ಕಾಸರಗೋಡು: ನಾಡಿನಾದ್ಯಂತ “ಓಣಂ” ಸಂಭ್ರಮ

Team Udayavani, Sep 6, 2019, 6:30 PM IST

ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯ ದೃಶ್ಯ

ಕಾಸರಗೋಡು: ಕೇರಳದ ರಾಷ್ಟ್ರೀಯ ಹಬ್ಬ “ಓಣಂ’ ಹಬ್ಬದ ಸಂಭ್ರಮಕ್ಕೆ ನಾಡು ಸಿದ್ಧಗೊಳ್ಳುತ್ತಿದೆ. ಇದರ ಅಂಗವಾಗಿ ಸಂಘ ಸಂಸ್ಥೆಗಳು, ವಿವಿಧ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಓಣಂ ಸಂಭ್ರಮಕ್ಕೆ ಅಣಿಯಾಗುತ್ತಿವೆ. ಈಗಾಗಲೇ ಅಲ್ಲಲ್ಲಿ ಓಣಂ ಸಂಭ್ರಮದ ಸಡಗರ ಆರಂಭಗೊಂಡಿದೆ.

ಪನಯಾಲ್‌ ನೆಲ್ಲಿಯಡ್ಕಂ ಸರಕಾರಿ ಎಲ್‌.ಪಿ. ಶಾಲೆಯಲ್ಲಿ ಓಣಂ ಹಬ್ಬದ ಸಂಭ್ರಮ ಮೇಳೈಸಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಹೂಗಳ ರಂಗೋಲಿ “ಪೂಕಳಂ’ ರಚಿಸಿ ಸಂಭ್ರಮಿಸಿದರು. ಹಬ್ಬದ ವಿಶೇಷವಾಗಿರುವ ಭೂರಿ ಭೋಜನ “ಸದ್ಯ’ವನ್ನು ಉಂಡು ವಿದ್ಯಾರ್ಥಿಗಳು, ಹೆತ್ತವರು, ಅಧ್ಯಾಪಕರು ಮತ್ತು ಸ್ಥಳೀಯರು, ಹಳೆ ವಿದ್ಯಾರ್ಥಿಗಳು ಪರಸ್ಪರ ಶುಭವನ್ನು ಕೋರಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಪನಯಾಲ್‌ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಎಂ.ವಾಮನ ಅಧ್ಯಕ್ಷತೆ ವಹಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೈ.ಕೃಷ್ಣದಾಸ್‌, ಮದರ್‌ ಪಿಟಿಎ ಅಧ್ಯಕ್ಷೆ ಕೆ.ಪುಷ್ಪಲತಾ, ಉಪಾಧ್ಯಕ್ಷೆ ಕೆ.ಜಯಲಕ್ಷ್ಮೀ, ಪಿಟಿಎ ಉಪಾಧ್ಯಕ್ಷ ಎನ್‌.ನಾರಾಯಣನ್‌, ಮುಖ್ಯೋಪಾಧ್ಯಾಯಿನಿ ನಾರಾಯಣಿ ಮೊದಲಾದವರು ಮಾತನಾಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ