ಕೋವಿಡ್ ಹಿಮ್ಮೆಟ್ಟಿಸುವಲ್ಲಿ ಗ್ರಾಮೀಣ ಜನರ ಪಾತ್ರ


Team Udayavani, May 21, 2021, 12:20 PM IST

The role of rural people to repel covid

ಕೋವಿಡ್ ಮೊದಲನೇ ಅಲೆಯು ಬಹುತೇಕ ಪೇಟೆ ಪಟ್ಟಣಗಳಲ್ಲಿ ತನ್ನ ರೌದ್ರಾವತಾರ ತಾಳಿರುವುದನ್ನು ಗಮನಿಸಿದ್ದೇವೆ. ಎರಡನೇ ಅಲೆಯು ಗ್ರಾಮೀಣ ಭಾಗಗಳಲ್ಲೂ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಕೊರೊನಾ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಲು ಕಾರಣಗಳಾವುವು? ಗ್ರಾಮೀಣ ಭಾಗದ ಜನರು ಕೊರೊನಾದ ವಿರುದ್ಧ ಹೋರಾಡಲು ಏನು ಮಾಡಬೇಕು?. ಆಶ್ಚರ್ಯವಾದರೂ ಸತ್ಯ. ಕೊರೊನಾ ಭಾರತಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್‌ನಿಂದ ಬಹು ದೂರದಲ್ಲಿದ್ದವು. ಪ್ರಸ್ತುತ ಕೊರೊನಾ ಪೇಟೆ ಪಟ್ಟಣಗಳಿಂದ ನೇರವಾಗಿ ಗ್ರಾಮೀಣ ಭಾಗಕ್ಕೆ ಪ್ರವೇಶಿಸಿರುವುದು ನಿಜ.

ಎರಡನೇ ಅಲೆ ಮಾತ್ರ ತನ್ನ ಕಾರ್ಯವನ್ನು ಸದ್ದಿಲ್ಲದೆ ಹಳ್ಳಿಗಳಲ್ಲೂ ಸಾಧಿಸಿ ಅದೆಷ್ಟೋ ಹಿರಿಯರು, ಮಧ್ಯ ವಯಸ್ಕರನ್ನು ಬಲಿ ತೆಗೆದುಕೊಂಡಿರುವುದು ಸುಳ್ಳಲ್ಲ. ಇದಕ್ಕೆ ಹಳ್ಳಿ ಜನರಲ್ಲಿರುವ ತಿಳಿವಳಿಕೆಯ ಕೊರತೆ, ಅನಕ್ಷರತೆ, ಭಯ, ಮುಗ್ಧತೆಯೇ ಪ್ರಮುಖ ಕಾರಣಗಳು ಎನ್ನಬಹುದು

ಕೋವಿಡ್ ತಡೆಗೆ ಏನು ಮಾಡಬೇಕು?

1.ಹಳ್ಳಿಯಲ್ಲಿರುವ ಬಹುತೇಕ ಮಂದಿ ಮಾಸ್ಕ್ ಧರಿಸದೇ ಇರುವುದು. ಕೊರೊನಾ ವಿರುದ್ಧದ ಹೋರಾಟ ಯಶಸ್ಸಿಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇಬೇಕು. ಬಟ್ಟೆ ಮಾಸ್ಕ್ ಧರಿಸುತ್ತಿದ್ದರೆ ಪ್ರತಿನಿತ್ಯ ಬಿಸಿ ನೀರಿನಲ್ಲಿ ತೊಳೆದು ಸರಿಯಾದ ರೀತಿಯಲ್ಲಿ ಬಳಸಬೇಕು

2. ಸ್ಯಾನಿಟೈಸರ್‌ ಉಪಯೋಗಿಸದೇ ಇರುವುದು. ಹೊರಗಡೆ ಹೋಗಿ ಬಂದ ಕೂಡಲೇ ಸಾಬೂನ್‌ ಅಥವಾ ಹ್ಯಾಂಡ್‌ವಾಶ್‌ನಿಂದ ಸರಿಯಾಗಿ ಕೈ ತೊಳೆದುಕೊಳ್ಳುವುದನ್ನು ತಪ್ಪದೇ ಮಾಡಬೇಕು.

3.ಸ್ವತ್ಛತೆಯ ಬಗ್ಗೆ ಆದ್ಯತೆ ನೀಡಬೇಕು. ಸ್ನಾನ ಸೇರಿದಂತೆ ಸ್ವತ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸುವುದು ಮುಖ್ಯ.

4.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೊರಗಡೆ ಹೋಗದೆ ಇರುವುದು ಒಳಿತು.

5 ಸಮಯ ಸಿಕ್ಕಾಗ ಅಲ್ಲಲ್ಲಿ ಒಟ್ಟುಗೂಡಿ ಹರಟೆ ಹೊಡೆಯುವುದು ಈಗ ಸರಿಯಾದುದಲ್ಲ.

6.ಮದುವೆಯಂತಹ ಸಮಾರಂಭಗಳಲ್ಲಿ ಸರಕಾರದ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಅಂತಹ ಕಾರ್ಯಕ್ರಮಗಳಿಂದ ದೂರ ಇರುವುದು ಉತ್ತಮ. ಗ್ರಾಮೀಣ ಭಾಗಕ್ಕೆ ಯಾರೂ ಬರುವುದಿಲ್ಲ ಎಂದು ಜನ ಸೇರಿಸುವುದು ತಪ್ಪು.

7.ಕೊರೊನಾಕ್ಕೆ ವಯಸ್ಸು, ಜಾತಿ, ಧರ್ಮ, ಸ್ಥಳವೆನ್ನುವುದಿಲ್ಲ. ಅದೊಂದು ವೈರಸ್‌ ಜಾಗೃತೆ ವಹಿಸದೇ ಇದ್ದರೆ ಎಲ್ಲಿ, ಯಾರಿಗೆ ಬೇಕಾದರೂ ಹರಡಬಹುದು. ಆದುದರಿಂದ ತೀರಾ ಗ್ರಾಮಾಂತರದವರೂ ನಿರ್ಲಕ್ಷ್ಯ ವಹಿಸಲೇಬಾರದು.

ಇದನ್ನೂಓದಿ:ವೈಲೆಂಟ್ ಬಿಟ್ಟು ಸೈಲೆಂಟ್ ಆಗಿರೋಣ.. ಮಾನ್ವಿತಾ ಹೇಳಿದ ಲಾಕ್ ಡೌನ್ ಅನುಭವ

8.ಹಳ್ಳಿಗರಾದ ನಾವು ದುಡಿದು ತಿನ್ನುವವರಾದ ಕಾರಣದಿಂದ ನಮಗೆ ಬಾರದು ಎನ್ನುವ ತಪ್ಪು ಕಲ್ಪನೆ.

9.ಕೊರೊನಾ ಸುಳ್ಳು. ಇದು ಕೇವಲ ಸರಕಾರ, ಮಾಧ್ಯಮಗಳ ಸೃಷ್ಟಿ ಎನ್ನುವ ತಪ್ಪು ಕಲ್ಪನೆ

10.ಎಲ್ಲರೂ ಲಸಿಕೆ ಪಡೆಯುವುದು ಅನಿವಾರ್ಯ. ಸರಕಾರ ಕೋಟಿಗಟ್ಟಲೆ ವ್ಯಯಿಸಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಆದುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿ ಕೊಳ್ಳಲು ಲಸಿಕೆ ಪಡೆಯುವುದು ಅತ್ಯವಶ್ಯ.

11.ಲಸಿಕೆ ಪಡೆದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾವುದೇ ಹೊರತೂ ಇನ್ನಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ

12.ಈ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡರೆ ನಿರ್ಲಕ್ಷ್ಯಮಾಡದೆ ಮೆಡಿಕಲ್‌ ಗೆ ಹೋಗಿ ಮಾತ್ರೆ ತಿನ್ನುವುದನ್ನು ನಿಲ್ಲಿಸಬೇಕು. ಗ್ರಾಮೀಣ ಭಾಗದ ವೈದ್ಯರು ಶೀತ, ಜ್ವರ, ಕೆಮ್ಮಿಗೆ ಔಷಧ ನೀಡಿ, ಎರಡು ದಿನಗಳಲ್ಲಿ ಕಡಿಮೆಯಾಗದಿದ್ದರೆ, ಅತಿಯಾದ ಸುಸ್ತು, ರುಚಿಸದಿದ್ದರೆ, ವಾಸನೆ ಬಾರದೇ ಇದ್ದರೆ ಕೊರೊನಾ ಪರೀಕ್ಷಿಸಿಕೊಳ್ಳಿ ಎಂದು ಹೇಳಿಯೇ \ಹೇಳುತ್ತಾರೆ. ಇದನ್ನು ತಪ್ಪದೆ ಪಾಲಿಸಬೇಕು.

13.ಕೊರೊನಾ ಬಂದರೆ ಸೂಕ್ತ ಚಿಕಿತ್ಸೆ ಪಡೆದು 14 ದಿನಗಳ ಕಾಲ ಯಾರನ್ನೂ ಸಂಪರ್ಕಿಸದೆ ಮನೆಯೊಳಗಿರಬೇಕು. ಉಸಿರಾಟದ ಸಮಸ್ಯೆ ಎದುರಾದರೆ ಸಹಾಯವಾಣಿ/ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆ ಪಡೆಯುವತ್ತ ಗಮನಹರಿಸಬೇಕು.

ಜನರ ಸಹಕಾರ ಅಗತ್ಯ

ನಗರಗಳಿಗಿಂತಲೂ ವೇಗವಾಗಿ ಹಳ್ಳಿಗಳಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿರುವ ನೆಲೆಯಲ್ಲಿ ಸರಕಾರ ಪ್ರಸ್ತುತ ಗ್ರಾಮ ಆರೋಗ್ಯ ಪಡೆಗೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ರೋಗಿಗಳ ಪರೀಕ್ಷೆ, ಗೃಹ ಆರೈಕೆ, ಆಸ್ಪತ್ರೆ ಆರೈಕೆ ಬಗ್ಗೆ ತಿಳಿವಳಿಕೆ ನೀಡುವುದರೊಂದಿಗೆ ಜನರಿಗೆ ಎಲ್ಲಾ ರೀತಿಯ ಸಹಾಯ ನೀಡಲು ಗ್ರಾಮ ಆರೋಗ್ಯ ಪಡೆಗಳು ಸಜ್ಜಾಗಿವೆ. ಸ್ಥಳೀಯ ಜನಪ್ರತಿನಿಧಿಗಳು, ಗ್ರಾ.ಪಂ., ವೈದ್ಯಾಧಿಕಾರಿಗಳು, ಸಿಬಂದಿ ವರ್ಗ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಘ-ಸಂಸ್ಥೆಗಳನ್ನು ಹೊಂದಿರುವ ಕಾರ್ಯ ಪಡೆಯಿಂದ ಗ್ರಾಮಸ್ಥರು ಹೆಚ್ಚಿನ ಸಹಾಯ ಸಹಕಾರವನ್ನು ಪಡೆಯುವ ಮೂಲಕ ಕೊರೊನಾ ವೈರಸ್‌ ಅನ್ನು ಓಡಿಸಲು ಸನ್ನದ್ದರಾಗಬೇಕಾದುದು ಅನಿವಾರ್ಯ.

-ಡಾ| ನಾಗರತ್ನ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.