ಸಾದಿಕ್ ಪಾಳ್ಯ ಘಟನೆಯನ್ನು ಖಂಡಿಸುತ್ತೇನೆ: ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ
Team Udayavani, Apr 2, 2020, 6:09 PM IST
ಬೆಂಗಳೂರು: ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯ ವಿರುದ್ಧ ನಡೆದ ಘಟನೆಯನ್ನು ಖಂಡಿಸುತ್ತೇನೆ. ನಾನು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷನಾಗಿ ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.
ಸಾದಿಕ್ ಪಾಳ್ಯದಲ್ಲಿ ಆರೋಗ್ಯ ಮಾಹಿತಿ ಪಡೆಯಲು ಹೋದ ಆಶಾ ಕಾರ್ಯಕರ್ತೆಗೆ ಹಲ್ಲೆ ನಡೆಸಲಾಗಿತ್ತು.
ಆಶಾ ಕಾರ್ಯಕರ್ತೆಯರು ಆರೋಗ್ಯದ ಮಾಹಿತಿ ಪಡೆಯಲು ಬಂದಿದ್ದರು. ಅವರಿಗೆ ಮಾಹಿತಿ ಕೊಡಬೇಕು. ಅದೇ ರೀತಿ ದೆಹಲಿಯ ನಿಜಾಮುದ್ದೀನ್ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸುದ್ದವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ನಿಮ್ಮ ಕುಟುಂಬ ಹಾಗೂ ಬಂಧುಗಳಿಗೂ ಒಳ್ಳೆಯದು. ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.
ನೀವೇ ಖುದ್ದಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್-19 ಸೋಂಕಿನಿಂದ ಇಡೀ ಜಗತ್ತು ಆತಂಕದಲ್ಲಿದೆ. ಹಿಂದೆಂದೂ ನಾವು ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಇಂತಹಾ ಸಂಧರ್ಭದಲ್ಲಿ ನಾವು ಜಾತಿ, ಧರ್ಮ ಬೇಧ ಭಾವ ಮಾಡದೇ ಇದರ ವಿರುಧ್ಧ ಹೋರಾಡಬೇಕಿದೆ ಎಂದು ಅಬ್ದುಲ್ ಅಜೀಂ ಕರೆ ನೀಡಿದ್ದಾರೆ.