ವಿಕಲಚೇತನರಿಗೆ ಬ್ಯಾಕ್‌ಲಾಗ್‌ ಸೌಲತ್ತು ಒದಗಿಸಿ

Team Udayavani, Feb 18, 2019, 10:07 AM IST

ಯಾದಗಿರಿ: ವಿಕಲಚೇತನರ ಗಣತಿ ಆಗಬೇಕು. ವಿಕಲಚೇತನರಿಗೆ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ತುಂಬುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಉಪಕಾರ್ಯದರ್ಶಿ ಆರ್‌. ಇಂದ್ರೇಶ ಆಗ್ರಹಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ಜಿಲ್ಲಾ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ವಿಕಲಚೇತನರ ಗಣತಿ ಪ್ರತ್ಯೇಕವಾಗಿ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. 

ನೇಮಕಾತಿಯಲ್ಲಿ ವಿಕಲಚೇತನರ ಮೀಸಲಾತಿಯನ್ನು ಶೇ. 3ರಿಂದ 4ಕ್ಕೆ ಏರಿಕೆ ಮಾಡಲು ಈಗಾಗಲೇ 2017ರಲ್ಲಿಯೇ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದನ್ನು ತ್ವರಿತ ಜಾರಿಗೊಳಿಸಬೇಕು ಮತ್ತು ವಿಕಲಚೇತನ ನೌಕರರಿಗೆ ಮೀಸಲಿರುವ ಹುದ್ದೆಗಳನ್ನು ಬ್ಯಾಕ್‌ ಲಾಗ್‌ ಮೂಲಕವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ವಿಕಲಚೇತನರು ಕಚೇರಿಗೆ ಬರಲು ಸಾಮಾನ್ಯ ಚೇತನರಿಗಿಂತ ಹೆಚ್ಚಿನ ಸಂಕಷ್ಟ ಎದುರಿಸುತ್ತಾರೆ. ಹೀಗಾಗಿ ಅವರಿಗೆ ಕಚೇರಿಗೆ ಆಗಮಿಸುವ ಸಮಯದಲ್ಲಿ ವಿನಾಯಿತಿ ನೀಡಿ ಕಚೇರಿ ಮುಕ್ತಾಯ ಸಮಯದಲ್ಲಿ ವಿಳಂಬವಾಗಿ ಬಂದ ಅವಧಿಯನ್ನು ಪೂರೈಸಲು ಅವಕಾಶ ಮಾಡಿಕೊಡಬೇಕೆಂದರು. ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ವಿಕಲಚೇತನ ನೌಕರರರಿಗೆ ಇರುವ ಸೌಲತ್ತುಗಳನ್ನು ಪಡೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿವೆ.

ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಮತ್ತು ಅವನ್ನು ಪ್ರಚುರ ಪಡಿಸಲು ಏರ್ಪಡಿಸಿರುವ ಕಾರ್ಯಕ್ರಮ ಮೌಲಿಕವಾಗಿದೆ ಎಂದು ಹೇಳಿದರು. ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್‌. ರೇಣುಕಾರಾಧ್ಯ ಮಾತನಾಡಿ, ವಿಕಲಚೇತನ ನೌಕರರಿಗೆ ಬಡ್ತಿ ಮೀಸಲಾತಿ ಕಲ್ಪಿಸಬೇಕು. ವಿಕಲಚೇತನ ನೌಕರರ ಹಿತ ಕಾಪಾಡಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕೋತ್ವಾಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೌರಾಯುಕ್ತ ಸಂಗಪ್ಪ ಉಪಾಸೆ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ವೇದಿಕೆ ಮೇಲೆ ಇದ್ದರು. ವಿಶೇಷ ಆಹ್ವಾನಿತರಾಗಿ ವಿಕಲಚೇತನರ
ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಡಾ| ವಸಂತ ಕುಷ್ಟಗಿ, ಉಪಾಧ್ಯಾಕ್ಷ ಶಾಂತಪ್ಪ ಸಂಗಾವಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಕಶೆಟ್ಟಿ, ದಿಲಿಪಸಿಂಗ್‌ ಇದ್ದರು. ಸಿದ್ದಪ್ಪ ಕಲಶೆಟ್ಟಿ ಪ್ರಾರ್ಥಿಸಿದರು. ಸಿದ್ದಯ್ಯ ಮಠ ಸ್ವಾಗತಿಸಿದರು. ಉಪನ್ಯಾಸಕ ಮನೋಹರ ನಿರೂಪಿಸಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸುರಪುರ: ಭೀಮರಾಯನಗುಡಿ ಕೆಬಿಜೆಎನ್ನೆಲ್‌ ಸಿಇ ವಿಭಾಗದ ಕಾಲುವೆಗಳ ಕ್ಲೂಜರ್‌ ಅಥವಾ ಟೆಂಡರ್‌ ಹಣ ಉಳಿತಾಯ ಮಾಡಬೇಕು ಎಂದು ಆಗ್ರಹಿಸಿ ಶೋಷಿತರ ಪರ ಸಂಘಟನೆಗಳ ಒಕ್ಕೂಟ...

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಕಾಯಕ ಶರಣರ ಜಯಂತ್ಯೋತ್ಸವ ಕಾರ್ಯಕ್ರಮ ಫೆ. 21ರಂದು ಬೆಳಗ್ಗೆ 11:00ಕ್ಕೆ ಜಿಲ್ಲಾಡಳಿತ ಭವನದಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ...

  • ಸುರಪುರ: ಖಾಕಿ ಬಟ್ಟೆ ಧರಿಸಿ ತಲೆ ಮೇಲೆ ಹ್ಯಾಟ್‌, ಕೈಯಲ್ಲಿ ಲಾಠಿ ಹಿಡಿದು ಜನರನ್ನು ಎದುರಿಸಿ ಕೆಲಸ ಮಾಡುವ ಕಾಲ ಈಗಿಲ್ಲ. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವುದು...

  • ಯಾದಗಿರಿ: ಸಂತ ಸೇವಾಲಾಲ್‌ ಮಹಾರಾಜರ ಆಶಯದಂತೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಶಾಸಕ ವೆಂಕಟರೆಡ್ಡಿ...

ಹೊಸ ಸೇರ್ಪಡೆ