ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

ಮಾಸ್‌ ಪಾತ್ರಕ್ಕೆ ಬೇಕಾದಂತೆ ಕಿಕ್‌ ಬಾಕ್ಸಿಂಗ್‌, ಮಾರ್ಷಲ್‌ ಆರ್ಟ್ಸ್ ಪ್ರಾಕ್ಟಿಸ್‌ ಮಾಡುತ್ತಿದ್ದೇನೆ

Team Udayavani, Aug 19, 2022, 12:04 PM IST

ರಗಡ್‌ ಲುಕ್‌ ನಲ್ಲಿ ಕನ್ನಡತಿ ಹೀರೋ ; ಕಿರಣ್‌ ರಾಜ್‌ ಸ್ಕ್ರೀನ್‌ ಶೇರ್‌

ಕಿರುತೆರೆಯ “ಕನ್ನಡತಿ’ ಖ್ಯಾತಿಯ ನಟ ಕಿರಣ್‌ ರಾಜ್‌ ನಿಧಾನವಾಗಿ ಹಿರಿತೆರೆಯತ್ತ ಮುಖ ಮಾಡುತ್ತಿದ್ದು, ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ “ಬಡ್ಡೀಸ್‌’ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದ ಕಿರಣ್‌ ರಾಜ್‌, ಈಗ ಮತ್ತೂಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಕಿರಣ್‌ ರಾಜ್‌ “ಶೇರ್‌’ ಎಂಬ ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಈ ಸಿನಿಮಾ
ಮುಹೂರ್ತವನ್ನು ಆಚರಿಸಿಕೊಂಡಿದೆ.

ಈ ಹಿಂದೆ “ರತ್ನ ಮಂಜರಿ’, “ಭರ್ಜರಿ ಗಂಡು’ ಸಿನಿಮಾವನ್ನು ನಿರ್ದೇಶಿಸಿದ್ದ ಪ್ರಸಿದ್ಧ್, “ಶೇರ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಡಾ. ಸುದರ್ಶನ್‌. ಸುಂದರರಾಜ್‌ “ಶೇರ್‌’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. “ಶೇರ್‌’ ಚಿತ್ರದಲ್ಲಿ ಕಿರಣ್‌ ರಾಜ್‌ಗೆ ಸುರೇಖಾ ನಾಯಕಿಯಾಗಿ ಜೋಡಿಯಾಗಿದ್ದು ಉಳಿದಂತೆ ರಂಗಾಯಣ ರಘು, ಶೋಭರಾಜ್‌, ತನಿಶಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಮುಹೂರ್ತದ ಬಳಿಕ ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಕಿರಣ್‌ ರಾಜ್‌, “ಇದೊಂದು ಪಕ್ಕಾ ಆ್ಯಕ್ಷನ್‌ -ಥ್ರಿಲ್ಲರ್‌ ಸಿನಿಮಾ. ಫ‌ಸ್ಟ್‌ಟೈಮ್‌ ರಗಡ್‌ ಆಗಿ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಾನವ ಕಳ್ಳಸಾಗಣೆ ಮತ್ತು ಅಂಗಾಂಗ ಕಳ್ಳ ಸಾಗಣಿಕೆಯ ವಿಷಯಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಮಾಸ್‌ ಪಾತ್ರಕ್ಕೆ ಬೇಕಾದಂತೆ ಕಿಕ್‌ ಬಾಕ್ಸಿಂಗ್‌, ಮಾರ್ಷಲ್‌ ಆರ್ಟ್ಸ್ ಪ್ರಾಕ್ಟಿಸ್‌ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ನೋಡಿರದ ಹೊಸಥರದ ಲುಕ್‌ ಈ
ಸಿನಿಮಾದಲ್ಲಿ ನೋಡಬಹುದು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

“ಈ ಸಿನಿಮಾದಲ್ಲಿ ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಇದೆ. ಬೆಂಗಳೂರು, ಚಿಕ್ಕಬಳ್ಳಾಪುರ ಸುತ್ತಮುತ್ತ ಬಹುತೇಕ ಶೂಟಿಂಗ್‌ ನಡೆಯಲಿದೆ. ಅಂದುಕೊಂಡಂತೆ ನಡೆದರೆ, ಏಳೆಂಟು ತಿಂಗಳಲ್ಲಿ “ಶೇರ್‌’ ಸಿನಿಮಾವನ್ನು ರಿಲೀಸ್‌ ಮಾಡುವ ಯೋಚನೆಯಿದೆ’ ಎಂದರು ನಿರ್ದೇಶಕ ಪ್ರಸಿದ್ಧ್.

ನಾಯಕಿ ಸುರೇಖಾ, ನಟಿ ತನೀಶಾ, ನಿರ್ಮಾಪಕ ಡಾ. ಸುದರ್ಶನ್‌ ಸುಂದರರಾಜ್‌ ಸೇರಿದಂತೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು “ಶೇರ್‌’ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. “ಶೇರ್‌’ ಸಿನಿಮಾಕ್ಕೆ ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಮುಹೂರ್ತ ಆಚರಿಸಿಕೊಂಡಿರುವ “ಶೇರ್‌’ ಚಿತ್ರತಂಡ, ಇದೇ ಆ. 22 ರಿಂದ ಮೊದಲ ಹಂತದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ.

ಟಾಪ್ ನ್ಯೂಸ್

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

6

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಬೀಳ್ಕೊಡುಗೆ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ:  ಕೆ.ಎಸ್.ಈಶ್ವರಪ್ಪ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ: ಕೆ.ಎಸ್.ಈಶ್ವರಪ್ಪ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

5

ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೇಳಬೇಕು: ಅರುಣ್ ಸಿಂಗ್ ಆಗ್ರಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mitra

ಮಿತ್ರ ಮಂಡಳಿ ಹೊಸ ಕನಸು

‘ಕುಳ್ಳನ ಹೆಂಡತಿ’ ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ

‘ಕುಳ್ಳನ ಹೆಂಡತಿ’ ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ

ಅಪ್ಪು ನೆನಪಲ್ಲಿ ‘ಬಾಂಡ್ ರವಿ’; ಪ್ರಮೋದ್ ಚಿತ್ರದ ಟೀಸರ್ ಗೆ ಮೆಚ್ಚುಗೆ

ಅಪ್ಪು ನೆನಪಲ್ಲಿ ‘ಬಾಂಡ್ ರವಿ’; ಪ್ರಮೋದ್ ಚಿತ್ರದ ಟೀಸರ್ ಗೆ ಮೆಚ್ಚುಗೆ

‘ರೂಪಾಯಿ’ ನಂಬಿದ ಹೊಸಬರು

‘ರೂಪಾಯಿ’ ನಂಬಿದ ಹೊಸಬರು

ತೋತಾಪುರಿ ಜೋಡಿಯ ದಸರಾ ನಂಟು; ನಿರೀಕ್ಷೆ ಹೆಚ್ಚಿಸಿದ ಹಿಟ್ ಜೋಡಿ

‘ತೋತಾಪುರಿ’ ಜೋಡಿಯ ದಸರಾ ನಂಟು; ನಿರೀಕ್ಷೆ ಹೆಚ್ಚಿಸಿದ ಹಿಟ್ ಜೋಡಿ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

7

ಕೊರಟಗೆರೆ: ಎರಡು ಬೈಕ್ ಗಳ ನಡುವೆ ಅಪಘಾತ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

6

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಬೀಳ್ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.