ಸಾಲ ನೀಡದ ಸಿಟ್ಟಿಗೆ ಪೆಟ್ರೋಲ್ ಸುರಿದು ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ
Team Udayavani, Jan 9, 2022, 6:16 PM IST
ಹಾವೇರಿ: ಸಾಲ ನೀಡಲಿಲ್ಲ ಎಂಬ ಸಿಟ್ಟಿಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬ್ಯಾಂಕ್‌ಗೆ ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.
ಬ್ಯಾಂಕಿಗೆ ಬೆಂಕಿ ಹಚ್ಚಿದ ಭೂಪನನ್ನು ರಟ್ಟಿಹಳ್ಳಿಯ ನಿವಾಸಿ 33 ವರ್ಷದ ವಸೀಮ್ ಎಂದು ಗುರುತಿಸಲಾಗಿದೆ.
ಆರೋಪಿ ಬೆಳಗಿನ ಜಾವ ಹೆಡಿಗ್ಗೊಂಡ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ.
ಓಟ ಕೀಳುತ್ತಿರುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದುಆರೋಪಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಸುಟ್ಟಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ
ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ
ಆಸ್ಪತ್ರೆಗಳಲ್ಲಿ ನಾರ್ಮಲ್ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಹೆಚ್ಚಳ : ಅಡಳಿತಾಧಿಕಾರಿ ಕಳವಳ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!