ಬಿತ್ತನೆ ಬೀಜ ಕೊರತೆ ಇಲ್ಲ
Team Udayavani, Jun 11, 2020, 8:01 AM IST
ಯಾದಗಿರಿ: ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದ್ದು, ರೈತರು ಬಿತ್ತನೆ ಬೀಜಕ್ಕಾಗಿ ಆತಂಕಪಡಬೇಕಾಗಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತಲ್ಪಡುವ ತೊಗರಿ, ಹೆಸರು ಬೀಜಗಳನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ಬಿತ್ತನೆ ಬೀಜ, ಪರಿಕರಗಳು ಲಭ್ಯ ಇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.