ಸ್ವಚ್ಛತಾ ಅಭಿಯಾನದಿಂದ ಮಾತೃಭೂಮಿಯ ಆರಾಧನೆ: ಸ್ವಾಮಿ ಸತ್ಯೇಶಾನಂದಜಿ

ರಾಮಕೃಷ್ಣ ಮಿಷನ್‌ ಸ್ವತ್ಛ ಮಂಗಳೂರು ಅಭಿಯಾನ

Team Udayavani, Aug 13, 2019, 5:00 AM IST

r-33

ಮಹಾನಗರ: ರಾಮ ಕೃಷ್ಣ ಮಿಷನ್‌ ವತಿಯಿಂದ ಆಯೋಜಿ ಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 36ನೇ ಶ್ರಮದಾನವನ್ನು ಹಂಪನಕಟ್ಟೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.

ಸ್ವಾಮಿ ಜಿತಕಾಮಾನಂದಜಿ ಸಮ್ಮುಖ ದಲ್ಲಿ ಶ್ರಮದಾನಕ್ಕೆ ಬೇಲೂರು ರಾಮಕೃಷ್ಣ ಮಿಷನ್‌ನ ಟ್ರಸ್ಟಿ ಸ್ವಾಮಿ ಸತ್ಯೇಶಾನಂದಜಿ, ರಾಮಕೃಷ್ಣ ಮಿಷನ್‌ ಬೆಂಗಳೂರಿನ ಸ್ವಾಮಿ ಸೌಖ್ಯಾನಂದಜಿ ಅವರು ಗಣಪತಿ ಹೈಸ್ಕೂಲ್‌ ರಸ್ತೆಯಲ್ಲಿರುವ ಶ್ರೀಕೃಷ್ಣ ಭವನ ಆಟೋ ನಿಲ್ದಾಣದ ಮುಂಭಾಗದಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಸ್ವಾಮಿ ಸತ್ಯೇಶಾನಂದಜಿ ಸ್ವಾಮಿ, ವಿವೇಕಾನಂದರ ಪ್ರಕಾರ ಮಾತೃಭೂಮಿಯೇ ನಿಜವಾದ ದೇವರು ಅದನ್ನು ಆರಾಧಿಸಿ, ಪೂಜಿಸಬೇಕು ಎನ್ನುವುದು ಅವರ ಆಶಯವಾಗಿತ್ತು. ಸ್ವಚ್ಛತಾ ಅಭಿಯಾನ ಮೂಲಕ ಇಲ್ಲಿ ನಿಜವಾದ ಮಾತೃಭೂಮಿಯ ಆರಾಧನೆ ನಡೆಯುತ್ತಿದೆ. ಇದರಲ್ಲಿ ನಮ್ಮ, ದೇಶದ ಕಲ್ಯಾಣ ಅಡಗಿದೆ. ದೈವತ್ವದ ಅನಂತರ ಪರಿಶುದ್ಧತೆ ಎನ್ನುತ್ತಾರೆ ಆದರೆ ದೈವತ್ವ ಮತ್ತು ಪರಿಶುದ್ಧತೆ ಎರಡೂ ಒಂದೇ ಆಗಿವೆ. ಸ್ವಚ್ಛತೆ ಮಾಡುತ್ತಾ ಮಾಡುತ್ತಾ ನಾವು ಪರಿಶುದ್ಧರಾಗುತ್ತೇವೆ. ನಮ್ಮ ಉನ್ನತಿಯಾಗುತ್ತದೆ ಎಂದು ತಿಳಿಸಿ ಶುಭಹಾರೈಸಿದರು.

ವಿಶೇಷ ಆಹ್ವಾನಿತರಾಗಿದ್ದ ಬೆಂಗಳೂರು ಯೂಥ್‌ ಫಾರ್‌ ಸೇವಾ ಸ್ವಾತಿ ರಾಮ್‌ ಮಾತನಾಡಿ, ಸ್ವತ್ಛತೆಯನ್ನು ನಾವು ಉಪೇಕ್ಷೆ ಮಾಡಿರುವುದರ ಪರಿಣಾಮ ಇಂದು ಸ್ವಚ್ಛತೆಯನ್ನು ಅಭಿಯಾನದ ರೂಪದಲ್ಲಿ ಮಾಡಬೇಕಿದೆ. ಯಾವ ಕಾರ್ಯವೂ ನಿಕೃಷ್ಟ ಅಥವಾ ಶ್ರೇಷ್ಠವಲ್ಲ ಎಲ್ಲವೂ ಉತೃಷ್ಟ ಕಾರ್ಯಗಳೆ ಆಗಿರುತ್ತವೆ. ಅದು ನಮ್ಮ ಮನಸ್ಸುಗಳನ್ನು ಅವಲಂಬಿಸಿಕೊಂಡಿರುತ್ತವೆ. ಪ್ರತಿವಾರ ಸ್ವಯಂಸೇವಕರು ಸ್ವಯಂಸ್ಫೂರ್ತಿಯಿಂದ ಪಾಲ್ಗೊಂಡು ಸ್ವಚ್ಛತೆಯ ಕೈಂಕರ್ಯ ಮಾಡುತ್ತಿರುವುದು ಅತ್ಯಂತ ಸೋಜಿಗ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯ ಬೇರೆ ನಗರದಲ್ಲಿರುವ ಜನರಿಗೂ ಸ್ಫೂರ್ತಿ ನೀಡುವಂತಾಗಲಿ ಎಂದರು.

ಸುಲತಾ ಭಟ್‌, ರಾಜೀವ ಚಂದ್ರ ಶೇಖರ್‌, ರಾಜೇಶ್‌ ಬಿ.ಕೆ., ಬಾಲಕೃಷ್ಣ ಭಟ್‌, ಸುಭೋದಯ ಆಳ್ವ ಇನ್ನಿತರ ಸ್ವಯಂಸೇವಕರು ಭಾಗಿಯಾಗಿದ್ದರು.
ಮಾಜಿ ಶಾಸಕ ಕ್ಯಾ| ಗಣೇಶ್‌ ಕಾರ್ಣಿಕ್‌ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವನೆಗೈದರು.

ಶ್ರಮದಾನ
36ನೇ ಶ್ರಮದಾನಕ್ಕೆ ಚಾಲನೆ ನೀಡಿದ ಬಳಿಕ ಸ್ವಾಮಿಜಿಗಳು ಕಾರ್ಯ ಕರ್ತರೊಂದಿಗೆ ಪೊರಕೆ ಹಿಡಿದು ಕಸಗುಡಿಸಿದರು. ಇದಕ್ಕೂ ಮೊದಲು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸ್ವಯಂ ಸೇವಕರನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು. ಮೊದಲಿಗೆ ಶ್ರೀಕೃಷ್ಣ ಭವನ ಆಟೋ ಚಾಲಕರು ಆಟೋ ನಿಲ್ದಾಣದ ಪಕ್ಕದಲ್ಲಿದ್ದ ಸ್ಥಳವೊಂದರಲ್ಲಿ ಬಿಸಾಡುತ್ತಿದ್ದ ತ್ಯಾಜ್ಯರಾಶಿಯನ್ನು ತೆರವು ಮಾಡಿದರು. ಪಾರ್ಕಿಂಗ್‌ ಸ್ಥಳದಲ್ಲಿ ಅಡಾªದಿಡಿªಯಾಗಿ ಬಿದ್ದುಕೊಂಡಿದ್ದ ಕಲ್ಲುಗಳನ್ನು ತೆಗೆದು ನೆಲವನ್ನು ಸಮತಟ್ಟುಗೊಳಿಸಿದರು. ಬಳಿಕ ಅಲ್ಲಿ ಹೂಗಿಡಗಳನ್ನಿಟ್ಟು ಅಂದ ಗೊಳಿಸಿದರು. ಸೋಮನಾಥ್‌ ಕುಲಶೇಖರ್‌, ನವೀನ್‌ ಮಂಕಿಸ್ಟಾಂಡ್‌, ಗಣೇಶ್‌ ಬೋಳಾರ್‌, ಪುರುಷೋತ್ತಮ ಮರೋಳಿ, ಚಂದಯ್ಯ ಮರೋಳಿ, ಅನೇಕ ಆಟೋ ಚಾಲಕರು ಭಾಗಿಯಾಗಿ ಶ್ರಮದಾನ ಮಾಡಿದರು.

ಮತ್ತೂಂದು ತಂಡ ಕೊಡಂಗೆ ಬಾಲಕೃಷ್ಣ ನಾೖಕ್‌ ಜತೆಗೂಡಿ ಲೈಟ್‌ ಹೌಸ್‌ ಹಿಲ್‌ ರಸ್ತೆಯ ತಿರುವಿನ ವೃತ್ತದಲ್ಲಿ ಹಾಕಲಾಗಿದ್ದ ಕಸವನ್ನು ತೆಗೆದು ಸ್ವತ್ಛ ಮಾಡಿದರು. ವಿಶ್ವವಿದ್ಯಾನಿಲಯ ಕಾಲೇಜು, ವೆನಲಾಕ್ ಆಸ್ಪತ್ರೆಯ ಆವರಣ ಗೋಡೆಗಳ ಮೇಲೆ ರಚಿಸಲಾಗಿದ್ದ ಚಿತ್ರಗಳಿಗೆ ಮಳೆಯಿಂದಾಗಿ ಅಲ್ಲಲ್ಲಿ ಪಾಚಿ ಕಟ್ಟಿಕೊಂಡಿತ್ತು. ಇಂದು ಅದನ್ನು ಸ್ವಯಂ ಸೇವಕರು ತೊಳೆದು ಸ್ವತ್ಛಗೊಳಿಸಿದರು. ಮುಂದಿನ ವಾರವೂ ಈ ಕಾರ್ಯ ಮುಂದುವರಿಯಲಿದೆ. ನಾಲ್ಕನೇ ತಂಡ ಉಮಾಕಾಂತ ಸುವರ್ಣ ನೇತೃತ್ವದಲ್ಲಿ ರಸ್ತೆ ವಿಭಾಜಕಗಳನ್ನು ಸ್ವತ್ಛಗೊಳಿಸಿ ವಿನೂತನವಾದ ವಿಭಾಜಕಗಳನ್ನು ಇಡಲಾಯಿತು. ಮುಂದಿನ ದಿನಗಳಲ್ಲಿ ಆ ವಿಭಾಜಕಗಳಲ್ಲಿ ಹೂಗಿಡಗಳನ್ನು ನೆಡಲು ಯೋಜಿಸಲಾಯಿತು.

ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌.ಪಿ.ಎಲ್‌. ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಸ್ವಯಂ ಸೇವಕರಿಂದ ರಸ್ತೆ ರಿಪೇರಿ
ಹಂಪನಕಟ್ಟೆ ವಿಶ್ವವಿದ್ಯಾನಿಲಯದ ಎದುರಿನಿಂದ ಜಿ.ಎಚ್‌.ಎಸ್‌ ರಸ್ತೆಯಲ್ಲಿ ಎಡಬದಿಯಲ್ಲಿ ಹೊರಳುವ ರಸ್ತೆಯಲ್ಲಿ ಹಾಕಲಾಗಿದ್ದ ಇಂಟರ್‌ ಲಾಕ್‌ ಕುಸಿದು ಹೋಗಿತ್ತು. ಮಳೆಗಾಲದ ಈ ದಿನಗಳಲ್ಲಿ ಅನೇಕ ಅಪಘಾತಗಳಾಗುತ್ತಿದ್ದವು. ಇದನ್ನು ಗಮನಿಸಿದ ಸ್ವಚ್ಛ ಮಂಗಳೂರು ಸ್ವಯಂ ಸೇವಕರು ನುರಿತ ಕೆಲಸದವರ ಸಹಾಯ ಪಡೆದು ಕುಸಿದುಹೋಗಿದ್ದ ಇಂಟರ್‌ಲಾಕ್‌ ತೆಗೆದು, ಆವಶ್ಯಕ ಮರಳು ತುಂಬಿಸಿ ಅವಶ್ಯವಿದ್ದಡೆ ಹೊಸ ಇಂಟರ್‌ಲಾಕ್‌ ಅಳವಡಿಸಿದ್ದಾರೆ. ಇದೀಗ ಅಲ್ಲಿ ಸುಗಮ ಸಂಚಾರವೂ ಸಾಧ್ಯವಾಗಿ ವಾಹನಗಳ ದಟ್ಟಣೆಯೂ ಕಡಿಮೆಯಾಗಿದೆ. ಅಲ್ಲದೇ ಸ್ಥಳಿಯ ಶಾಸಕ ವೇದವ್ಯಾಸ್‌ ಕಾಮತ್‌ ಪ್ರಶಂಸೆಯನ್ನು ವ್ಯಕ್ತಪಡಿಸಿ, ರಾಮಕೃಷ್ಣ ಮಿಷನ್‌ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ಉಮಾನಾಥ್‌ ಕೋಟೆಕಾರ್‌, ದಿಲ್‌ರಾಜ್‌ ಆಳ್ವ ಮುತುವರ್ಜಿಯಲ್ಲಿ ಈ ರಸ್ತೆ ರಿಪೇರಿ ಕಾರ್ಯ ನಡೆಯಿತು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.