್ತಿನ ಸಹಕಾರದ ಅಧ್ಯಕ್ಷ ಸುದರ್ಶನ ಪಾಟೀಲ್‌ ಜೈಗ್ರಾಂ, ಭೋಜಣ್ಣ ಗೌಡ, ಪ್ರಕಾಶ ನೀರೆಟಿ, ಅಜಯರೆಡ್ಡಿ , ಅನಿಲ ಹೆಡಗಿಮುದ್ರಾ, ಅಯುಬ್‌ ಪುಟಪಾಕ್‌, ಮೈಲಾರಪ್ಪ ಜಾಗೀರದಾರ, ಶಿವಪ್ಪ ಯರಗೋಳ, ಮಾರ್ಥಂಡ ಮಾನೇಗಾರ್‌, ಶೇಖರಗೌಡ, ತಾಯಪ್ಪ ಬದ್ದೇಪಲ್ಲಿ, ತಾಪಂ ಸದಸ್ಯರಾದ ನರಸಪ್ಪ, ನಾಗೇಶ ಚಂಡರಕಿ, ಗಿರಿನಾಥರೆಡ್ಡಿ ಇದ್ದರು.

ಇದೇ ವೇಳೆ ಕಡೇಚೂರ ಗ್ರಾಮದ ಕಾಂಗ್ರೆಸ್‌ ಮುಖಂಡ ಸೈಯದ ಹಮೀದ, ಸೈಯದ ಅಲೀ ಹಸನ್‌ ಹಾಗೂ ಬಿಜೆಪಿಯ ಜಮಾಲ್‌ ಹುಸೈನ್‌ ಜೆಡಿಎಸ್‌ಗೆ ಸೇರ್ಪಡೆಗೊಂಡರು.

ಶಾಸಕ ಸ್ಥಾನ ಮತದಾರರು ನೀಡಿದ ಭಿಕ್ಷೆ :

ಶಾಸಕ ನಾಗನಗೌಡ ಕಂದಕೂರ ಅವರು ಶಾಸಕರಾಗಿರುವುದು ಗುರುಮಠಕಲ್‌ ಕ್ಷೇತ್ರದ ಜನರು ನೀಡಿದ ಭಿಕ್ಷೆಯಾಗಿದೆ. ಯಾವತ್ತು ಮತದಾರರ ಸಮಸ್ಯೆಗಳಿಗೆಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡಲಾಗುತ್ತಿದ್ದು, ನಾವು ಎಂದಿಗೂ ದ್ವೇಷದ ರಾಜಕೀಯ ಮಾಡಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 3 ತಿಂಗಳಿಂದ ಅಭಿವೃದ್ಧಿಗೆ ಅನುದಾನ ಬಂದಿಲ್ಲ. ಬಿಜೆಪಿಗರು ಯಾರಾದರೂ ಕ್ಷೇತ್ರಕ್ಕೆ ಅನುದಾನ ನಿಲ್ಲಿಸಿರುವ ಬಗ್ಗೆ ಕೇಳಿದ್ದಾರಾ? ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಕೇಳಿದರೆ ಅವರಿಗೆ ಉತ್ತರ ಕೊಡಲು ಮುಖವಿಲ್ಲ. – ಶರಣಗೌಡ ಕಂದಕೂರ, ಯುವ ಮುಖಂಡ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.