ಇಂದು- ನಾಳೆ ಮಂಗಳೂರು-ಬೆಂಗಳೂರು ರೈಲು ಓಡಾಟ ಸ್ಥಗಿತ

Team Udayavani, Jul 20, 2019, 11:33 AM IST

ಸುಬ್ರಹ್ಮಣ್ಯ:  ಮಂಗಳೂರು – ಬೆಂಗಳೂರು ನಡುವಿನ ರೈಲು ಓಡಾಟವನ್ನು ಶನಿವಾರ ಮತ್ತು ರವಿವಾರ ಸ್ಥಗಿತಗೊಳಿಸಲಾಗಿದೆ.

ಶಿರಾಡಿ ಘಾಟ್‌ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಭಂಡ ಬಳಿ ರೈಲು ಹಳಿಗಳ ಬಳಿ ಇರುವ ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ.

ಘಾಟಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳಿ ಬಿಳುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಅಪಾಯ ಸಂಭವಿಸುವ ಮುನ್ನವೇ ರೈಲ್ವೇ ಇಲಾಖೆ ಎಚ್ಚೆತ್ತಿದ್ದು, ಬಂಡೆ ತೆರವಿಗೆ ಸಿದ್ದತೆ ನಡೆಸಿದೆ.

ಕಳೆದ ವರ್ಷ ಕುಸಿದಿತ್ತು
ಕಳೆದ ವರ್ಷದ ಮಳೆಗಾಲದಲ್ಲಿ ಭಾರಿ ಮಳೆಗೆ ಸುಬ್ರಹ್ಮಣ್ಯ – ಸಿರಿಬಾಗಿಲು ನಡುವಿನ ಕಿ.ಮೀ 86ರ ಹಳಿಯ ಮೇಲೆ ಭೂ ಕುಸಿತ ಸಂಭವಿಸಿ 110 ಮೀ ದೂರ, 25 ಮೀ. ಎತ್ತರಕ್ಕೆ ಮಣ್ಣು ಬಿದ್ದು, ಸುರಂಗದ ಪ್ರವೇಶ ದ್ವಾರ ಮಣ್ಣು ಮುಚ್ಚಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ