ಮತ್ತೆ ನೆಲಕಚ್ಚಿದ ಜವಳಿ-ಸ್ವರ್ಣೋದ್ಯಮ

Team Udayavani, May 13, 2021, 3:43 PM IST

bhfgvfd

ಯಾದಗಿರಿ: ಕೊರೊನಾ ಅಲೆಗೆ ತುತ್ತಾಗಿರುವ ಜವಳಿ ಮತ್ತು ಸ್ವರ್ಣೋದ್ಯಮ ಸೇರಿ ಹಲವು ಉದ್ಯಮಗಳ ವಹಿವಾಟು ನೆಲಕಚ್ಚಿದ್ದು, ಇದರಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೀಗ ಪ್ರಮುಖ ಆಚರಣೆಗಳಾದ ಅಕ್ಷಯ ತೃತೀಯ, ರಂಜಾನ್‌ ಹಬ್ಬಗಳು ಇದ್ದು, ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಬೇಕು ಎನ್ನುವವರಿಗೆ ಬಟ್ಟೆಯೂ ಸಿಗುತ್ತಿಲ್ಲ.

2020ನೇ ಸಾಲಿನಲ್ಲಿ ಮಾರ್ಚ್‌ ವೇಳೆ ಮದುವೆ ಸಮಾರಂಭಗಳು, ಶುಭ ಕಾರ್ಯಗಳು ನಡೆಯುವ ಸಂದರ್ಭದಲ್ಲಿಯೇ ಆರಂಭವಾದ ಮಹಾಮಾರಿ ಕೊರೊನಾ ಆರ್ಭಟದಲ್ಲಿ ಲಾಕ್‌ ಡೌನ್‌ದಿಂದ ಕಂಗೆಟ್ಟಿರುವ ವ್ಯಾಪಾರಸ್ಥರಿಗೆ ಕೊರೊನಾ ಎರಡನೇ ಅಲೆಯೂ ಇನ್ನಷ್ಟು ಕಂಗಾಲಾಗಿಸಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 50-60 ಆಭರಣ ಮಳಿಗೆಗಳಿದ್ದು, ಅಂದಾಜು ವಾರ್ಷಿಕ 5ರಿಂದ7 ಕೋಟಿಗಳನ್ನು ವ್ಯವಹಾರ ನಡೆಯುತ್ತಿತ್ತು.

ಅಲ್ಲದೆ ಜವಳಿ ಉದ್ಯಮದ ಸುಮಾರು 70 (ಸಣ್ಣ ಮತ್ತು ದೊಡ್ಡ) ಮಳಿಗೆಗಳಿದ್ದು, ಇವರ ಅಂದಾಜು ವ್ಯವಹಾರ ಸುಮಾರು 7 ಕೋಟಿಯಷ್ಟು ಸ್ಥಗಿತಗೊಂಡಿದೆ. ಇದೀಗ ಬಂದಿರುವ ಬೆಲೆ ಬಾಳುವ ಮದುವೆ ಸೀರೆಗಳು, ರೇಷ್ಮೆ ಸೀರೆ ಸೇರಿದಂತೆ ವಿವಿಧ ಸರಕುಗಳು ಅಂಗಡಿಗಳಲ್ಲಿಯೇ ಉಳಿದಿದೆ. ಕೊರೊನಾ ಮೊದಲ ಅಲೆಯಿಂದ ವ್ಯಾಪಾರ ವಹಿವಾಟು ನಷ್ಟವಾಯಿತು. ಈ ಬಾರಿಯಾದರೂ ಮದುವೆ ಸಮಾರಂಭಗಳು ಆರಂಭವಾಗುತ್ತಿವೆ.

ಉತ್ತಮ ವ್ಯಾಪಾರ ನಡೆಸಬೇಕು ಎಂಬ ನಿರೀಕ್ಷೆಯಲ್ಲಿದ್ದ ಉದ್ಯಮಿಗಳಿಗೆ ಕೊರೊನಾ ಎರಡನೇ ಅಲೆಯೂ ಶಾಕ್‌ ನೀಡಿದೆ. ಅಕ್ಷಯ ತೃತೀಯ ಮತ್ತು ರಂಜಾನ್‌ ಹಬ್ಬ ಹತ್ತಿರದಲ್ಲಿಯೇ ಇದ್ದು, ಜವಳಿ ಮತ್ತು ಸ್ವರ್ಣೋದ್ಯಮದಲ್ಲಿ ನಾವೆಲ್ಲ ನಿಯಮ ಪಾಲಿಸಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸಿ ವ್ಯಾಪಾರ ವಹಿವಾಟು ನಡೆಸಲು ಸಿದ್ಧರಿದ್ದೇವೆ. ಇದಕ್ಕೆ ಸರ್ಕಾರ ಕನಿಷ್ಠ ನಿತ್ಯ 2 ತಾಸು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಟಾಪ್ ನ್ಯೂಸ್

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16law

ಸರ್ಕಾರಿ ಶಾಲೆಯಲ್ಲಿ ಕಾನೂನು ಅರಿವು-ನೆರವು

ಸೈದಾಪುರ: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಸೈದಾಪುರ: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

16-protest

ಸಮಸ್ಯೆ ಶೀಘ್ರ ಸರಿಪಡಿಸದಿದ್ದರೆ ಜೆಸ್ಕಾಂ ಕಚೇರಿ ಎದುರು ಧರಣಿ

15devlop

ಆಶನಾಳ ಕೈಗಾರಿಕಾ ವಸಾಹತು ಅಭಿವೃದ್ದಿ ಮಾಡಿ

14demand

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 5ರಂದು ಪ್ರತಿಭಟನೆ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.