2020: ಅತೀ ಹೆಚ್ಚು ಲೈಕ್ ಪಡೆದ ವಿರಾಟ್, ಅನುಷ್ಕಾ ಟ್ವೀಟ್
ತಮ್ಮ ಮೊದಲ ಮಗುವಿನ ಆಗಮನದ ಕುರಿತಾಗಿ ಪೋಸ್ಟ್ ಮಾಡಿದ ಪೋಟೋ
Team Udayavani, Dec 8, 2020, 6:49 PM IST
ನವದೆಹಲಿ: ಭಾರತೀಯ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ತಮ್ಮ ಮೊದಲ ಮಗುವಿನ ಆಗಮನದ ಕುರಿತಾಗಿ ಪೋಸ್ಟ್ ಮಾಡಿದ ಪೋಟೋವನ್ನು ಇದೀಗ ಭಾರತದಲ್ಲಿ 2020ರ ಸಾಲಿನ ಅತೀ ಹೆಚ್ಚು ಲೈಕ್ ಪಡೆದ ಟ್ವೀಟ್ ಎಂದು ಟ್ವೀಟರ್ ಸಂಸ್ಥೆ ತಿಳಿಸಿದೆ.
ಕಳೆದ ಆಗಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅವರು ತಾವು ಮತ್ತು ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗಿರುವ ಪೋಟೋ ಒಂದನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಮತ್ತು ‘ಎಂಡ್ ದೆನ್ ವಿ ಆರ್ ಥ್ರೀ, ಅರೈವಿಂಗ್ ಜನವರಿ 2021’ ಎಂಬುದಾಗಿ ಬರೆದುಕೊಂಡಿದ್ದರು.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು ಲಕ್ಷಾಂತರ ಅಭಿಮಾನಿಗಳು ಕಾಮೆಂಟ್ ಹಾಗೂ ಲೈಕ್ ಗಳ ಮೂಲಕ ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದರು.
ಈ ನಡುವೆ ಟ್ವೀಟರ್ ಸಂಸ್ಥೆ ಈ ವರ್ಷ ಅತಿ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ಅನ್ನು ಪ್ರಕಟಿಸಿದ್ದು, ಎಲ್ಲರ ನಿರೀಕ್ಷೆಯಂತೆ #ಕೋವಿಡ್ 19 ಅತಿ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆ ಹೈಟೆಕ್ ಶಾಲೆಗಳಾಗಬೇಕು
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿ ಕಳೆದ ಡಿಸೆಂಬರ್ 2017 ರಲ್ಲಿ ಇಟೆಲಿಯ ಟಸ್ಕನಿಯಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ಆಸಿಸ್ ಜೊತೆಗಿನ ಟಿ20 ಸರಣಿಯಲ್ಲಿ ಬ್ಯೂಸಿ ಆಗಿರುವ ನಾಯಕ ವಿರಾಟ್ ಕೊಹ್ಲಿ ಇದಾದ ನಂತರ ಡಿಸೆಂಬರ್ 17 ರಿಂದ ಆರಂಭಗೊಳ್ಳಲಿರುವ ಆಸಿಸ್ ಸರಣಿಯ ಮೊದಲ ಟೆಸ್ಟ್ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?