ಜಾಹೀರಾತಿಗಾಗಿ ಟೀವಿ ಚಾನೆಲ್‌ಗ‌ಳಿಗೆ ಜೈ ಎಂದ ಪಕ್ಷಗಳು

Team Udayavani, Apr 15, 2019, 6:30 AM IST

jatigagi-tv

ಮಣಿಪಾಲ: 2014 ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ರಾಜಕೀಯ ಪಕ್ಷಗಳ ಜಾಹೀರಾತು ಪರ್ವ ಜೋರಾಗಿಯೇ ಇದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಹಣವನ್ನು ಪಕ್ಷಗಳು ಖರ್ಚುಮಾಡುತ್ತಿವೆ. ಈ ಬಾರಿಯೂ ಟಿವಿ ಜಾಹೀರಾತುಗಳು ಮೊದಲ ಪ್ರಾಶಸ್ತ್ಯ ಪಡೆದಿದೆ.

ಪಕ್ಷಗಳು ಟಿವಿ ಮಾಧ್ಯಮದತ್ತ ಹೆಚ್ಚು ಮನಸ್ಸು ಮಾಡುತ್ತಿದ್ದು, ಇದರ ಪರಿಣಾಮವಾಗಿ ದ್ವಿತೀಯ ಸ್ಥಾನದಲ್ಲಿದ್ದ ರೇಡಿಯೋ ಮಾಧ್ಯಮದ ಶೇ. 5ರಷ್ಟು ಪಾಲನ್ನು ಟಿವಿ ಮಾಧ್ಯಮ ಪಡೆದು ಶೇ. 55ಕ್ಕೆ ಹೆಚ್ಚಿಸಿಕೊಂಡಿದೆ. ರೇಡಿಯೋ ಶೇ. 40ಕ್ಕೆ ಇಳಿಕೆ ಕಂಡಿದೆ. ಉಳಿದ ಮಾಧ್ಯಮ ಕ್ಷೇತ್ರಗಳತ್ತ ಜಾಹೀರಾತುಗಳು ಈ ಬಾರಿ ಹರಿದು ಬಂದಿಲ್ಲ. 2014ರಲ್ಲಿ ಶೇ. 48ರಷ್ಟಿದ್ದ ಟಿವಿ ಜಾಹೀರಾತುಗಳು ಈ ಬಾರಿ ಶೇ. 55ಕ್ಕೆ ವಿಸ್ತರಿಸಿದೆ. ವಿಶೇಷ ಎಂದರೆ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಮೊತ್ತವನ್ನು ಜಾಹೀರಾತಿಗೆ ವ್ಯಯಿಸು ತ್ತಿದ್ದು, ರಾಷ್ಟ್ರೀಯ ಪಕ್ಷಗಳು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಿಲ್ಲ.

ಆಂಧ್ರದಲ್ಲಿ ಅತೀ ಹೆಚ್ಚು!
ಈ ವರ್ಷ ಆಂಧ್ರ ಪ್ರದೇಶದಲ್ಲಿ ಅತೀ ಹೆಚ್ಚು ಎಂದರೆ ಶೇ.77 ಜಾಹೀರಾತುಗಳು ರಾಜಕೀಯ ಪಕ್ಷಗಳದ್ದಾಗಿದೆ. ಇದು ಟಿವಿ ಮಾಧ್ಯಮವೊಂದರ ಜಾಹೀರಾತು ಗಳಾಗಿವೆ. ತೆಲುಗು ದೇಶಂ ಪಾರ್ಟಿ (ಟಿಡಿಪಿ), ವೈಎಸ್‌ಆರ್‌ ಕಾಂಗ್ರೆಸ್‌ ಪೈಪೋಟಿಯಲ್ಲಿ ಜಾಹೀರಾತು ಮೊರೆ ಹೋಗಿವೆ. ಅದರಲ್ಲಿ ಟಿಡಿಪಿ ಪಾಲು ಶೇ.60ರಷ್ಟಿದ್ದು, ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಇದೆ. 3ನೇ ಸ್ಥಾನದಲ್ಲಿ ಶೇ.7ರಷ್ಟು ಹೊಂದಿರುವ ಕಾಂಗ್ರೆಸ್‌ ಹಾಗೂ 4ನೇ ಸ್ಥಾನದಲ್ಲಿ ಶೇ.4ರಷ್ಟು ಪಾಲು ಹೊಂದಿರುವ ಬಿಜೆಪಿಯಿದೆ.

ಮುದ್ರಣ ಮಾಧ್ಯಮ ಹೇಗಿದೆ?
ಪತ್ರಿಕೆಗಳ ಜಾಹೀರಾತುಗಳ ಸ್ವಲ್ಪ ಪಾಲು ದೃಶ್ಯ ಮಾಧ್ಯಮಗಳಿಗೆ ವರ್ಗಾ ವಣೆಯಾದ ಕಾರಣ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇಲ್ಲಿ ಮಾತ್ರ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಇದೆ. ಪತ್ರಿಕೆಗಳಲ್ಲಿ ಕಾಂಗ್ರೆಸ್‌ ಶೇ.23ರಷ್ಟು ಜಾಹೀರಾತು ಪಾಲನ್ನು ಹೊಂದಿದ್ದರೆ, ಬಿಜೆಪಿ ಶೇ.21ರಷ್ಟು ಪಾಲನ್ನು ಹೊಂದಿದೆ.

ರೇಡಿಯೋ ಪಾಲೆಷ್ಟು?
ರೇಡಿಯೋ ಜಾಹೀರಾತುಗಳನ್ನು ಬಿಜೆಪಿ ಅತಿಯಾಗಿ ನೆಚ್ಚಿಕೊಂಡಿದೆ. ಶೇ.88ರಷ್ಟು ಜಾಹೀರಾತು ಅದರದ್ದಾದರೆ, ಕಾಂಗ್ರೆಸ್‌ನದ್ದು ಇದರಲ್ಲಿ ಶೇ.2ರಷ್ಟು ಮಾತ್ರ ಇದೆ. ಆಮ್‌ಆದ್ಮಿ ಪಕ್ಷ ಶೇ.4ರಷ್ಟು ಪ್ರಚಾರ ಪಾಲು ಹೊಂದಿದೆ.

ಪ್ಲ್ರಾನ್‌ ಚೇಂಜ್‌
ಸಾಂಪ್ರದಾಯಿಕ ಮಾಧ್ಯಮಗಳ ಬದಲಿಗೆ ಸಾಮಾಜಿಕ ಜಾಲತಾಣ, ಅಂತರ್ಜಾಲ ಮೂಲಕವೂ ಪಕ್ಷಗಳು ಜಾಹೀರಾತು ನೀಡುತ್ತಿವೆ. ಈ ಬಾರಿ ಬಿಜೆಪಿ ಈ ವಿಚಾರದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಭಾರೀ ಮುನ್ನಡೆ ಕಾಯ್ದುಕೊಂಡಿದೆ.

ಟಾಪ್ ನ್ಯೂಸ್

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್‌

ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್‌

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್‌

ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್‌

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್‌

ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್‌

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ನೆರೆಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್‌

ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್‌

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

ಉಡುಪಿ: ದೈವಗಳ ಸೊತ್ತು ಕಳವು ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.