ಭುವನೇಂದ್ರ ಕಿದಿಯೂರು ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ

Team Udayavani, Jun 12, 2019, 12:19 PM IST

ಮಲ್ಪೆ: ಸ್ವ ಪ್ರಯತ್ನ, ದೇವರ ಅನುಗ್ರಹ ಮತ್ತು ಸಮಾಜದ ಸಹಕಾರ ಇದ್ದರೆ ಮಾತ್ರ ಯಾವುದೇ ಒಬ್ಬ ವ್ಯಕ್ತಿ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಈ ದಾರಿಯಲ್ಲಿ ಸಾಗಿ ಎಲ್ಲರನ್ನು ತನ್ನಡೆಗೆ ಆಕರ್ಷಿಸುವ, ಸೇವಾ ಮನೋಭಾವದ ಶ್ರೀಕೃಷ್ಣನ ಪರಮ ಭಕ್ತ ಭುವನೇಂದ್ರ ಕಿದಿಯೂರು ಶ್ರೀಕೃಷ್ಣನಂತೆ ಸರ್ವಜನ ಪ್ರಿಯರಾದವರು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ನುಡಿದರು.

ಅವರು ಸೋಮವಾರ ಉಡುಪಿ ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಅವರ ಜನ್ಮದಿನದ ಪ್ರಯುಕ್ತ ನಡೆದ ಅಭಿನಂದನೆ ಸಮಾರಂಭ ಮತ್ತು ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಕೊಡಮಾಡಿದ “ಧರ್ಮ ರತ್ನಾಕರ’ ಪ್ರಶಸ್ತಿಯನ್ನು ಭುವನೇಂದ್ರ ಕಿದಿಯೂರು ಅವರಿಗೆ ನೀಡಿ ಆಶೀರ್ವಚನ ನೀಡಿದರು.

ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವ ಚನ ನೀಡಿ, ಕೇವಲ ತನ್ನ ಉದರವನ್ನು ಮಾತ್ರ ಪೋಷಿಸುತ್ತಿದ್ದರೆ ಅದು ಬದುಕು ಅಲ್ಲ. ಸಮಾಜದಲ್ಲಿ ಇನ್ನೂ 10 ಮಂದಿಯ ಬದುಕನ್ನು ರೂಪಿ ಸುವ ಜವಾಬ್ದಾರಿ ಹೊತ್ತರೆ ಮಾತ್ರ ನಿಜವಾದ ಬದುಕು ಎಂದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌, ಜೋತಿಷ ವಿದ್ವಾನ್‌ ಕಬ್ಯಾಡಿ ಜಯ ರಾಮ ಆಚಾರ್ಯ, ಕಿದಿಯೂರು ಹೊಟೇಲಿನ ನಿರ್ದೇಶಕಿ ಹೀರಾ ಬಿ. ಕಿದಿಯೂರು, ಡಾ| ಯಜ್ಞೆàಶ್‌ ಬಿ. ಕಿದಿಯೂರು, ಡಾ| ಬೃಜೇಶ್‌ ಬಿ. ಕಿದಿಯೂರು, ಡಾ| ಭವ್ಯಶ್ರೀ ಕಿದಿಯೂರು, ಡಾ| ಅಭಿನ್‌ ದೇವದಾಸ್‌, ಯುವರಾಜ್‌ ಮಸ್ಕತ್‌, ಹಿರಿಯಣ್ಣ ಟಿ. ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

ಜಿತೇಶ್‌ ಕಿದಿಯೂರು ಸ್ವಾಗತಿಸಿ ದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ ಕಿದಿಯೂರು ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ